ಈ ದೇಶದ ಅಲಿಬಾಬಾ ಮತ್ತು 40 ಮಂದಿ ಕಳ್ಳರೆಂದರೆ, ಬೊಮ್ಮಾಯಿ ಮತ್ತು ಬಿಜೆಪಿ ನಾಯಕರು : ಸಿದ್ದರಾಮಯ್ಯ

Bengaluru : ಹಳೇ ಮೈಸೂರು ಭಾಗದಲ್ಲಿ ನಡೆದ ಬಿಜೆಪಿಯ ಸಂಕಲ್ಪಯಾತ್ರೆಯಲ್ಲಿ ಗೃಹ ಸಚಿವ ಅಮಿತ್‌ ಶಾ (Siddaramaiah reacted AmitShah’s statement) ನೀಡಿದ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು,

ಬಿಜೆಪಿ ವಿರುದ್ಧ ಸರಣಿ ಆರೋಪಗಳನ್ನು ಟ್ವೀಟ್‌ ಮುಖಾಂತರ ಎಸಗಿದ್ದಾರೆ.

ಹಳೇ ಮೈಸೂರಿನಲ್ಲಿ ಜನಸಂಕಲ್ಪಯಾತ್ರೆಗೆ ಆಗಮಿಸಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ (Siddaramaiah reacted AmitShah’s statement) ಅಮಿತ್‌ ಶಾ,

ಕಾಂಗ್ರೆಸ್‌ (Congress) ಭ್ರಷ್ಟ ಹಾಗೂ ಕುಟುಂಬ ರಾಜಕೀಯ ಮಾಡುವ ಪಕ್ಷ ಎಂದು ನೇರವಾಗಿ ಆರೋಪಿಸಿದರು.

https://vijayatimes.com/siddaramaiah-vs-amitshah/

ಅಮಿತ್‌ ಶಾ ಆರೋಪ ಸಿದ್ದರಾಮಯ್ಯ ಅವರ ಕಿವಿಗೆ ಅಪ್ಪಳಿಸುತ್ತಿದ್ದಂತೆ, ಅಮಿತ್‌ ಶಾ ಹೇಳಿಕೆಯ ಬೆನ್ನಲ್ಲೇ ಬಿಜೆಪಿಯ ವಿರುದ್ಧ ಸರಣಿ ಆರೋಪಗಳನ್ನು ಎಸಗಿದ್ದಾರೆ.

ಸರಣಿ ಟ್ವೀಟ್‌(Tweets) ಮೂಲಕ ಸಿದ್ದರಾಮಯ್ಯ ಅವರು ಮಾಡಿರುವ ಆರೋಪಗಳು ಹೀಗಿವೆ.

ಈ ಕಳ್ಳರ ತಂಡವನ್ನು ಅಧಿಕಾರದಿಂದ ಕಿತ್ತು ಹಾಕುವ ಕೆಲಸವನ್ನು ರಾಜ್ಯದ ಜನತೆ ಮಾಡಬೇಕು.ಕಬ್ಬು ಬೆಳೆಗೆ ಟನ್‌ ಗೆ 3500 ರೂ.

ಕೊಟ್ಟು ಖರೀದಿ ಮಾಡಿ ಎಂದು ನಾನು ಸದನದಲ್ಲಿ ಮನವಿ ಮಾಡಿದ್ದೆ. ನರೇಂದ್ರ ಮೋದಿ ಅವರು ಕಬ್ಬಿನ ಇಳುವರಿಯನ್ನು 10 ರಿಂದ 10.25ಕ್ಕೆ ಹೆಚ್ಚಿಸಿ, 150 ರೂ. ಹೆಚ್ಚು ಕೊಟ್ಟಂತೆ ಮಾಡಿ ಜನರಿಗೆ ಟೋಪಿ ಹಾಕಿದ್ದಾರೆ.

ನಾವು ಅಧಿಕಾರದಲ್ಲಿದ್ದಾಗ ಕಬ್ಬಿನ ಬೆಲೆ ಬಿದ್ದುಹೋದಾಗ 1800 ಕೋಟಿ ರೂ. ಅನ್ನು ರೈತರಿಗೆ ನೀಡಿ ರೈತರನ್ನು ಕಾಪಾಡುವ ಕೆಲಸ ಮಾಡಿದ್ದೆವು. ಬಿಜೆಪಿ ಸರ್ಕಾರ ಕೈಕಟ್ಟಿ ಕೂತಿದೆ.

ನಾವು ಮಹದಾಯಿ ಯೋಜನೆಯನ್ನು ಜಾರಿ ಮಾಡುತ್ತೇವೆ ಎನ್ನುವ ಸಿಎಂ ಬೊಮ್ಮಾಯಿ (Basavaraj bommai) ಅವರೇ, 22-7-2020ರಲ್ಲಿ ನೋಟಿಫಿಕೇಷನ್‌ ಆಗಿತ್ತು,

ಎರಡು ವರ್ಷ 9 ತಿಂಗಳು ಯೋಜನೆ ಕೈಗೆತ್ತಿಕೊಳ್ಳದೆ ಸುಮ್ಮನಿದ್ದದ್ದು ಯಾಕೆ? ಎಂದು ಪ್ರಶ್ನಿಸುವ ಮುಖೇನ ಸರಣಿ ಟ್ವೀಟ್‌ ಮಾಡಿ ಆರೋಪಿಸಿದ್ದಾರೆ.

Exit mobile version