Bengaluru: ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ (Congress) ಪಕ್ಷ ನೀಡಿದ್ದ ಪಂಚ ಗ್ಯಾರಂಟಿಗಳ ಬಗ್ಗೆ ತಕರಾರು ಕೇಳಿ ಬಂದಿತ್ತು. ಮತ್ತೊಮ್ಮೆ ಎಲ್ಲ ಗ್ಯಾರಂಟಿ ಯೋಜನೆಗಳ ಮರುಪರಿಶೀಲಿಸುವಂತೆ ಕಾಂಗ್ರೆಸ್ ಪಕ್ಷದ ನಾಯಕರೇ ಕೇಳಿ ಕೊಂಡಿದ್ದರು. ಆದರೆ ಇದೀಗ ಮಹಿಳೆಯರಿಗೆಂದೇ ಜಾರಿಮಾಡಿದ್ದ ಶಕ್ತಿ ಯೋಜನೆಯಿಂದ ಕೆಎಸ್ಆರ್ಟಿಸಿ ದಾಖಲೆ ಮೊತ್ತದ ಆದಾಯವನ್ನು ಗಳಿಸಿದೆ.
![](https://sp-ao.shortpixel.ai/client/to_webp,q_glossy,ret_img,w_1024,h_536/https://vijayatimes.com/wp-content/uploads/2024/06/KSRTC-Ashwamedha-Classic-1024x536-1.webp)
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಕಲ್ಯಾಣ ಕರ್ಣಾಟಕ ರಸ್ತೆ ಸಾರಿಗೆ ನಿಗಮ (KKRTC), ಉತ್ತರ ಪಶ್ಚಿಮ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಗಗನಕ್ಕೇರುತ್ತಿದೆ .ಇದರಿಂದಾಗಿ ಕೆಎಸ್ಆರ್ಟಿಸಿ 2023-24ರಲ್ಲಿ 3,930 ಕೋಟಿ ರೂಪಾಯಿ ದಾಖಲೆ ಮಟ್ಟದ ಆದಾಯವನ್ನು ಗಳಿಸಿ ಶಕ್ತಿ ಯೋಜನೆಯಿಂದ ಲಾಸ್ ಎಂದು ಹೇಳುತ್ತಿದ್ದವರಿಗೆ ಬಲವಾದ ಹೊಡೆತ ಕೊಟ್ಟಿದೆ.
ಶಕ್ತಿ ಯೋಜನೆ ಅನುಷ್ಠಾನಕ್ಕೆ ಬಂದ ಬಳಿಕ ಕೆಎಸ್ಆರ್ಟಿಸಿ ಆದಾಯ 2023ರಲ್ಲಿ 3,930 ಕೋಟಿ ರೂಪಾಯಿ ತಲುಪಿದೆ. 2023ರ ಜೂನ್ನಿಂದ 2024ರ ಮೇ ವರೆಗೆ ಒಟ್ಟು 4,809 ಕೋಟಿ ರೂಪಾಯಿಗಳ ಸಂಚಾರ ಆದಾಯ ಸಂಗ್ರಹವಾಗಿದೆ. ಶಕ್ತಿ ಯೋಜನೇತರ (Shakti Scheme) ಪ್ರಯಾಣಿಕರ ಹೆಚ್ಚಳವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಹಿಂದೆ
![KSRTC](https://sp-ao.shortpixel.ai/client/to_webp,q_glossy,ret_img,w_1024,h_612/https://vijayatimes.com/wp-content/uploads/2024/06/nwkrtc-bus-1024x612.webp)
- 2016ರಲ್ಲಿ 2,738 ಕೋಟಿ ರೂಪಾಯಿ
- 2017 ರಲ್ಲಿ 2,975 ಕೋಟಿ ರೂಪಾಯಿ
- 2018 ರಲ್ಲಿ 3,131 ಕೋಟಿ ರೂಪಾಯಿ
- 2019 ರಲ್ಲಿ 3,182 ಕೋಟಿ ರೂಪಾಯಿ
- 2021 ರಲ್ಲಿ ರೂ 2,037 ಕೋಟಿ ರೂ
- 2022 ರಲ್ಲಿ ರೂ 3,349 ಕೋಟಿಗಳು
- 2023ರಲ್ಲಿ 3,930 ಕೋಟಿ ರೂಪಾಯಿ ಹೊಂದಿದೆ. ಇನ್ನು ಸರಳವಾಗಿ ಹೇಳಬೇಕೆಂದರೆ ಶಕ್ತಿ ಯೋಜನೆ ಆದಾಯ ಶೇ.42.5 (2,044 ಕೋಟಿ ರೂಪಾಯಿ) ಇದ್ದರೆ, ಶಕ್ತಿಯೇತರ ಆದಾಯ ಶೇ.57.5 (2,764 ಕೋಟಿ ರೂ) ಹೆಚ್ಚಳವಾಗಿದೆ. ಮಹಿಳಾ ಪ್ರಯಾಣಿಕರು ಉಚಿತ ಬಸ್ (Free Bus) ಪ್ರಯಾಣ ಮಾಡುವಾಗ ಅವರು ಎಲ್ಲಾ ಸಮಯದಲ್ಲೂ ಒಬ್ಬಂಟಿಯಾಗಿರುವುದಿಲ್ಲ. ಅವರು ತಮ್ಮ ಗಂಡ ಅಥವಾ ಅಪ್ಪ, ಇಲ್ಲವೇ ಗಂಡು ಮಕ್ಕಳೊಂದಿಗೆ ಪ್ರಯಾಣಿಸುತ್ತಾರೆ. ಮಹಿಳೆಯರು ಹೆಚ್ಚಾದಂತೆ ಅವರೊಂದಿಗೆ ಪ್ರಯಾಣಿಸುವ ಕುಟುಂಬ ಪುರುಷ ಸದಸ್ಯರು ಟಿಕೆಟ್ (Ticket) ಪಡೆದುಕೊಳ್ಳುತ್ತಾರೆ. ಇದು ಶಕ್ತಿಯೇತರ ಆದಾಯವನ್ನು ಹೆಚ್ಚಿಸಿ ಕೆಎಸ್ಆರ್ಟಿಸಿಗೆ ಆದಾಯ ಹೆಚ್ಚು ಮಾಡಿದೆ.