ಕುಮಾರಸ್ವಾಮಿ ಹೇಳಿದ್ರು ಅಂಥ ನಾನು ಹೊಸ ಪಕ್ಷ ಕಟ್ಟಕಾಗುತ್ತಾ , ಕಟ್ಟಿದ್ರೆ…: ಸಿದ್ದರಾಮಯ್ಯ

Bengaluru : ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ಕರ್ನಾಟಕದಲ್ಲಿ ಸ್ವಂತ ಪಕ್ಷ ಕಟ್ಟಲಿ. ಆ ಮೂಲಕ ಕನಿಷ್ಠ ಐದು ಸ್ಥಾನ ಗೆದ್ದು ತೋರಿಸಲಿ ಅಂತ ಹೆಚ್.ಡಿ ಕುಮಾರಸ್ವಾಮಿ(HD Kumaraswamy) ಹಾಕಿದ ಸವಾಲಿಗೆ ಸಿದ್ಧರಾಮಯ್ಯ(Siddaramaiah responded Kumaraswamy’s challenge) ಅವರು ಖಡಕ್ಕಾಗಿಯೇ ಉತ್ತರ ನೀಡಿದ್ದಾರೆ.

ನೋಡ್ರಿ ಕುಮಾರಸ್ವಾಮಿ ಹೇಳಿದ್ರು ಅಂಥ ನಾನು ಹೊಸ ಪಕ್ಷ ಕಟ್ಟಬೇಕಾ? ಹೊಸ ಪಕ್ಷ ಕಟ್ಟಿದ್ರೆ ಬಿಜೆಪಿಯನ್ನು ಸೋಲಿಸುವವರು ಯಾರು?

ಬಿಜೆಪಿಯನ್ನು ಮಣಿಸುವುದೇ ಕಾಂಗ್ರೆಸ್‌ ಪಕ್ಷದ ಉದ್ದೇಶ ಎಂದು ಕಟುವಾಗಿಯೇ ಉತ್ತರಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಸ್ವಂತವಾಗಿ ಪಕ್ಷ ಕಟ್ಟಲಿ ಎಂದು ಹೆಚ್‌.ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ನೇರವಾಗಿ ಸವಾಲು ಹಾಕಿದ್ದಾರೆ.

ಕರ್ನಾಟಕದ ರಾಯಚೂರಿನಲ್ಲಿ(Raichur) ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಅವರು ಅಷ್ಟು ಎತ್ತರದ ನಾಯಕರಾಗಿದ್ದರೆ,

ತಾನು ಕಾಂಗ್ರೆಸ್‌ನಿಂದ(Congress) ಹೊರಬಂದು ತಮ್ಮದೇ ಆದ ಪಕ್ಷವನ್ನು ರಚಿಸುವಂತೆ ಸವಾಲು ಹಾಕುತ್ತೇನೆ.

ಹಾಗೆ ಮಾಡಿದರೆ ಐದು ಸೀಟುಗಳನ್ನಾದರೂ ಗೆಲ್ಲಬಹುದೇ? ಕರ್ನಾಟಕದಲ್ಲಿ ಸ್ವಂತ ಪಕ್ಷ ಕಟ್ಟುವ ಮೂಲಕ ಕನಿಷ್ಠ ಐದು ಸ್ಥಾನ ಗೆಲ್ಲಲಿ ನೋಡೋಣ ಅಂತ ಕುಮಾರಸ್ವಾಮಿ ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿದ್ರು.

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್(JDS) 20 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯ ಬೆನ್ನಲ್ಲೇ ಈ ಸವಾಲು ಎಸಗಿದ ಹೆಚ್.ಡಿ ಕುಮಾರಸ್ವಾಮಿ ಅವರು, ಇನ್ನು ಈ ಚುನಾವಣೆಯ ನಂತರ ಜೆಡಿಎಸ್ ದೇಶಾದ್ಯಂತ(Siddaramaiah responded Kumaraswamy’s challenge) ಪ್ರಜ್ವಲಿಸಲಿದೆ ಎಂದು ಡಿ.ಕೆ ಶಿವಕುಮಾರ್(DK Shiva Kumar) ಹಾಗೂ ಸಿದ್ದರಾಮಯ್ಯ ಅವರಿಗೆ ಈ ಮೂಲಕ ತಿಳಿಸುತ್ತೇನೆ ಎಂದು ಹೇಳಿದರು.

ಸದ್ಯ ಹೆಚ್.ಡಿ ಕುಮಾರಸ್ವಾಮಿ ಅವರ ಈ ಸವಾಲಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು,

ನೋಡ್ರಿ ಕುಮಾರಸ್ವಾಮಿ ಹೇಳಿದ್ರು ಅಂಥ ನಾನು ಹೊಸ ಪಕ್ಷ ಕಟ್ಟಬೇಕಾ? ಹೊಸ ಪಕ್ಷ ಕಟ್ಟಿದ್ರೆ ಬಿಜೆಪಿಯನ್ನು ಸೋಲಿಸುವವರು ಯಾರು? ಬಿಜೆಪಿಯನ್ನು ಮಣಿಸುವುದೇ ಕಾಂಗ್ರೆಸ್‌ ಪಕ್ಷ ಎಂದು ಹೇಳಿದರು.

ಇದನ್ನೂ ಓದಿ: ಕಳಪೆ ಆಹಾರ ವಿರೋಧಿಸಿದ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರನೂಕಿದ ಅಧಿಕಾರಿ

2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಕರ್ನಾಟಕದಲ್ಲಿ 37 ಶಾಸಕ ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು 78 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‌ನೊಂದಿಗೆ ಚುನಾವಣಾ ನಂತರದ ಮೈತ್ರಿಯಾದ ವೇಳೆ ಹೆಚ್.ಡಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾದರು.

2019 ರಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ದಕ್ಷಿಣ ರಾಜ್ಯವು ಏಪ್ರಿಲ್ ಮಧ್ಯದೊಳಗೆ ಅಥವಾ ಮೇ ತಿಂಗಳ ಆರಂಭದಲ್ಲಿ ವಿಧಾನಸಭಾ ಚುನಾವಣೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ!

Exit mobile version