ಕ್ರಿಮಿನಲ್ ಹಿನ್ನಲೆಯುಳ್ಳ ರಾಜಕಾರಣಿಗಳಿಗೆ ಶಾಕ್ ನೀಡಿದ ಸುಪ್ರೀಂ

ಬೆಂಗಳೂರು, ಆ. 12: ಕ್ರಿಮಿನಲ್ ಹಿನ್ನಲೆಯುಳ್ಳ ರಾಜಕಾರಣಿಗಳ ಅಪರಾಧಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರಗಳಿಗೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ ತಿಳಿಸಿದೆ.

ಸುಪ್ರೀಂ ಕೋರ್ಟನ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಮೂರ್ತಿ, ವಿನೀತ್ ಸರವಣ್ ಮತ್ತು ಸುರ್ಯಕಾಂತ್ ಅವರನ್ನು ಒಳಗೊಂಡ ಪೀಠವು ಬಿಜೆಪಿ ನಾಯಕಿ ಅಶ್ವಿನಿ ಉಪಾಧ್ಯಯ ಅವರ ಪ್ರಕರಣದ ವಿಚಾರಣೆ ವೇಳೆ ಈ ಮಹತ್ವದ ತೀರ್ಪನ್ನು ನೀಡಿದೆ.

ಕರ್ನಾಟಕ ರಾಜ್ಯ ಸರ್ಕಾರವು ಇಂತಹ ಸುಮಾರು 61 ಪ್ರಕರಣಗಳನ್ನು ಹಿಂತಗೆದುಕೊಳ್ಳುವ ಸಾಧ್ಯತೆಯಿದೆ. ಆ ಪ್ರಕರಣಗಳನ್ನು ಹಿಂಪಡೆಯಲು ಕರ್ನಾಟಕ ಸರ್ಕಾರ ಆದೇಶ ನೀಡಿತ್ತು. ಕಳೆದ ವರ್ಷಕೂಡ 62ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಆದೇಶ ನೀಡಿತ್ತು. ಇದರಲ್ಲಿ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಶಾಸಕ ಎಂ.ಪಿ ರೇಣುಕಾಚಾರ್ಯ ಮತ್ತು ಬಿ.ಸಿ ಪಾಟೀಲ್ ಹೀಗೆ ಹಲವು ರಾಜಕಾರಣಿಗಳ ಮತ್ತು ಅವರ ಬೆಂಬಲಿಗರ ಪ್ರಕರಣವನ್ನು ಈ ಹಿಂದೆ ಗೃಹ ಮಂತ್ರಿಗಳಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ಈ ಪ್ರಕರಣವನ್ನು ಖುಲಾಸೆ ಗೊಳಿಸಿದ್ದರು.

ಹಾಲಿ ಸಂಸದರ ಮತ್ತು ಶಾಸಕರ ವಿಚಾರಣೆಗೆ ವಿಶೇಷ ಪೀಠವನ್ನು ರಚಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ರಮಣ ಸ್ಪಷ್ಟಪಡಿಸಿದ್ದು, ಸಂಸದರ ಮತ್ತು ಶಾಸಕರ  ವರದಿಗಳನ್ನು ನೀಡಲು ಸಿಬಿಐ ಗೆ ಮತ್ತು ಇಡಿಗೆ 10 ದಿನಗಳ ಕಾಲವಕಾಶ ನೀಡಿದ್ದಾರೆ.

Exit mobile version