ಕೂದಲು ಉದ್ದ ಬೆಳೆಯಬೇಕೇ? ಹಾಗಾದರೆ ಈ ಯೋಗಾಸನಗಳನ್ನು ಪ್ರಯತ್ನಿಸಿ…

ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗ ತನ್ನದೇ ಆದ ಮಹತ್ವ ಹೊಂದಿದೆ. ಇಂತಹ ಯೋಗ ನಿಮ್ಮ ಕೂದಲಿನ ಸಮಸ್ಯೆಗೂ ಪರಿಹಾರ ನೀಡುವುದೆಂದರೆ ನಂಬುತ್ತೀರಾ? ಹೌದು, ಉದ್ದ ಕೂದಲು ಪಡೆಯಬೇಕೆಂಬ ಆಸೆಯಿದ್ದವರು ಇಲ್ಲಿ ನೀಡಿರುವ ಯೋಗಾಸನಗಳನ್ನು ಪ್ರಯತ್ನಿಸಿ. ಇವುಗಳು ಉದ್ದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದಲ್ಲದೇ, ಕೂದಲು ಉದುರುವುದನ್ನು ಕಡಿಮೆ ಮಾಡಿ, ಉತ್ತಮ ಆರೋಗ್ಯವನ್ನು ಪಡೆಯಲು ಸಹಾಯ ಮಾಡುತ್ತವೆ.

ಕೂದಲ ಬೆಳವಣಿಗೆಯನ್ನು ಉತ್ತೇಜಿಸುವ ಯೋಗಾಸನಗಳನ್ನು ಈ ಕೆಳಗೆ ನೀಡಲಾಗಿದೆ:
ಕಪಾಲಬಾತಿ:
ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವುದರ ಮೂಲಕ ಕೂದಲು ಉದುರುವಿಕೆಯನ್ನು ತಡೆಯಲು ಸಹಕಾರಿಯಾಗಿದೆ.
ಮಾಡುವ ವಿಧಾನ: ಸಮತಟ್ಟಾದ ನೆಲದ ಮೇಲೆ ಕಾಲು ಮಡಚಿ ಕುಳಿತುಕೊಳ್ಳಿ. ಬೆನ್ನು ನೇರವಾಗಿರಲಿ ಹಾಗೂ ಕಣ್ಣು ಮುಚ್ಚಿ.
ಬಲ ಅಂಗೈಯನ್ನು ಬಲ ಮೊಣಕಾಲಿಗೆ ಹಾಗೂ ಎಡ ಅಂಗೈಯನ್ನು ಎಡ ಮೊಣಕಾಲಿಗೆ ತಾಗಿಸಿ. ಈಗ ನಿಮ್ಮ ಎಲ್ಲಾ ಶಕ್ತಿಯನ್ನು ಬಳಸಿ ಹೊಟ್ಟೆ ಒಳಗಡೆ ಹೋಗುವಂತೆ ಉಸಿರೆಳೆದುಕೊಂಡು ನಂತರ ಉಸಿರು ಹೊರಗೆ ಬಿಡಿ. ಉಸಿರು ಒಳಗೆ ತೆಗೆದುಕೊಳ್ಳುವಾಗ ಯಾವುದೇ ಬಲ ಪ್ರಯೋಗಬೇಡ. ಪ್ರತಿ ನಿಶ್ವಾಸದ ನಂತರ ಉಚ್ಛ್ವಾಸವು ಸಹಜವಾಗಿಯೇ ಇರಲಿ.
ಸುಳಿವು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಪಾಲಭತಿಯನ್ನು ಅಭ್ಯಾಸ ಮಾಡಲು ಸೂಚಿಸಲಾಗಿದೆ.

ಅಧೋ ಮುಖ ಶ್ವಾನಾಸನ:
ಈ ಆಸನದಿಂದ ನಿಮ್ಮ ನೆತ್ತಿಗೆ ರಕ್ತದ ಹರಿವಾಗಿ ಜೊತೆಗೆ ಆಮ್ಲಜನಕವೂ ನೆತ್ತಿ ತಲುಪುತ್ತದೆ. ಈ ಮೂಲಕ ಕೂದಲು ಬೆಳೆಯಲು ಸಹಾಯವಾಗುವುದು.
ಮಾಡುವ ವಿಧಾನ: ನಾಯಿಯಂತೆ ನಿಮ್ಮ ಮೊಣಕಾಲು ಊರಿ ನಿಂತುಕೊಳ್ಳಿ. ನಿಧಾನವಾಗಿ ಉಸಿರು ಬಿಡಿ ಮತ್ತು ಸೊಂಟವನ್ನು ಮೇಲಕ್ಕೆತ್ತಿ. ಮೊಣಕೈ ಮತ್ತು ಮೊಣಕಾಲನ್ನು ನೇರವಾಗಿಸಿ. ದೇಹವು ‘ವಿ’ ಆಕಾರದಲ್ಲಿ ಇರಬೇಕು. ಕೈಗಳು ಭುಜದ ಸಮಾನಾಂತರವಾಗಿರಬೇಕು ಮತ್ತು ಪಾದಗಳು ಸೊಂಟದ ಸಮಾನವಾಗಿರಲಿ. ಹೆಬ್ಬೆರಳುಗಳು ಮೇಲಿನ ಭಾಗಕ್ಕೆ ನೋಡುತ್ತಿರಲಿ.
ಕೈಗಳನ್ನು ನೆಲಕ್ಕೆ ಊರಿಕೊಳ್ಳಿ ಮತ್ತು ಕುತ್ತಿಗೆ ಎಳೆಯಿರಿ. ಕಿವಿಗಳು ಒಳಭಾಗದ ಕೈಗಳನ್ನು ಮುಟ್ಟಬೇಕು ಮತ್ತು ನಾಭಿ ಕಡೆಗೆ ನೋಟವನ್ನಿಡಿ. ಕೆಲವು ಸೆಕೆಂಡು ಹಾಗೆ ಇರಿ ಮತ್ತು ಇದರ ಬಳಿಕ ಮತ್ತೆ ಮೊಣಕಾಲುಗಳನ್ನು ಮಡಚಿ ಮೊದಲಿನ ಭಂಗಿಗೆ ಬನ್ನಿ.
ಮತ್ತು ನೆತ್ತಿಯಲ್ಲಿ ರಕ್ತದ ಹರಿವನ್ನು ಉತ್ತೇಜಿಸುತ್ತದೆ.
ಸುಳಿವು: ನೀವು ಈ ಯಾವುದಾದರೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಈ ಆಸನವನ್ನು ಮಾಡುವುದನ್ನು ತಪ್ಪಿಸಿ:

ಬಾಲಾಸನ:
ಕೂದಲುದುರುವಿಕೆಗೆ ಕಾರಣವಾಗುವ ಒತ್ತಡ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರ ಈ ಬಾಲಾಸನ ನೀಡುವುದು.
ಮಾಡುವ ವಿಧಾನ: ಚಾಪೆಯ ಮೊಣಕಾಲು ಮಡಚಿ ಕುಳಿತುಕೊಳ್ಳಿ. ನಿಮ್ಮ ಕಾಲು ಸೊಂಟಕ್ಕೆ ತಾಗುವ ಹಾಗೇ ಕೈಯನ್ನು ಮುಂದಕ್ಕೆ ಮಾಡಿಕೊಡು ಬಗ್ಗಿ. ನಿಮ್ಮ ಕೈಗಳು ಮತ್ತು ಹಣೆ ನೆಲಕ್ಕೆ ತಾಗುವವರೆಗೂ ಉಸಿರಾಡುತ್ತಾ ಬಗ್ಗಿಸಿ. ನಿಮ್ಮ ಮೊಣಕಾಲುಗಳನ್ನು ಮಡಚಿ ಮತ್ತು ನಿಮ್ಮ ಕಾಲುಗಳು ನಿಮ್ಮ ಸೊಂಟವನ್ನು ಸ್ಪರ್ಶಿಸಿ ನಿಮ್ಮ ಚಾಪೆಯ ಮೇಲೆ ಕುಳಿತುಕೊಳ್ಳಿ. ನಿಮ್ಮ ಮೊಣಕೈಯನ್ನು ನೆಲಕ್ಕೆ ತಾಗಿಸಲು ಸಾಧ್ಯವಾದರೆ ಮತ್ತಷ್ಟು ಉತ್ತಮ. ನಿಮ್ಮ ಉಸಿರಾಟದ ಬಗ್ಗೆ ಗಮನಹರಿಸಿ ಮತ್ತು 30 ಸೆಕೆಂಡ್‌ಗಳಿಂದ ಒಂದು ನಿಮಿಷದವರೆಗೆ ಭಂಗಿಯಲ್ಲಿ ಇರಿ.
ಸುಳಿವು: ನೀವು ಅತಿಸಾರ, ಮೊಣಕಾಲು ಗಾಯ, ತೀವ್ರವಾದ ಕುತ್ತಿಗೆ ಅಥವಾ ಬೆನ್ನು ನೋವು, ಅಧಿಕ ರಕ್ತದೊತ್ತಡ, ಸ್ಲಿಪ್ಡ್ ಡಿಸ್ಕ್ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಈ ಆಸನವನ್ನು ಮಾಡಬಾರದು.

ಶೀರ್ಷಾಸನ:
ಹೆಡ್ ಸ್ಟ್ಯಾಂಡ್ ಎಂದೂ ಕರೆಯಲ್ಪಡುವ ಶೀರ್ಷಾಸನ ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸಿ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು, ಕೂದಲು ತೆಳುವಾಗುವುದನ್ನ ತಡೆದು ಬೋಳಾಗುವುದರಿಂದ ರಕ್ಷಿಸುವುದು.
ಮಾಡುವ ವಿಧಾನ: ಮಂಡಿಯೂರಿ, ನಿಮ್ಮ ಬೆರಳುಗಳನ್ನು ಇಂಟರ್ಲಾಕ್ ಮಾಡಿ ಮತ್ತು ಅವುಗಳನ್ನು ನಿಮ್ಮ ತಲೆಯ ಹಿಂದೆ ಇರಿಸಿ. ಈಗ, ಕೆಳಗೆ ಬಾಗಿ ನಿಮ್ಮ ಹಣೆಯನ್ನು ನೆಲಕ್ಕೆ ಸ್ಪರ್ಶಿಸಿ. ನಿಮ್ಮ ಇಂಟರ್ಲಾಕ್ ಮಾಡಿದ ಕೈಗಳಿಂದ ನಿಮ್ಮ ತಲೆಯನ್ನು ಬೆಂಬಲಿಸಿ, ನಿಮ್ಮ ಕಾಲುಗಳನ್ನು ನಿಧಾನವಾಗಿ ಮೇಲಕ್ಕೆತ್ತಿ. ನಿಮ್ಮ ಕಾಲು ಮತ್ತು ತೋಳನ್ನು ನೇರವಾಗಿ ಇರಿಸಿ. ಈ ಭಂಗಿಯಲ್ಲಿ ನಿಮ್ಮ ದೇಹವು ಸ್ಥಿರವಾದ ನಂತರ, ಕೆಲವು ಸೆಕೆಂಡುಗಳ ಕಾಲ ಸಮತೋಲನವನ್ನು ಪ್ರಯತ್ನಿಸಿ
ಸಲಹೆ: ಈ ಭಂಗಿ ಪರಿಪೂರ್ಣವಾಗಲು ಸಾಕಷ್ಟು ಅಭ್ಯಾಸದ ಅಗತ್ಯವಿದೆ. ನೀವು ಹೊಸಬರಾಗಿದ್ದರೆ ಇನ್ನೊಬ್ಬ ವ್ಯಕ್ತಿಯ ಸಹಾಯವನ್ನು ಪಡೆದುಕೊಳ್ಳಿ ಅಥವಾ ಗೋಡೆಗೆ ಒರಗಿಕೊಳ್ಳಿ.

ವಜ್ರಾಸನ:
ವಜ್ರಾಸನ ಸರಳವಾದರೂ ಸಾಕಷ್ಟು ಶಕ್ತಿಯುತವಾಗಿದೆ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳೊಂದಿಗೆ ನೇರವಾಗಿ ಪರಿಹರಿಸುತ್ತದೆ, ಅ ಮೂಲಕ ಕೂದಲಿಗೆ ಬೇಕಾದ ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುವುದು.
ಮಾಡುವ ವಿಧಾನ: ಮೊದಲು ನೇರವಾಗಿ ಕುಳಿತುಕೊಳ್ಳಿ. ಎರಡು ಕಾಲುಗಳನ್ನೂ ಮುಂದೆ ಚಾಚಿ ಬೆನ್ನು ನೇರ ಮಾಡಿ ಕುಳಿತುಕೊಳ್ಳಿ. ಈಗ ಬಲಗಾಲನ್ನು ಹಿಂದೆ ತೆಗೆದುಕೊಳ್ಳಿ. ಎಡಗಾಲನ್ನು ಹಿಂದೆ ತೆಗೆದುಕೊಳ್ಳಿ. ಎರಡು ಹಿಮ್ಮಡಿಗಳನ್ನು ಸೇರಿಸಿ ಗುದದ್ವಾರದ ಭಾಗಕ್ಕೆ ಎರಡು ಹಿಮ್ಮಡಿಗಳು ಬರುವ ರೀತಿಯಲ್ಲಿ ಇಟ್ಟುಕೊಳ್ಳಿ. ಎರಡು ಮಂಡಿಗಳನ್ನು ಸೇರಿಸಿ. ಬೆನ್ನು ನೇರ ಇರಬೇಕು. ದೃಷ್ಟಿಯೂ ನೇರವಾಗಿರಬೇಕು. ಎರಡು ಕೈಗಳನ್ನು ಧ್ಯಾನ ಮುದ್ರೆ ಅಥವಾ ಚಿನ್ಮುದ್ರೆ ಅಥವಾ ಎರಡು ಮಂಡಿಗಳ ಮೇಲೆ ಕೈಗಳನ್ನು ಇಟ್ಟುಕೊಳ್ಳಬಹುದು. ನಂತರ ನಿಧಾನವಾಗಿ ಬಲಗಾಲು ಆಮೇಲೆ ಎಡಗಾಲನ್ನು ಮುಂದೆ ತೆಗೆದುಕೊಂಡು ಕೈಗಳನ್ನು ಹಿಂದೆ ನೆಲಕ್ಕೆ ಊರಿ ವಿಶ್ರಾಂತಿ ಪಡೆಯಿರಿ.

Exit mobile version