Visit Channel

ಸಿದ್ದರಾಮಯ್ಯ ಯಾವಾಗ ಜ್ಯೋತಿಷಿ ಆದ್ರೋ ಗೊತ್ತಿಲ್ಲ; ಅವರ ಭವಿಷ್ಯ ನಿಜವಾಗಲ್ಲ: ಈಶ್ವರಪ್ಪ

WhatsApp Image 2021-01-17 at 6.07.49 PM

ಮೈಸೂರು, ಜ. 18: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಏಪ್ರಿಲ್ ನಲ್ಲಿ ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಆಗುತ್ತೆ ಅಂತ ಭವಿಷ್ಯ ನುಡಿದಿದ್ದಾರೆ‌. ಅವರು ಯಾವಾಗ ಜ್ಯೋತಿಷಿ ಆದರೋ ಗೊತ್ತಿಲ್ಲ. ಆದರೆ, ಅವರು ನುಡಿದ ಭವಿಷ್ಯ ನಿಜವಾಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಭಾನುವಾರ ಮಾಧ್ಯಮ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕ್ಯಾಲೆಂಡರ್‌ನಲ್ಲಿರುವ ಎಲ್ಲ ತಿಂಗಳಲ್ಲೂ ಸಿಎಂ ಬದಲಾಗ್ತಾರೆ ಅಂತ ಹೇಳುತ್ತಾ ಇರುತ್ತಾರೆ. ಆದರೆ, ಅವರು ನುಡಿವ ಭವಿಷ್ಯ ಎಂದಿಗೂ ನಿಜವಾಗುವುದಿಲ್ಲ ಎಂದರು.

ಮೊದಲು ಗ್ರಾಮ ಪಂಚಾಯಿತಿ ಚುನಾವಣೆ ಆದಮೇಲೆ ಸಿಎಂ ಬದಲಾವಣೆ ಆಗುತ್ತಾರೆ ಅಂತ ಹೇಳಿದ್ದರು. ಅದು ಸುಳ್ಳಾಯಿತು. ಇದೀಗ ಏಪ್ರಿಲ್ ತಿಂಗಳು ಅಂತ ಹೇಳುತ್ತಿದ್ದಾರೆ. ನಂತರ ಮೇ, ಜೂನ್ ಅನ್ನುತ್ತಾರೆ. ಕ್ಯಾಲೆಂಡರ್ ನಲ್ಲಿರುವ ಎಲ್ಲ ತಿಂಗಳನ್ನೂ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.

Latest News

BJP
ರಾಜಕೀಯ

ಬಿಜೆಪಿ ನಾಯಕರು ನಮಗೆ ದೇಶಪ್ರೇಮದ ಪಾಠ ಮಾಡುವುದು ಆತ್ಮವಂಚನೆಯಾಗುತ್ತದೆ : ಸಿದ್ದರಾಮಯ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕರಾವಳಿಯಲ್ಲಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು(Praveen Nettaru) ಮನೆಗೆ ಮಾತ್ರ ಹೋಗಿ ಪರಿಹಾರ ಕೊಟ್ಟಿದ್ದಾರೆ.

Malyalam
ಮನರಂಜನೆ

ನಟನೆಯಲ್ಲಿ ಸೋಲನ್ನು ಕಂಡರೂ ಕುಗ್ಗದೆ, ಇಂದು ಭಾರತ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ನಟ ಫಹಾದ್ ಫಾಸಿಲ್!

ಫಹಾದ್ ಸಿನಿಮಾಗಳು ತಕ್ಕಮಟ್ಟಿಗೆ ಹಿಟ್ ಎನಿಸಿದರೂ, ಇವರ ಈಗಿನ ಸಿನಿಮಾ ಪ್ರಸಿದ್ಧಿಗೆ ಹೋಲಿಸಿದರೆ ಹಿಂದಿನ ಸಿನಿಮಾಗಳು ಏನೇನೂ ಆಗಿರಲಿಲ್ಲ.

Kabbadi Player
ದೇಶ-ವಿದೇಶ

ಪಲ್ಟಿ ಹೊಡೆಯುವ ಯತ್ನದಲ್ಲಿ ಕುಸಿದು ಬಿದ್ದು ಕಬಡ್ಡಿ ಆಟಗಾರ ಸಾವು! ; ವೀಡಿಯೋ ವೈರಲ್

ಕಬಡ್ಡಿ(Kabbadi) ಆಟಗಾರರೊಬ್ಬ ಸೋಮರ್ ಸಾಲ್ಟ್ ಹೊಡೆಯುತ್ತಿದ್ದಾಗ ಕುಸಿದು ಬಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ(Hospital) ಮೃತಪಟ್ಟಿದ್ದಾರೆ.

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,