ಮಹಾಭಾರತ ಯುದ್ಧದ ವೇಳೆ ಶ್ರೀಕೃಷ್ಣನು ಅರ್ಜುನನಿಗೆ ಜಿಹಾದ್ ಬಗ್ಗೆ ಪಾಠ ಮಾಡಿದ್ದನು : ಶಿವರಾಜ್ ಪಾಟೀಲ್

New Delhi : ಮಹಾಭಾರತ(Mahabharatha) ಯುದ್ಧದ ವೇಳೆ ಶ್ರೀಕೃಷ್ಣನು ಅರ್ಜುನನಿಗೆ ಜಿಹಾದ್(Jihad) ಬಗ್ಗೆ ಪಾಠ ಮಾಡಿದ್ದನು ಎಂದು ಹೇಳುವ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಮಾಜಿ ಕೇಂದ್ರ ಗೃಹ ಸಚಿವ ಮತ್ತು ಹಿರಿಯ ಕಾಂಗ್ರೆಸ್‌ ನಾಯಕ(Congress Leader) ಶಿವರಾಜ್‌ ಪಾಟೀಲ್‌(Shivraj patil statement sparks) ಮೇಲೆ ದೂರು ದಾಖಲಾಗಿದೆ.

ದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್(Shivraj patil statement sparks) ಅವರು, ಜಿಹಾದ್ ಪರಿಕಲ್ಪನೆಯನ್ನು ಗೀತೆಯಲ್ಲಿ ಉಲ್ಲೇಖಿಸಲಾಗಿದೆ.

ಮಹಾಭಾರತ ಯುದ್ಧದ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಜಿಹಾದ್ ಬಗ್ಗೆ ಪಾಠಗಳನ್ನು ಮಾಡಿದ್ದಾನೆ. 

ಇಸ್ಲಾಂ ಧರ್ಮದಲ್ಲಿ ಜಿಹಾದ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತದೆ, ಆದರೆ ಜಿಹಾದ್‌ ಪರಿಕಲ್ಪನೆ ಗೀತೆಯಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲಾ ಪ್ರಯತ್ನಗಳ ನಂತರವೂ ಯಾರಿಗಾದರೂ ಶುದ್ಧ ಕಲ್ಪನೆ, ಶಕ್ತಿ ಅರ್ಥವಾಗದಿದ್ದರೆ,  ಅದನ್ನು ಬಳಸಬಹುದು ಎಂದು ಕುರಾನ್ ಮತ್ತು ಗೀತೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಶಿವರಾಜ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : https://vijayatimes.com/amazing-palaces-of-india/

ಈ ಹೇಳಿಕೆಯನ್ನು ಖಂಡಿಸಿರುವ  ಬಿಜೆಪಿ, “ಕಾಂಗ್ರೆಸ್ನ ಹಿಂದೂ ದ್ವೇಷದ ಸರಣಿ ಮುಂದುವರೆದಿದೆ” ಎಂದು ಆರೋಪ ಮಾಡಿದೆ.

ಈ ವಿವಾದಾತ್ಮಕ ಹೇಳಿಕೆ(Controversial Statement) ನೀಡಿರುವ ಶಿವರಾಜ್ ಪಾಟೀಲ್ ಅವರ ಮೇಲೆ ಹಿಂದೂ ಸೇನೆ ದೂರು ದಾಖಲಿಸಿದೆ.

ದೆಹಲಿ ಪೊಲೀಸ್ ಕಮಿಷನರ್‌ಗೆ ಬರೆದ ಪತ್ರದಲ್ಲಿ ಶಿವರಾಜ್ ಪಾಟೀಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಅರ್ಜುನ್‌ಗೆ ಶ್ರೀಕೃಷ್ಣ ಜಿಹಾದ್ ಕಲಿಸಿದನೆಂದು ಆರೋಪಿಸಿ ಹಿಂದೂ ಧರ್ಮವನ್ನು ಅಭ್ರಮಿಸಿದ್ದಾರೆ.

https://youtu.be/zL_qnxulcAM

ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಘಾಸಿಗೊಳಿಸಿದ್ದಕ್ಕಾಗಿ ಮಾಜಿ ಗೃಹ ಸಚಿವರು ಭಾರತೀಯ ದಂಡ ಸಂಹಿತೆ, 1863ರ ಸೆಕ್ಷನ್ 153, 153 ಎ, 153 ಬಿ, 295 ಎ ಮತ್ತು 298 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಹೊಣೆಗಾರರಾಗಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಇನ್ನೊಂದೆಡೆ ಶಿವರಾಜ್ ಪಾಟೀಲ್ ಅವರ ಗೀತಾ-ಕುರಾನ್ ಹೇಳಿಕೆಯೊಂದಿಗೆ ನಿಲ್ಲಬೇಡಿ ಎಂದು ಕಾಂಗ್ರೆಸ್‌ ಪಕ್ಷ ತನ್ನ ನಾಯಕರಿಗೆ ಸೂಚನೆ ನೀಡಿದೆ.

ಇದು ಶಿವರಾಜ್ ಪಾಟೀಲ್ ಅವರ ವೈಯಕ್ತಿಕ ಹೇಳಿಕೆ ಎಂದು ಹೇಳುವ ಮೂಲಕ ಈ ವಿವದಾತ್ಮಕ ಹೇಳಿಕೆಯಿಂದ ಕಾಂಗ್ರೆಸ್‌ ಪಕ್ಷ ಅಂತರ ಕಾಯ್ದುಕೊಂಡಿದೆ.

Exit mobile version