ಷೇರು ಪೇಟೆಯಲ್ಲಿ 900 ಅಂಕ ಕುಸಿತ!

sensex

ಕಳೆದ ಕೆಲವು ದಿನಗಳಿಂದ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಮತ್ತು ಇಳಿಕೆ ಕಂಡಿದೆ ಆದರೆ ಕಳೆದ 3 ದಿಗಳಿಂದ ಅಲ್ಪ ಚೇತರಿಕೆ ಕಂಡಿದ್ದ ದೇಶದ ಷೇರುಪೇಟೆಗಳು ಶುಕ್ರವಾರ ತೀವ್ರ ಕುಸಿತಕ್ಕೆ ಒಳಗಾಗಿವೆ. ಅಮೆರಿಕದ ಹಣದುಬ್ಬರಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಅಮೆರಿಕದ ಕೇಂದ್ರ ಬ್ಯಾಂಕ್ ಬಡ್ಡಿ ದರದಲ್ಲಿ ಕೈಗೊಳ್ಳಬಹುದಾದ ನಿರ್ಧಾರಗಳ ಬಗ್ಗೆ ತಲ್ಲಣ ಸೃಷ್ಟಿಯಾಗಿದೆ. ಇದರೊಂದಿಗೆ ಜಾಗತಿಕ ಷೇರುಪೇಟೆಗಳ ಪ್ರಭಾವವೂ ದೇಶದ ಷೇರುಗಳ ವಹಿವಾಟಿನ ಮೇಲೆ ಆಗಿದ್ದು, ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿದ್ದಾರೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 900 ಅಂಕಗಳಷ್ಟು ಕುಸಿತ ಕಂಡಿದೆ.


ಇಂದು ಬೆಳಿಗ್ಗೆ 11 ರವರೆಗೂ ಸೆನ್ಸೆಕ್ಸ್ 939.03 ಅಂಶ (ಶೇ 1.59) ಕಡಿಮೆಯಾಗಿ 57,987 ಅಂಶಗಳಿಗೆ ಇಳಿಕೆಯಾದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 277.75 ಅಂಶ (ಶೇ 1.58) ಇಳಿಕೆಯಾಗಿ 17,328.10 ಅಂಶಗಳಲ್ಲಿ ವಹಿವಾಟು ನಡೆದಿದೆ.
ಇನ್ಫೋಸಿಸ್ ಷೇರು ಶೇಕಡ 3ರಷ್ಟು ಇಳಿಕೆಯಾಗಿದ್ದು, ವಿಪ್ರೊ, ಟಿಕ್ ಮಹೀಂದ್ರಾ, ಎಚ್ಸಿಎಲ್ ಟೆಕ್, ಎಚ್ಡಿಎಫ್ಸಿ, ಬಜಾಜ್ ಫೈನಾನ್ಸ್ ರಿಲಯನ್ಸ್ , ಏರ್ಟೆಲ್ ಸೇರಿದಂತೆ ಬೃಹತ್ ಮಾರುಕಟ್ಟೆ ಮೌಲ್ಯ ಹೊಂದಿರುವ ಹಲವು ಕಂಪನಿಗಳ ಷೇರು ಬೆಲೆ ಶೇಕಡ 2 ರವರೆಗೂ ಇಳಿಮುಖವಾಗಿವೆ.

ಇಂದು ಜೊಮ್ಯಾಟೊ ಷೇರು ಬೆಲೆ ಶೇಕಡ 6 ರಷ್ಟು ಕುಸಿದು, ಪ್ರತಿ ಷೇರು ಬೆಲೆ 188.85 ತಲುಪಿದೆ. ಐಟಿ, ಹಣಕಾಸು ಮತ್ತು ರಿಯಲ್ ಎಸ್ಟೇಟ್ ವಲಯದ ಷೇರುಗಳು ಶೇಕಡ 2 ರಷ್ಟು ಇಳಿಕೆಯಾಗಿವೆ. ಆರ್ಬಿಐ, ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಜೊತೆಗೆ ಕೋವಿಡ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಹೊಂದಾಣಿಕೆಯ ನೀತಿಯನ್ನು ಮುಂದುವರಿಸುವುದಾಗಿಯೂ ಹೇಳಿದ್ದರಿಂದ ಗುರುವಾರ ಸೂಚ್ಯಂಕಗಳು ಏರಿಕೆ ಕಂಡಿದ್ದವು.

Exit mobile version