ಹೆಲ್ಮೆಟ್ ಧರಿಸಿಲ್ಲವೆಂದು ಗರ್ಭಿಣಿಯನ್ನು 3 ಕಿ.ಮೀ ನಡೆಸಿದ ಎಸ್ಐ ಸಸ್ಪೆಂಡ್

ಒಡಿಸ್ಸಾ, ಮಾ. 30: ಹೆಲ್ಮೆಟ್ ಧರಿಸದ ಕಾರಣಕ್ಕೆ ಗರ್ಭಿಣಿಯನ್ನು ಬಲವಂತವಾಗಿ ಮೂರು ಕಿ.ಮೀ. ನಡೆಸಿದ ಕಾರಣಕ್ಕೆ ಸಬ್‌ ಇನ್‌ಸ್ಪೆಕ್ಟರ್‌ ಅಮಾನತು ಆಗಿರುವ ಘಟನೆ ಮಯುರ್ಭಂಜ್‌ನಲ್ಲಿ ನಡೆದಿದೆ.

ಮಯುರ್ಭಂಜ್‌ ಪೊಲೀಸ್‌ ಠಾಣೆಯ ಉಸ್ತುವಾರಿ ರೀನಾ ಬಾಕ್ಸಲ್‌ ಅವರನ್ನು ಮಾ.28ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಸಹಾಯಕ ಸಬ್ ಇನ್‌ಸ್ಪೆಕ್ಟರ್ ಬಿ.ಡಿ.ದಸ್ಮೋಹಪಾತ್ರ ಅವರಿಗೆ ಹಸ್ತಾಂತರಿಸುವಂತೆ ರೀನಾ ಬಕ್ಸಲ್ ಅವರಿಗೆ ಸೂಚಿಸಲಾಗಿದೆ.

ಗರ್ಭಿಣಿಯಾಗಿದ್ದ ಗುರುಬಾರಿ ಎಂಬಾಕೆ ತಮ್ಮ ಆರೋಗ್ಯ ತಪಾಸಣೆಗಾಗಿ ಪತಿ ವಿಕ್ರಮ್‌ ಬಿರುಲಿ ಅವರೊಂದಿಗೆ ಬೈಕ್‌ನಲ್ಲಿ ಉಡಾಲ ಉಪವಿಭಾಗ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ
ವಿಕ್ರಮ್‌ ಹೆಲ್ಮೆಟ್‌ ಧರಿಸಿದ್ದರು. ಆದರೆ, ಗುರುಬಾರಿ ಹೆಲ್ಮೆಟ್‌ ಧಿರಿಸಿರಲಿಲ್ಲ. ಪೊಲೀಸ್‌ ಅಧಿಕಾರಿ ಬೈಕ್‌ನಲ್ಲಿ ನಿಲ್ಲಿಸಿ ಪ್ರಶ್ನಿಸಿದ್ದಾರೆ. ʻನನ್ನ ಹೆಂಡತಿ ಗರ್ಭಿಣಿ, ಅವಳಿಗೆ ಆರೋಗ್ಯ ಸರಿಯಿಲ್ಲ. ಹೀಗಾಗಿ, ಹೆಲ್ಮೆಟ್‌ ಧಿರಿಸಿಲ್ಲʼ ಎಂದು ವಿಕ್ರಮ್‌ ಹೇಳಿದ್ದಾರೆ.

ಆದರೆ, ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸ್‌ ಅಧಿಕಾರಿ 500 ರೂ. ದಂಡ ಹಾಕಿದ್ದಾರೆ. ಅಲ್ಲದೇ, ಹೆಂಡತಿಯನ್ನು ಇಲ್ಲೇ ಬಿಟ್ಟು ಹತ್ತಿರದ ಪೊಲೀಸ್‌ ಠಾಣೆಯಲ್ಲಿ ದಂಡ ಪಾವತಿಸಿ ಬರುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಒತ್ತಾಯಪೂರ್ವಕವಾಗಿ ಬಿಸಿಲಿನಲ್ಲೇ ಗರ್ಭಿಣಿಯನ್ನು 3 ಕಿ.ಮೀ. ನಡೆಸಿದ್ದರು ಎನ್ನಲಾಗಿದೆ.

ಪೊಲೀಸ್‌ ಅಧಿಕಾರಿಯ ಈ ನಡೆ ಬಗ್ಗೆ ಗರ್ಭಿಣಿ ಹಾಗೂ ಆಕೆಯ ಪತಿ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Exit mobile version