ಸೇನೆಯಲ್ಲಿ ಶೇ. 49 ರಷ್ಟು ಮಹಿಳಾ ಅಧಿಕಾರಿಗಳು ಖಾಯಂ ಸೇವೆಗೆ

ನವದೆಹಲಿ, ನ. 20: ಮಹಿಳಾ ಅಧಿಕಾರಿಗಳನ್ನೂ ಕೂಡ ಖಾಯಂ ನೇಮಕಾತಿಗೆ ಪರಿಗಣಿಸಬೇಕು ಎಂದು ೨೦೨೦ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಭಾರತೀಯ ಸೇನೆಯಲ್ಲಿ ಖಾಯಂ ನೇಮಕಾತಿ ಪರಿಗಣನೆಗೆ ತೆಗೆದುಕೊಂಡಿದ್ದ ಮಹಿಳಾ ಅಧಿಕಾರಿಗಳಲ್ಲಿ ಶೇ. 49ರಷ್ಟು ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ವಿಶೇಷ ಆಯ್ಕೆ ಸಮಿತಿ ಅಭ್ಯರ್ಥಿಗಳ ನೇಮಕಾತಿ ಪರಿಶೀಲನೆ ನಡೆಸಿತ್ತು. ಶಾರ್ಟ್‌ ಸರ್ವೀಸ್‌ ಕಮಿಷನ್‌ನ ಸ್ಪೆಷಲ್‌ ನಂಬರ್‌ ೫ ಸೆಲೆಕ್ಷನ್‌ ಬೋಡ್‌Fನ ಫಲಿತಾಂಸವನ್ನು ಭಾರತೀಯ ಸೇನೆ ಇತ್ತೀಚೆಗೆ ಪ್ರಕಟಿಸಿದೆ. 615 ಮಹಿಳಾ ಅಧಿಕಾರಿಗಳ ಪೈಕಿ 300 ಅಧಿಕಾರಿಗಳನ್ನು ಖಾಯಂ ನೇಮಕಾತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆಯ್ಕೆಯ ಮಾನದಂಡಗಳು ಹಾಗೂ ವೈದ್ಯಕೀಯ ಪರೀಕ್ಷೆಗಳಲ್ಲಿ ವಿಫಲರಾದ ಮಹಿಳಾ ಅಧಿಕಾರಿಗಳು ವರ್ಷದ ಸೇವಾವಧಿ ಮುಗಿದ ಬಳಿಕ ನಿವೃತ್ತಿಯನ್ನು ಹೊಂದಲಿದ್ದಾರೆ. ಆದರೆ ಅವರು ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಭಾರತೀಯ ಸೇನೆ  ತಿಳಿಸಿದೆ.

Exit mobile version