ಅಂಬೇಡ್ಕರ್ ರಾಜಕೀಯದಲ್ಲಿ ಆನುವಂಶಿಕತೆಯನ್ನು ವಿರೋಧಿಸುತ್ತಿದ್ದರು : ಶಶಿ ತರೂರ್

congress

New Delhi : ರಾಜಕೀಯ (Politics) ನಾಯಕತ್ವವು ಚುನಾವಣೆ (Election) ಅಥವಾ ಇತರ ಅರ್ಹತೆಗಳಿಗಿಂತ ಉತ್ತರಾಧಿಕಾರದ ಮೂಲಕ ಹೋಗಬೇಕು,

ಎಂಬ ಕಲ್ಪನೆಯನ್ನು ಡಾ. ಬಿ.ಆರ್.ಅಂಬೇಡ್ಕರ್ ಅವರು ತೀವ್ರವಾಗಿ ವಿರೋಧಿಸುತ್ತಿದ್ದರು ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿದ್ದಾರೆ.

ನವದೆಹಲಿಯ(New Delhi) ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿ “ಅಂಬೇಡ್ಕರ್ : ಎ ಲೈಫ್” ಎಂಬ ತಮ್ಮ ಹೊಸ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು,

ಜಾತಿ ವ್ಯವಸ್ಥೆಯ (Shashi Tharoor on BR Ambedkar) ತರ್ಕದಿಂದ ರಾಜಕೀಯದಲ್ಲಿ ಅಥವಾ ಬೇರೆಲ್ಲಿಯೂ ಕುಟುಂಬದ ಉತ್ತರಾಧಿಕಾರ ತತ್ವವನ್ನು ಅಂಬೇಡ್ಕರ್‌ ಅವರು ಒಪ್ಪಿಕೊಳ್ಳುತ್ತಿರಲಿಲ್ಲ.

https://vijayatimes.com/hijab-verdict-from-sc/

ಅಂಬೇಡ್ಕರ್ ಅದರ ಬಗ್ಗೆ ಬರೆಯದಿದ್ದರೂ, ರಾಜಕೀಯ ನಾಯಕತ್ವವು ಉತ್ತರಾಧಿಕಾರದ ಮೂಲಕ ಹೋಗಬೇಕು ಎಂಬ ಕಲ್ಪನೆಯನ್ನು ಅವರು ಸಾಕಷ್ಟು ಟೀಕಿಸುತ್ತಿದ್ದರು ಎಂಬುದು ಸಾಕಷ್ಟು ಕಡೆ ಉಲ್ಲೇಖವಾಗಿದೆ ಎಂದು ಸಂಸದ ಶಶಿ ತರೂರ್‌ ಹೇಳಿದ್ದಾರೆ. ಈ ವೇಳೆ ಪುಸ್ತಕದ ಕುರಿತು ಮಾತನಾಡಿದ ಶಶಿ ತರೂರ್,

https://youtu.be/PWV73Ii3XHM ಬಸವೇಶ್ವರ ಪುತ್ಥಳಿಗೆ ಅವಮಾನ.

ಕಂಟೋನ್ಮೆಂಟ್ ಟೌನ್ ಮೋವ್ನಲ್ಲಿ ಅಸ್ಪೃಶ್ಯ ಸುಬೇದಾರನ ಮಗ ಅಂಬೇಡ್ಕರ್ (Shashi Tharoor on BR Ambedkar) ಅವರ ಜೀವನದಲ್ಲಿ ನಿಸ್ಸಂದೇಹವಾಗಿ ಸಾಕಷ್ಟು ನೋವುಗಳಿವೆ. ಆದರೆ ಅವರ ಬರಹಗಳು, ಭಾಷಣಗಳು, ಮಧ್ಯಸ್ಥಿಕೆಗಳು ಮತ್ತು ಅವರ ಕಾಲದ ಸಾರ್ವಜನಿಕ ಚರ್ಚೆಗಳು ಹೆಚ್ಚು ಪರಿಣಾಮಕಾರಿಯಾಗಿವೆ.

ಇದು ಕಲ್ಪನೆಗಳ ಮನುಷ್ಯನ ಉದಯದ ಕಥೆಯಾಗಿದೆ. ಈ ಪುಸ್ತಕ ಅವರ ಬರವಣಿಗೆ ಮತ್ತು ಭಾಷಣಗಳಿಂದ ವ್ಯಾಪಕವಾದ ಉಲ್ಲೇಖಗಳೊಂದಿಗೆ ವಿವರಿಸಲಾಗಿದೆ ಎಂದಿದ್ದಾರೆ.

ಇನ್ನು ಇದೇ ಸಮಾರಂಭದಲ್ಲಿ ಮಾತನಾಡಿದ ಸುಪ್ರೀಂಕೋರ್ಟ್ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಮದನ್ ಬಿ ಲೋಕೂರ್, ಸಂವಿಧಾನದ ಕರಡು ರಚನೆಯಲ್ಲಿ ಅಂಬೇಡ್ಕರ್ ಅವರು ಮಾಡಿದ ಗಮನಾರ್ಹ ಕೆಲಸವನ್ನು ಶ್ಲಾಘಿಸಿದರು.

ಒಬ್ಬ ವ್ಯಕ್ತಿ ಸತ್ತರು, ಒಬ್ಬ ವ್ಯಕ್ತಿಯನ್ನು ಅಮೇರಿಕಾಕ್ಕೆ ಕಳುಹಿಸಲಾಯಿತು, ಇತರ ಇಬ್ಬರಿಗೆ ಭಾರತದಲ್ಲಿ ಬೇರೆಡೆ ಇತರ ಕರ್ತವ್ಯಗಳನ್ನು ನೀಡಲಾಯಿತು. ಆದರು ಅಂಬೇಡ್ಕರ್‌ಅವರು ಏಕಾಂಗಿಯಾಗಿ ಗಮನಾರ್ಹವಾದ ಕೆಲಸವನ್ನು ಮಾಡಿದರು ಎಂದರು.

Exit mobile version