ರಾಜ್ಯದಲ್ಲಿ ಬರಗಾಲ ಬಿದ್ದು ಆರು ತಿಂಗಳಾಗಿದೆ ಕೇಂದ್ರ ಸರಕಾರ ಈಗಾಗಲೇ 360 ಕೋಟಿ ರೂ. ಒಂದು (Siddaramaiah vs Basavaraj Bommai) ಕಂತು ಬಿಡುಗಡೆ ಮಾಡಿದ್ದು.
ಇನ್ನೊಂದು ಕಂತು ಬಿಡುಗಡೆ ಮಾಡಲಿದೆ. ಬರ ಪರಿಹಾರಕ್ಕೆ (Drought Relief) ರಾಜ್ಯದಿಂದ ನಯಾಪೈಸೆಯನ್ನು ಬಿಡುಗಡೆ ಮಾಡಿಲ್ಲ. ರಾಜ್ಯದ ಆಪತ್ತು ನಿಧಿಯ ಹಣವನ್ನು ಬಿಡುಗಡೆ
ಮಾಡದೇ ಕೇಂದ್ರದ ಕಡೆಗೆ ರಾಜಕೀಯವಾಗಿ ಬೊಟ್ಟು ಮಾಡಲಾಗುತ್ತಿದೆ. ಹಿಂದೆ ನಮ್ಮ ಸರ್ಕಾರ ಇದ್ದಾಗ ಕೇಂದಕ್ಕೆ ಕಾಯದೇ 2500 ಕೋಟಿ ರೂ. ಬಿಡುಗಡೆ ಮಾಡಿರುವುದು ನಮ್ಮ ಕಣ್ಣ
ಮುಂದೆಯೇ ಇದೆ. ಹೀಗಿದ್ದರೂ ರಾಜ್ಯ ಸರ್ಕಾರ ಯಾಕೆ ಹಣ ಬಿಡುಗಡೆ ಮಾಡಬಾರದು. ತಮ್ಮ ಮೇಲಿನ ಜವಾಬ್ದಾರಿಯನ್ನು ಕೇಂದ್ರದ ಮೇಲೆ ಹಾಕಿದರೆ ರಾಜ್ಯದ ಜನರು ಇವರಿಗೆ ಯಾಕೆ ಅಧಿಕಾರ
ಕೊಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಸುದಿರ್ಘ ಟ್ವೀಟ್ ಮಾಡಿರುವ ಅವರು, 15ನೇ ಹಣಕಾಸಿನ ಆಯೋಗ ತನ್ನ ರೂಪುರೇಷೆಗಳನ್ನು ತಯಾರು ಮಾಡುವಾಗ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ (Congress)
ಸರ್ಕಾರ ಇತ್ತು. ಆಗ ರಾಜ್ಯದ ಪರಿಸ್ಥಿತಿ ಮನವರಿಕೆ ಮಾಡಿಕೊಡದೇ ಇವತ್ತು ರಾಜ್ಯದ ತೆರಿಗೆ ಪಾಲು ಶೇ 4.7 ನಿಂದ ಶೇ 3.6ಕ್ಕೆ ಇಳಿದಿದ್ದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ. ಹಣಕಾಸಿನ
ಆಯೋಗ ಸಂವಿಧಾನ ಬದ್ಧವಾಗಿ (Siddaramaiah vs Basavaraj Bommai) ರಚಿತವಾಗಿರುವ ಸ್ವತಂತ್ರ ಆಯೋಗ.
ಅದಕ್ಕೂ ಕೇಂದ್ರ ಸರ್ಕಾರಕ್ಕೆ ಯಾವುದೇ ನೇರವಾದ ಸಂಬಂಧ ಇರುವುದಿಲ್ಲ. ಇದು ಗೊತ್ತಿದ್ದು ಮುಖ್ಯಮಂತ್ರಿಗಳು ರಾಜಕಾರಣ ಮಾಡುತ್ತಿದ್ದಾರೆ. ಆದಾಗ್ಯೂ 14ನೇ ಹಣಕಾಸಿನಲ್ಲಿ 14996 ಕೋಟಿ ರೂ.
ಮಾತ್ರ ಬಂದಿದೆ. 15ನೇ ಹಣಕಾಸಿನ ಆಯೋಗ ಇದುವರೆಗೂ 1,16,828 ಕೋಟಿ ರೂ. ಬಿಡುಗಡೆ ಮಾಡಿದೆ. 15ನೇ ಹಣಕಾಸು ಆಯೋಗದ ಅವಧಿ 2026ರ ವರೆಗೂ ಇದೆ. ಒಟ್ಟು 2.5 ಲಕ್ಷ ಕೋಟಿಗೂ
ಮೀರಿ ತೆರಿಗೆ ಹಂಚಿಕೆ ಬರಲಿದೆ.
ಕೇಂದ್ರ ಸರ್ಕಾರವು ಸಹಭಾಗಿತ್ವದ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿರುವುದರಿಂದ ರಾಜ್ಯದ ಸಂಚಿತ ನಿಧಿಯಿಂದ ನೆರವು ಕೊಡುವ ವಿಧಾನ ಬದಲಾಗಿರುವುದು
ನಿಮಗೆ ಗೊತ್ತಿದೆ. ಆದ್ದರಿಂದ ಸಂಚಿತ ನಿಧಿ ಮತ್ತು ನೇರವಾಗಿ ಬರುತ್ತಿರುವ ಅನುದಾನವನ್ನು ಸೇರಿಸಿ ರಾಜ್ಯಕ್ಕೆ ಒಟ್ಟು ಸರಿಯಾದ ಲೆಕ್ಕ ಸಿಗುತ್ತದೆ. ಮುಖ್ಯಮಂತ್ರಿಗಳಿಗೆ ಈ ವಿಚಾರ ಗೊತ್ತಿದ್ದು, ಸಂಚಿತ
ನಿಧಿಗೆ ಬಂದ ಹಣವನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಂಡು ಅರ್ಧ ಸತ್ಯವನ್ನು ಹೇಳುತ್ತಿದ್ದಾರೆ.
ಕರ್ನಾಟಕಕ್ಕೆ (Karnataka) ವಿಶೇಷ ಅನುದಾನ ಹಣಕಾಸಿನ ಆಯೋಗದ ಅಂತಿಮ ವರದಿಯಲ್ಲಿ ಶಿಫಾರಸ್ಸು ಆಗಿರುವುದಿಲ್ಲ ಕಳೆದ ಐದು ವರ್ಷದಿಂದ ಮಧ್ಯಂತರ ವರದಿಯನ್ನೇ ಇಟ್ಟುಕೊಂಡು
ಸಿದ್ದರಾಮಯ್ಯ (Siddaramaiah) ಅವರು ತಮ್ಮ ರಾಜಕೀಯ ವಾದಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ. ಇದಾಗ್ಯೂ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.
ನೀಡಿರುವುದನ್ನು ಮುಖ್ಯಮಂತಿಗಳು ಎಲ್ಲಿಯೂ ಉಲ್ಲೇಖ ಮಾಡುವುದಿಲ್ಲ. ಮತು ಬೆಂಗಳೂರಿನ ಔಟರ್ ರಿಂಗ್ ರೋಡಿಗೆ 5500 ಕೋಟಿಗೂ ಹೆಚ್ಚು ಹಣವನ್ನು ಕೇಂದ್ರ ಸರ್ಕಾರ ನೀಡಿದ್ದರೂ,
ಆ ಯೋಜನೆಯನ್ನು ಇನ್ನೂ ಪಾರಂಭ ಮಾಡಿಲ್ಲ.
ಕೃಷ್ಣಾ ಹಾಗೂ ಮಹಾದಾಯಿ ಯೋಜನೆಗಳು ಕೋರ್ಟ್ನಲ್ಲಿ ಇರುವ ವಿಚಾರ ಗೊತ್ತಿದ್ದರೂ, ಮುಖ್ಯಮಂತ್ರಿಗಳು ಅನಗತ್ಯವಾಗಿ ಆರೋಪ ಮಾಡುತ್ತಿರುವುದು ಸೋಜಿಗ ಪಥಮ ಬಾರಿ ಕೇಂದ್ರದಿಂದ
ನಾಲ್ಕು ಮೆಡಿಕಲ್ ಕಾಲೇಜುಗಳನ್ನು (Medical college) ಕೊಟ್ಟಿರುವಂಥದ್ದು ಮೊದಿ ಸರ್ಕಾರ. ಚಿಕ್ಕಬಳ್ಳಾಪುರ, ಹಾವೇರಿ, ಚಿಕ್ಕಮಗಳೂರು ಹಾಗೂ ಕೊಡಗು ಮೆಡಿಕಲ್ ಕಾಲೇಜುಗಳನ್ನು ನೀಡಿದ್ದು
ಮೋದಿ ಸರ್ಕಾರ. ಇದುವರೆಗೂ ಕಾಂಗ್ರೆಸ್ ಸರ್ಕಾರದಿಂದ ಒಂದೂ ಮೆಡಿಕಲ್ ಕಾಲೇಜು ಕೊಡಲು ಆಗಿಲ್ಲ. ಏಮ್ಸ್ (AIMS) ಸಂಸ್ಥೆಯನ್ನು ಹೊರ ರಾಜ್ಯಗಳಿಗೆ ಕೊಡಬಾರದು ಎಂಬ ನಿಯಮ
ಮಾಡಿರುವುದರಿಂದ ಏಮ್ಸ್ ಸಮನಾದಂತಹ ಸಂಸ್ಥೆಯನ್ನು ಕೊಡಲು ಕೇಂದ್ರ ಸಿದ್ಧವಿದ್ದು, ರಾಜ್ಯ ಸರ್ಕಾರ ಪಸ್ತಾವನೆ ಕಳಿಸಿದರೆ, ಕೇಂದ್ರ ಸರ್ಕಾರ ನೀಡಲಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆರಂಭದಿಂದಲೂ ಖಾಸಗಿ ವಲಯದಿಂದಲೇ ಆರಂಭಿಸಬೇಕು ಎಂದು ಕಾಂಗ್ರೆಸ್ ಕಾಲದಲ್ಲಿಯೇ ನಿರ್ಧಾರ ಆಗಿತ್ತು. ಟಾಟಾ, ಎಲ್ ಆಂಡ್ ಟಿ
ನಂತರ ಜಿವಿಕೆ ಸಂಸ್ಥೆ ತೆಗೆದುಕೊಂಡಿರುವುದು ಕಾಂಗ್ರೆಸ್ ಅವಧೀಯಲ್ಲಿಯೇ, ನಡೆದಿರುವ ಸತ್ಯವನ್ನು ಮುಖ್ಯಮಂತಿಗಳು ಮುಚ್ಚಿಟ್ಟು, ಸುಳ್ಳನ್ನೇ ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಸಬರಬನ್ ರೈಲಿಗೆ
ಈಗಾಗಲೇ ಮೊದಲ ಅಂತದ ಯೋಜನೆಗೆ 700 ಕೋಟಿ ರೂ. ಟೆಂಡರ್ ಆಗಿದೆ. ಯೋಜನಾ ವರದಿಯನ್ನು ಬದಲಾವಣೆ ಮಾಡಲು ಮುಂದಾಗಿರುವುದರಿಂದ ಬಾಕಿ ಹಣ ಬಿಡುಗಡೆಗೆ ವಿಳಂಬವಾಗಿದೆ.
ಕೂಡಲೇ ಯೋಜನಾ ವರದಿಯನ್ನು ಸರಿಪಡಿಸಿದರೆ ಈಗಲೂ ಕೂಡ ಕೇಂದ್ರದಿಂದ ಹಣ ಬರಲಿದೆ. ಈಗಾಗಲೇ 23-24ನೇ ಸಾಲಿನ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಸಬರಬನ್ ಯೋಜನೆಗೆ 15000 ಕೋಟಿ ರೂ.
ಮಂಜೂರು ಮಾಡಿದೆ. ಇದರಲ್ಲಿ ಮೋದಿ ಸರ್ಕಾರದ ಯಾವುದೇ ಲೋಪವಿಲ್ಲ.
ಕಳೆದ ಐದು ವರ್ಷದಲ್ಲಿ ಎಷ್ಟು ಖರ್ಚು ಮಾಡಲಾಗಿದೆಯೋ ಅಷ್ಟು ಹಣವನ್ನು ಇತರ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಂದೇ ವರ್ಷದಲ್ಲಿ 7000 ಕೋಟಿ ರೂ. ನೀಡಿದೆ. ಇಷ್ಟೆಲ್ಲಾ ರಂಗದಲ್ಲಿ
ಮೋದಿ ಸರ್ಕಾರ ಸಹಾಯ ಮಾಡುತ್ತಿದ್ದರೂ ಕೂಡ ನಿಮಗೆ ಮೋದಿಯವರ ಬಗ್ಗೆ ಅಸೂಯೆ ಇದೆ. ಮೋದಿಯವರು ಭಾರತವನ್ನು ಅಭಿವೃದ್ದಿ ಎಡೆಗೆ ತೆಗೆದುಕೊಂಡು ಹೋಗುತ್ತಿರುವುದು. ಆರ್ಥಿಕವಾಗಿ
ವಿಶ್ವದಲ್ಲಿ ಮೂರನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಿರುವುದು. ಅವರು ಭಾರತವನ್ನು ವಿಕಸಿತ ಭಾರತವನ್ನಾಗಿ ಮಾಡುತ್ತಿರುವುದು ನಿಮಗೆ ಸಹಿಸಲು ಸಾಧ್ಯವಾಗುತ್ತಿಲ್ಲ.
ಕಳೆದ ಏಳು ತಿಂಗಳಿಂದ ನಯಾ ಪೈಸೆ ಅಭಿವೃದ್ಧಿಗೆ ಖರ್ಚು ಮಾಡದೇ, ನೀರಾವರಿ ಯೋಜನೆಗಳು, ರಸ್ತೆ, ಕುಡಿಯುವ ನೀರು, ಶಾಲೆ, ಆಸ್ಪತ್ರೆಗಳ ನಿರ್ಮಾಣ ಪಗತಿ ಎಲ್ಲವೂ ಕುಂಠಿತಗೊಂಡಿವೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3000 ಕೋಟಿ ರೂ. ಅನುಮೋದನೆಯಾಗಿದ್ದು, ಜನೇವರಿವರೆಗೂ ನಯಾ ಪೈಸೆ ಖರ್ಚಾಗಿಲ್ಲ. ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರ ಗಾಢವಾದ ನಿದ್ರೆಯಲ್ಲಿ
ಇರುವುದು ಜನ ಸಾಮಾನ್ಯರ ಮಾತಾಗಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದಿದ್ದಾರೆ.