Bangalore: ಹಾಸನದ ಲೈಂಗಿಕ ಶೋಷಣೆ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಸಾಮಾಜಿಕ (sexual videos Sharing is offence SIT) ಜಾಲತಾಣ ಅಥವಾ ಯಾವುದೇ ವಿಧಾನದ ಮೂಲಕ
ಹಂಚುವುದುಶಿಕ್ಷಾರ್ಹ ಅಪರಾಧ ಎಂದು ವಿಶೇಷ ತನಿಖಾ ತಂಡ ಮುಖ್ಯಸ್ಥ ಬಿ.ಕೆ.ಸಿಂಗ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಹಾಸನದ ಲೈಂಗಿಕ ಶೋಷಣೆ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಂಚಿಕೊಳ್ಳುವುದು ರಾಜ್ಯ
ಮಾಹಿತಿ ತಂತ್ರಜ್ಞಾನ ಕಾಯಿದೆಯ 67(A) IT ಆಕ್ಟ್ ಹಾಗೂ 228A(1), 292 IPC ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಖಾಸಗಿ ಮೆಸೇಜಿಂಗ್ ಆಪ್ಗಳ (Private messaging apps) ಮುಖಾಂತರ ಹಂಚಿದರೆ
ಅದನ್ನು ಕೂಡಾ ಪತ್ತೆ ಹಚ್ಚಲಾಗುವುದು. ಅವರ ವಿರುದ್ಧವೂ ಕೂಡಾ ಕಠಿಣ ಕಾನೂನು ಕ್ರಮ (sexual videos Sharing is offence SIT) ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸಂತ್ರಸ್ಥೆಯರಿಗೆ ಸಹಾಯವಾಣಿ :
ಹಾಸನ ಲೈಂಗಿಕ ಶೋಷಣೆ ಪ್ರಕರಣದ (Hassan sexual exploitation case) ಯಾವುದೇ ಸಂತ್ರಸ್ಥೆಯೂ ನಮ್ಮ ಸಹಾಯವಾಣಿ 63609 38947ಗೆ ಬೆಳಿಗ್ಗೆ 8 ರಿಂದ ರಾತ್ರಿ 8ರ ನಡುವೆ ಸಂಪರ್ಕಿಸಬಹುದಾಗಿದೆ.
ಮಾಹಿತಿ ನೀಡುವ ಹಾಗೂ ಸಂತ್ರಸ್ಥೆಯ ಗುರುತನ್ನು ಗೌಪ್ಯವಾಗಿಡಲಾಗುವುದು. ದೂರು ನೀಡುವವರು SIT ಕಚೇರಿಗೆ ಬರುವ ಅಗತ್ಯವೂ ಇಲ್ಲ. ಇನ್ನು ಈ ಪ್ರಕರಣ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸುವ
ಕಾರ್ಯವನ್ನು ಯಾವುದೇ ಮಾಧ್ಯಮ ಸಂಸ್ಥೆಗಳು, ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ಮಾಡಬಾರದೆಂದು ಈ ಮೂಲಕ ಸೂಚಿಸಲಾಗುತ್ತಿದೆ. ಅಂತವರ ವಿರುದ್ದವೂ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
ಇಂತಹ ವಿಚಾರದಲ್ಲಿ ಸಂವೇದನೆಯಿಂದ ಪ್ರವರ್ತಿಸುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಮುಖ್ಯ. ಈ ವಿಚಾರದಲ್ಲಿ SIT ಸೂಕ್ತ ಸಂವೇದನೆಯಿಂದ ನಡೆದುಕೊಳ್ಳಲಿದೆ. ವೃತ್ತಿಪರ ಕೌನ್ಸಿಲರ್ಗಳು, ವೈದ್ಯರು
ಲೈಂಗಿಕ ಶೋಷಣೆಯಂತಹ ವಿಚಾರಗಳ ನಿರ್ವಹಣೆಯಲ್ಲಿ ಅನುಭವವಿರುವ ಸಂಸ್ಥೆಗಳ ನೆರವನ್ನು SIT ಪಡೆದುಕೊಂಡಿದೆ. ಸಾರ್ವಜನಿಕರು ಈ ವಿಚಾರದಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸುವುದು ಅಗತ್ಯವಾಗಿದೆ ಎಂದು
ವಿಶೇಷ ತನಿಖಾ ತಂಡ ಮುಖ್ಯಸ್ಥ ಬಿ.ಕೆ.ಸಿಂಗ್ (BK Singh) ತಿಳಿಸಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕ ಎಚ್.ಡಿ. ರೇವಣ್ಣ (HD Revanna) ಅವರನ್ನು ವಿಶೇಷ ತನಿಖಾ ತಂಡ ಬಂಧಿಸಿ, ವಿಚಾರಣೆ ನಡೆಸುತ್ತಿದೆ. ಪ್ರಜ್ವಲ್ ರೇವಣ್ಣರಿಗೂ ವಿಚಾರಣೆಗೆ
ಹಾಜರಾಗುವಂತೆ ನೊಟೀಸ್ ನೀಡಲಾಗಿದೆ.
ಇದನ್ನು ಓದಿ: ಹೆಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದ ಮಹಿಳೆ ನಾಪತ್ತೆ, 40 ಕಡೆ ರೇಡ್ ನಡೆಸಿದ ಎಸ್ಐಟಿ