ಶಿವರಾತ್ರಿಗೆ ಸಿದ್ಧವಾಯ್ತು 21 ಅಡಿ ಎತ್ತರದ ʻತೆಂಗಿನಕಾಯಿ ಶಿವಲಿಂಗ

ಮೈಸೂರು, ಮಾ. 10: ಶಿವನ ಆರಾಧಕರಿಗೆ ದರ್ಶನ ನೀಡಲು ಸಾಂಸ್ಕೃತಿಕ ನಗರಿಯಲ್ಲಿ 21 ಅಡಿ ಎತ್ತರದ ʻತೆಂಗಿನಕಾಯಿ ಶಿವಲಿಂಗʼ ಸಜ್ಜಾಗಿದೆ.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಮೈಸೂರಿನಲ್ಲಿ ಪ್ರಥಮ ಬಾರಿಗೆ ಮಹಾಶಿವರಾತ್ರಿ ಸಪ್ತಾಹ ಮಹೋತ್ಸವ ಆಯೋಜಿಸಲಾಗಿದ್ದು, ಲಲಿತ ಮಹಲ್‌ ಮೈದಾನದಲ್ಲಿ ಮಾರ್ಚ್‌ 13ರವರೆಗೆ ಸಾರ್ವಜನಿಕರು ತೆಂಗಿನಕಾಯಿ ಶಿವಲಿಂಗ ದರ್ಶನ ಪಡೆಯಬಹುದಾಗಿದೆ.

ತೆಂಗಿನಕಾಯಿ ಶಿವಲಿಂಗ ವಿಶೇಷತೆ ಏನು?

ʻಶಿವನ ಸಂದೇಶ ನೀಡುವ ಉದ್ದೇಶದಿಂದ ತೆಂಗಿನಕಾಯಿಗಳನ್ನು ಬಳಸಿಕೊಂಡು 21 ಅಡಿ ಎತ್ತರದ ಶಿವಲಿಂಗ ರೂಪಿಸಲಾಗಿದೆ. ಇದಕ್ಕಾಗಿ ಸುಮಾರು 8 ಸಾವಿರ ತೆಂಗಿನಕಾಯಿಗಳನ್ನು ಬಳಸಲಾಗಿದೆ. 15 ಮಂದಿ ಕೆಲಸಗಾರರು ಈ ಶಿವಲಿಂಗವನ್ನು ರೂಪಿಸಿದ್ದಾರೆ. ಒಂದು ವಾರದ ಅವಧಿಯಲ್ಲಿ ತೆಂಗಿನಕಾಯಿ ಶಿವಲಿಂಗವನ್ನು ನಿರ್ಮಿಸಲಾಗಿದೆ.

ಮಹಾಶಿವರಾತ್ರಿ ಸಪ್ತಾಹ ಸಮಾರಂಭಕ್ಕೆ ಈಗಾಗಲೇ ಚಾಲನೆ ದೊರೆತಿದ್ದು, ಜನರು ಇದರ ಉಪಯೋಗ ಪಡೆಯಬೇಕೆಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಸನ ಜಿಲ್ಲೆಯ ಮುಖ್ಯ ಸಂಚಾಲಕಿ ಬಿ.ಕೆ.ಮೀನಾ ತಿಳಿಸಿದರು.

Exit mobile version