• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್ ಮನೆಗೆ ಸಿಎಂ ಹೋಗದಿರಲು ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಬೇಕು : ಸಿದ್ದರಾಮಯ್ಯ

Mohan Shetty by Mohan Shetty
in ರಾಜಕೀಯ, ರಾಜ್ಯ
Siddaramaiah
0
SHARES
0
VIEWS
Share on FacebookShare on Twitter

ಮೃತ(Dead) ಕಾರ್ಯಕರ್ತರಿಗೆ ಪಕ್ಷ ಎಷ್ಟೇ ಮೊತ್ತದ ಪರಿಹಾರ ನೀಡಿದರೂ ಅದು ಅವರ ಸಂಘಟನೆಗೆ ಸಂಬಂಧಿಸಿದ್ದು, ಆದರೆ ವಿಚಾರಣಾ ಹಂತದಲ್ಲಿರುವ ಹತ್ಯೆ(Murder) ಪ್ರಕರಣಗಳಲ್ಲಿ ಕುಟುಂಬಗಳಿಗೆ ಪರಿಹಾರ ನೀಡುವಾಗ ಭೇದಭಾವ ಆಗದಂತೆ ಎಚ್ಚರಿಕೆ ವಹಿಸುವುದು ಮುಖ್ಯಮಂತ್ರಿ ಅವರ ಕರ್ತವ್ಯವಾಗಿದೆ. ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕೇವಲ ಬಿಜೆಪಿ(BJP) ಕಾರ್ಯಕರ್ತರಿಗಷ್ಟೇ ಮುಖ್ಯಮಂತ್ರಿಗಳೋ? ಇಲ್ಲವೇ ರಾಜ್ಯದ ಸಮಸ್ತ ಆರುವರೆ ಕೋಟಿ ಜನತೆಗೋ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು.

Praveen Nettar

ಪ್ರವೀಣ್ ನೆಟ್ಟಾರು(Praveen Nettaru) ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಅವರು ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್ ಮನೆಗೆ ಹೋಗದಿರಲು ಕಾರಣ ಏನೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಒತ್ತಾಯಿಸಿದ್ದಾರೆ. ಸರಣಿ ಟ್ವೀಟ್‌(Tweet) ಮಾಡಿರುವ ಅವರು, ರಾಜ್ಯದ ಮುಖ್ಯಮಂತ್ರಿ ಅವರಿಗೆ ಪಕ್ಷ ಇಲ್ಲವೇ ಸರ್ಕಾರದ ಮೇಲೆ ಯಾವುದೇ ನಿಯಂತ್ರಣ ಇಲ್ಲ. ಅಸಹಾಯಕರಾಗಿರುವ ಬೊಮ್ಮಾಯಿಯವರು ಕುರ್ಚಿ ಉಳಿಸಿಕೊಳ್ಳಲಿಕ್ಕಾಗಿ ಆರ್.ಎಸ್.ಎಸ್(RSS) ಹೇಳಿದಂತೆ ಬೊಂಬೆ ರೀತಿ ಕುಣಿಯುತ್ತಿದ್ದಾರೆ.

https://fb.watch/ezt9E_easR/u003c/strongu003eu003cbru003e

ಅವರ ಕುರ್ಚಿಯ ಉಳಿವು, ರಾಜ್ಯದ ಅಳಿವಾಗಿದೆ. ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯಲ್ಲಿ ಯಾಕೆ ಹಿಂದುಳಿದ ಜಾತಿಗಳ ಅದರಲ್ಲೂ ಮುಖ್ಯವಾಗಿ ಬಿಲ್ಲವ ಯುವಕರೇ ಕೋಮುಘರ್ಷಣೆಯಲ್ಲಿ ಬಲಿಯಾಗುತ್ತಿದ್ದಾರೆ? ರಾಜಕೀಯ ಪ್ರಾತಿನಿಧ್ಯ ಕಳೆದುಕೊಳ್ಳುತ್ತಿರುವ ಈ ಸಮುದಾಯದ ಯುವಕರು ಪ್ರಾಣವನ್ನೂ ಯಾಕೆ ಕಳೆದುಕೊಳ್ಳುತ್ತಿದ್ದಾರೆ? ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(Nalin Kumar Kateel) ಅವರು ಬಹಿರಂಗವಾಗಿ ಮುಸ್ಲಿಮರ ಬಗ್ಗೆ ಬೆಂಕಿ ಕಾರಿದರೂ, ಮುಸ್ಲಿಂ ಉದ್ಯಮಿಗಳ ಜೊತೆ ಅವರಿಗೆ ಹಾರ್ದಿಕ ಸಂಬಂಧ ಇರುವುದನ್ನು ಅವರೇ ಹಲವಾರು ಬಾರಿ ಬಹಿರಂಗ ಸಭೆಯಲ್ಲಿ ಹೇಳಿಕೊಂಡಿದ್ದಾರೆ.

Bommai

ಈ ಸಂಬಂಧಗಳು ಕೇವಲ ಸಾಮಾಜಿಕವಾದುದ್ದೇ? ಇಲ್ಲವೇ ವ್ಯಾಪಾರ ವಹಿವಾಟಿನದ್ದೇ? ಎಂದು ಪ್ರಶ್ನಿಸಿದ್ದಾರೆ. ಇನ್ನು ಹತ್ಯೆ ನಡೆಸಿರುವ ದುಷ್ಕರ್ಮಿಗಳು ಯಾವುದೇ ಪಕ್ಷ, ಜಾತಿ, ಧರ್ಮ ಇಲ್ಲವೇ ಸಂಘಟನೆಗಳಿಗೆ ಸೇರಿದ್ದರೂ ಮುಲಾಜಿಲ್ಲದೆ ಅವರನ್ನು ಬಂಧಿಸಿ(Arrest) ಜೈಲಿಗಟ್ಟಬೇಕು. ಯಾವುದಾದರೂ ಸಂಘಟನೆ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದರೆ ಅವುಗಳನ್ನು ನಿಷೇಧಿಸುವ ದಿಟ್ಟತನವನ್ನು ರಾಜ್ಯ ಸರ್ಕಾರ(State Government) ತೋರಬೇಕು. ಹಿಂದುಗಳು ಸತ್ತರೆ ಮುಸ್ಲಿಮರ ಮೇಲೆ, ಮುಸ್ಲಿಮರು ಸತ್ತರೆ ಹಿಂದುಗಳ ಮೇಲೆ ಸಂಶಯ ಪಡುವುದು ಸಾಮಾನ್ಯವಾಗಿಬಿಟ್ಟಿದೆ.

ಇದನ್ನೂ ಓದಿ : https://vijayatimes.com/hdk-allegation-over-bjp-govt-2/u003c/strongu003eu003cbru003e

ಪೊಲೀಸ್ ತನಿಖೆಯೂ ಇದೇ ಜಾಡಿನಲ್ಲಿ ಸಾಗುತ್ತಿರುವುದರಿಂದ ಸಾವಿನ ಹಿಂದಿನ ಅಸಲಿ ಸತ್ಯ ಹೊರಗೆ ಬರದೆ ಮುಚ್ಚಿಹೋಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಆತ್ಮೀಯನಾಗಿದ್ದ ಮೃತ ಪ್ರವೀಣ್ ನೆಟ್ಟಾರ್ ಒಂದಷ್ಟು ಕಾಲ ನಳಿನ್ ಅವರ ಕಾರಿಗೆ ಚಾಲಕನೂ ಆಗಿದ್ದರಂತೆ. ಇಷ್ಟೊಂದು ಆತ್ಮೀಯರಾಗಿದ್ದವರು ದೂರವಾಗಿರುವುದು ಯಾಕೆ? ಪೊಲೀಸರು ಅವರನ್ನೂ ವಿಚಾರಣೆಗೊಳಪಡಿಸಿದರೆ ದುಷ್ಕರ್ಮಿಗಳ ಪತ್ತೆಗೆ ನೆರವಾದೀತು. ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಅಂತಿಮ ದರ್ಶನಕ್ಕೆ ಆಗಮಿಸಿದ ವೇಳೆ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ಕಟೀಲ್‌,

BJP

ಸಚಿವ ಸುನೀಲ್‌ಕುಮಾರ್‌, ವಿ.ಎಚ್.ಪಿ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಸ್ಥಳೀಯ ಶಾಸಕರ ವಿರುದ್ಧ ಭುಗಿಲೆದ್ದ ಜನಾಕ್ರೋಶದ ಹಿನ್ನೆಲೆಯನ್ನೂ ಪೊಲೀಸರು ತನಿಖೆ ಮಾಡಬೇಕಾಗಿದೆ. ದಕ್ಷಿಣ ಕನ್ನಡದ ಇತ್ತೀಚಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳಿಗೂ, ಸಂಘ ಪರಿವಾರದೊಳಗಿನ ಆಂತರಿಕ ಬಿಕ್ಕಟ್ಟುಗಳಿಗೂ ಸಂಬಂಧ ಇರುವಂತೆ ಕಾಣುತ್ತಿದೆ. ಈ ಬೆಳವಣಿಗೆಗಳನ್ನು ಕೂಡಾ ಗಮನದಲ್ಲಿಟ್ಟುಕೊಂಡು ಪೊಲೀಸರು ತನಿಖೆ ನಡೆಸಿದರೆ ಸತ್ಯ ಬಯಲಾದೀತು ಎಂದಿದ್ದಾರೆ.

Tags: bjpCongressKarnatakapoliticalpolitics

Related News

ಶಾಲಾ-ಕಾಲೇಜು ಮತ್ತು ವಿ.ವಿಗಳಲ್ಲಿ ಸಂವಿಧಾನ ಪ್ರಸ್ತಾವನೆಯ ಪಠಣ ಕಡ್ಡಾಯ
ಪ್ರಮುಖ ಸುದ್ದಿ

ಶಾಲಾ-ಕಾಲೇಜು ಮತ್ತು ವಿ.ವಿಗಳಲ್ಲಿ ಸಂವಿಧಾನ ಪ್ರಸ್ತಾವನೆಯ ಪಠಣ ಕಡ್ಡಾಯ

June 2, 2023
ಆಗಸ್ಟ್ 15ಕ್ಕೆ ಗೃಹಲಕ್ಷ್ಮೀ ಯೋಜನೆ ಜಾರಿ ; ಯಾರು ಅರ್ಜಿ ಸಲ್ಲಿಸಬೇಕು..? ಅರ್ಹತೆಗಳೇನು..?
ಪ್ರಮುಖ ಸುದ್ದಿ

ಆಗಸ್ಟ್ 15ಕ್ಕೆ ಗೃಹಲಕ್ಷ್ಮೀ ಯೋಜನೆ ಜಾರಿ ; ಯಾರು ಅರ್ಜಿ ಸಲ್ಲಿಸಬೇಕು..? ಅರ್ಹತೆಗಳೇನು..?

June 2, 2023
ನುಡಿದಂತೆ ನಡೆದ ಕಾಂಗ್ರೆಸ್‌ ಸರ್ಕಾರ : 5 ಗ್ಯಾರಂಟಿ ಜಾರಿ, ಕಂಡೀಷನ್ಗಳೇನು?
ಪ್ರಮುಖ ಸುದ್ದಿ

ನುಡಿದಂತೆ ನಡೆದ ಕಾಂಗ್ರೆಸ್‌ ಸರ್ಕಾರ : 5 ಗ್ಯಾರಂಟಿ ಜಾರಿ, ಕಂಡೀಷನ್ಗಳೇನು?

June 2, 2023
ದೇಶ-ವಿದೇಶ

ಮುಸ್ಲಿಂ ಲೀಗ್ ಸಂಪೂರ್ಣವಾಗಿ ಜಾತ್ಯತೀತ ಪಕ್ಷ : ವಿವಾದವೆಬ್ಬಿಸಿದೆ ರಾಹುಲ್ ಗಾಂಧಿ ಹೇಳಿಕೆ

June 2, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.