Bengaluru: ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಉದಾತ್ತ ಚಿಂತನೆಗಳನ್ನು ಸಾರುವ ನಮ್ಮ ಸಂವಿಧಾನ ನಮ್ಮ ಹೆಮ್ಮೆ. ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ (Ambedkar) ಅವರನ್ನು ನೆನಪಿಸಿಕೊಳ್ಳುವ ದಿನವಿದು, ಅವರ ಆಶಯಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಸಂದೇಶ ನೀಡಿದರು.

ಸಂವಿಧಾನವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (D.K.Shivakumar) ತಿಳಿಸಿದರು. ಸಚಿವರಾದ ಡಾ.ಹೆಚ್. ಸಿ. ಮಹಾದೇವಪ್ಪ (Dr.H.C.Mahadevappa) , ನಾಗೇಂದ್ರ, ಸಭಾಪತಿ ಬಸವರಾಜ ಹೊರಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಜ್ಯ, ದೇಶ, ವಿದೇಶಗಳಿಂದ ನೋಂದಣಿಯಾಗಿದ್ದ ಜನರು ತಾವಿರುವ ಸ್ಥಳದಲ್ಲಿಯೇ ಈ ಕಾರ್ಯಕ್ರಮಕ್ಕೆ ಸಂವಿಧಾನ ಪೀಠಿಕೆ ಓದಿದರು. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿಧಾನಸೌದಧಲ್ಲಿ ಮೊನ್ನೆಯಷ್ಟೇ ಸುದ್ದಿಗೋಷ್ಠಿ ನಡೆದಿದ್ದು, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ (H.C.Mahadevappa) ಈ ಕಾರ್ಯಕ್ರಮದ ಕುರಿತು ಸಂವಿಧಾನದ ಬಗ್ಗೆ ಮಾತನಾಡಿದ್ದರು ಭಾರತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಹಾಗಾಗಿ ಇದು ಉಪಯೋಗವಾಗಲಿದೆ. ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವುದರಿಂದ ಮಕ್ಕಳಲ್ಲಿ ಸಂವಿಧಾನದ ಉದ್ದೇಶ ಅರ್ಥ ಆಗಬೇಕು. ಆದ್ದರಿಂದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದೇವೆ ಎಂದಿದ್ದರು.

ಇದು ಕೇವಲ ಶಾಲಾ-ಕಾಲೇಜುಗಳಿಗೆ ಮಾತ್ರ ಅನ್ವಯವಲ್ಲದೆ ಸರ್ಕಾರೀ ಕಚೇರಿಗಳಿಗೂ ಇದು ಅನ್ವಯ ಮತ್ತು ಸಿ.ಎಂ ಕಚೇರಿಯಲ್ಲೂ ಇದನ್ನು ಓದಬೇಕು ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯತ್ ಅಲ್ಲಿಯೂ ಸಂವಿಧಾನ ಪೀಠಿಕೆಯನ್ನು ಜಾರಿಗೊಳಿಸುತ್ತೇವೆ. ಇದು ಯಾವುದಕ್ಕೂ ಕೌಂಟರ್ ಅಲ್ಲ , ಸಂವಿಧಾನದಲ್ಲಿ ಎಲ್ಲರೂ ಸಮಾನರೇ, ಯಾರು ಕಡಿಮೆ ಅಲ್ಲ, ಹೆಚ್ಚಿಲ್ಲ.
ಹಾಗಾಗಿ ಇದನ್ನು ನಾವು ಜಾರಿ ತರುತ್ತಿದ್ದೇವೆ ಹಾಗು ಮಕ್ಕಳಲ್ಲಿ ಯಾವುದೇ ಜಾತಿ, ಧರ್ಮ ಬರಬಾರದು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನ ಪೀಠಿಕೆಯ ಫೋಟೋ ಹಾಕುತ್ತೇವೆ ಎಂದು ಹೇಳಿದರು.
ಭವ್ಯಶ್ರೀ ಆರ್.ಜೆ