ಬೆಳಗಾವಿಯಲ್ಲಿ ಕಲ್ಲು ತೂರಾಟ ; ಪುಣೆಯಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಶಿವಸೇನಾ!

Pune : ಮಹಾರಾಷ್ಟ್ರ(Maharashtra) ಮತ್ತು ಕರ್ನಾಟಕ ನಡುವಿನ ಗಡಿ ವಿವಾದ ಈ ಹಿಂದಿನಿಂದಲೂ ಇರುವ ‘ಮಹಾ’ ಸಮಸ್ಯೆ ಎಂಬುದು ಎಲ್ಲರಿಗು ತಿಳಿದಿರುವ ಸಂಗತಿ. ಈ ವಿವಾದದ ಅರ್ಜಿ ಸುಪ್ರೀಂಕೋರ್ಟಿನಲ್ಲಿ (Shiv Sena smeared Karnataka buses) ನಡೆಯುವ ಮುನ್ನವೇ ರಾಜಕೀಯ ಹೇಳಿಕೆಗಳಿಂದ ಇದೀಗ ವಿವಾದಗಳು ಮತ್ತಷ್ಟು ಭುಗಿಲೆದ್ದಿದೆ.

ಕರ್ನಾಟಕ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಡುವಿನ ವಾಗ್ಸಮರ ಗಡಿ ಭಾಗದಲ್ಲಿ ಘರ್ಷಣಗೆ ಪ್ರಮುಖವಾಗಿದೆ. ಎಂ.ಇ.ಎಸ್ (M.E.S) ಪುಂಡರ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ರಾಜ್ಯದ ಬಸ್‌ಗಳನ್ನು ಅಡಗಟ್ಟಿ ಮಸಿ ಹಚ್ಚಿ ಆಕ್ರೋಶ ಹೊರಹಾಕಿದ್ದರು.

ಇದಕ್ಕೆ ಸರಿಸಮ ಎಂಬಂತೆ ಇಂದು ಕರ್ನಾಟಕ ರಕ್ಷಣಾ ವೇದಿಕೆಯ(Shiv Sena smeared Karnataka buses) ಸಮೂಹ ಬೆಳಗಾವಿ ಗಡಿ ಭಾಗಕ್ಕೆ ಹೋಗಿ ಮಹಾರಾಷ್ಟ್ರ ಬಸ್ಸು,

ಇದನ್ನೂ ನೋಡಿ : https://fb.watch/heP6tFLo_R/

ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರಹಾಕಿದರು. ಇದನ್ನು ಗಮನಿಸಿದ ಮಹಾರಾಷ್ಟ್ರದ ಶಿವಸೇನಾ ಕಾರ್ಯಕರ್ತರು ಪುಣೆಯಲ್ಲಿ ನಿಲ್ಲಿಸಲಾಗಿದ್ದ 3 ಕರ್ನಾಟಕ ಸಾರಿಗೆ ಬಸ್‌ಗಳ ನಂಬರ್ ಪ್ಲೇಟ್‌ಗಳ ಮೇಲೆ ಹಾಗೂ ಗಾಜಿನ ಮೇಲೆ ಮಸಿ ಬಳಿದಿದ್ದಾರೆ.

ಈ ಪುಂಡಾಟ ಮೆರೆದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

https://vijayatimes.com/padmabhushan-to-google-ceo/

ಪುಣೆ ನಗರದ ಸ್ವರ್ಗೇಟ್ ಪ್ರದೇಶದಲ್ಲಿ ಶಿವಸೇನೆಯ ಕಾರ್ಯಕರ್ತರು ಖಾಸಗಿ ಬಸ್ ನಿಲ್ದಾಣಕ್ಕೆ ನುಗ್ಗಿ ಮೂರು ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳಿಗೆ ಮಸಿ(ಕಪ್ಪು) ಮತ್ತು ಕಿತ್ತಳೆ ಬಣ್ಣವನ್ನು ಬಳಿದಿದ್ದಾರೆ.

ಈ ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : https://vijayatimes.com/maharashtra-karnataka-dispute/

ಭಾಷಾವಾರು ರಾಜ್ಯಗಳ ಮರುಸಂಘಟನೆಯ ನಂತರ ಮಹಾರಾಷ್ಟ್ರ-ಕರ್ನಾಟಕ ಗಡಿ ಸಮಸ್ಯೆಯು 1957 ರ ಹಿಂದಿನದು ಎಂಬುದು ಗಮನಾರ್ಹ.

ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬೆಳಗಾವಿಯ ಗಡಿ ಜಿಲ್ಲೆಯನ್ನು ಮಹಾರಾಷ್ಟ್ರ ತಮಗೆ ಸೇರಬೇಕು ಎಂದು ಹೇಳಿದರೆ, ಗಡಿರೇಖೆಯ ಪ್ರಕಾರ ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗವಾಗಿದೆ ಎಂದು ಕರ್ನಾಟಕ ರಾಜ್ಯ ಇಂದಿಗೂ ಸಮರ್ಥಿಸಿಕೊಳ್ಳುತ್ತದೆ.

Exit mobile version