ದೇಶದಲ್ಲಿ ಇಂಗ್ಲೀಷಗೆ(English) ಪರ್ಯಾಯವಾಗಿ ಹಿಂದಿ(Hindi) ಭಾಷೆಯನ್ನು ಬಳಸಬೇಕೆ ಹೊರತು ಪ್ರಾದೇಶಿಕ ಭಾಷೆಗಳನ್ನಲ್ಲ ಎಂದು ಫರ್ಮಾನು ಹೊರಡಿಸಿರುವ ಕೇಂದ್ರ(Central) ಗೃಹ ಸಚಿವ(HomeMinister) ಅಮಿತ್ ಶಾ(Amit Shah) ಆದೇಶವನ್ನು ಒರ್ವ ಸ್ವಾಭಿಮಾನಿ ಕನ್ನಡಿಗನಾಗಿ ಅದನ್ನು ಖಂಡಿಸುತ್ತೇನೆ. ಈ ರೀತಿ ಹೇಳುವುದು ‘ಸಾಂಸ್ಕೃತಿಕ ಭಯೋತ್ಪಾದನೆ’ಯಾಗಿದೆ ಎಂದು ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಅಮಿತ್ ಶಾ ಹೇಳಿಕೆಯನ್ನು ಸರಣಿ ಟ್ವೀಟ್(Tweet) ಮಾಡಿ ತೀವ್ರವಾಗಿ ಖಂಡಿಸಿದ್ದಾರೆ.
ಕೇಂದ್ರ ಗೃಹಸಚಿವ @AmitShah ಅವರ ಹೇಳಿಕೆ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲ, ಮಾತೃಭಾಷೆಗಳಿಗೆ ಮಾಡಿರುವ ಅವಮಾನವಾಗಿದೆ. ಅನಗತ್ಯ ಘರ್ಷಣೆಗೆ ಎಡೆಮಾಡಿಕೊಡುವ ಈ ಬೇಜವಾಬ್ದಾರಿ ಹೇಳಿಕೆಯನ್ನು ಅಮಿತ್ ಶಾ ಅವರು ತಕ್ಷಣ ಹಿಂದೆಗೆದುಕೊಳ್ಳಬೇಕು.
— Siddaramaiah (@siddaramaiah) April 8, 2022
8/8#IndiaAgainstHindiImposition
ಇನ್ನು ಕೇಂದ್ರದಲ್ಲಿ ಬಿಜೆಪಿ ಸರ್ಕಾರ(BJP Government) ಅಧಿಕಾರಕ್ಕೆ ಬಂದಾಗಿನಿಂದ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಬಿಂಬಿಸಲಾಗುತ್ತಿದೆ. ದಕ್ಷಿಣ ಭಾರತದ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ಎಲ್ಲ ಹಿಂದಿಯೇತರ ರಾಜ್ಯಗಳು ಕೂಡಿ ಪ್ರತಿಭಟಿಸುವ ಕಾಲ ಬಂದಿದೆ. ನಮ್ಮ ಭಾಷಾ ನಿಲುವು ಮತ್ತು ದೇಶ-ರಾಜ್ಯಗಳ ಸಂಬಂಧವನ್ನು ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಎಂಬ ಸಿದ್ದಾಂತಕ್ಕೆ ನಾವು ಬದ್ದರಾಗಿದ್ದೇವೆ.
ನಾವು ಹಿಂದಿ, ತಮಿಳು, ತೆಲುಗು, ಗುಜರಾತಿ ಸೇರಿದಂತೆ ಯಾವುದೇ ಭಾಷೆಯ ವಿರೋಧಿಗಳಲ್ಲ. ಆದರೆ ಕರ್ನಾಟಕದಲ್ಲಿ ನಮಗೆ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ ಎಂದಿದ್ದಾರೆ. ಇನ್ನು ಅಮಿತ್ ಶಾ ಅವರ ಮಾತೃಭಾಷೆ ಗುಜರಾತಿ. ಆದರೆ ಅವರು ತಮ್ಮ ಮಾತೃಭಾಷೆಯನ್ನು ಕಡೆಗಣಿಸಿ, ಹಿಂದಿ ಭಾಷೆಯ ಗುಲಾಮಗಿರಿ ಮಾಡುತ್ತಿರುವುದು ವಿಷಾದನೀಯ. ಗುಜರಾತಿನ ಮಣ್ಣಿನ ಮಗನಾದ ಮಹಾತ್ಮ ಗಾಂಧಿಯವರು ಬಹುಸಂಸ್ಕೃತಿಕಗಳ ಮತ್ತು ಬಹು ಭಾಷೆಗಳ ಪ್ರತಿಪಾದಕರಾಗಿದ್ದರು.
ಗುಜರಾತಿನಿಂದ ಬಂದಿರುವ @AmitShah ಅವರ ಮಾತೃಭಾಷೆ ಗುಜರಾತಿ. ಇವರು ತಮ್ಮ ಮಾತೃಭಾಷೆಯನ್ನೇ ಕಡೆಗಣಿಸಿ ಹಿಂದಿ ಭಾಷೆಯ ಗುಲಾಮಗಿರಿ ಮಾಡುತ್ತಿರುವುದು ವಿಷಾದನೀಯ.
— Siddaramaiah (@siddaramaiah) April 8, 2022
5/8#IndiaAgainstHindiImposition
ಆದರೆ ಅಮಿತ್ ಶಾ ಏಕ ಸಂಸ್ಕೃತಿಕ ಮತ್ತು ಏಕ ಭಾಷೆಯ ಪ್ರತಿಪಾದಕ ಸೂಡೋ ರಾಷ್ಟ್ರೀಯವಾದಿ ಸಾರ್ವಕರ್ ಹಿಂಬಾಲಕರಾಗಿರುವುದು ದುರಂತವಾಗಿದೆ. ಅಮಿತ್ ಶಾ ಅವರು ನೀಡಿರುವ ಹೇಳಿಕೆ ಒಕ್ಕೂಟ ವ್ಯವಸ್ಥೆಗೆ ವಿರುದ್ದವಾಗಿದೆ. ರಾಜ್ಯಗಳ ಮಾತೃಭಾಷೆಗಳಿಗೆ ಮಾಡಿದ ಅಪಮಾನವಾಗಿದೆ. ಈ ರೀತಿಯ ಹೇಳಿಕೆಗಳಿಂದ ಸಂಘರ್ಷ ಏರ್ಪಡುತ್ತದೆ. ಗೃಹ ಸಚಿವರಾದವರು ಅತ್ಯಂತ ಜವಾಬ್ದಾರಿಯಿಂದ ಹೇಳಿಕೆಗಳನ್ನು ನೀಡಬೇಕೆಂದರು.