ಕರ್ನಾಟಕ ಗೆಜೆಟಿಯರ್‌ ಇಲಾಖೆಯ ಮುಖ್ಯ ಸಂಪಾದಕರಾಗಿ ರೋಹಿಣಿ ಸಿಂಧೂರಿ ನೇಮಕ !

Bengaluru: ಈ ಹಿಂದೆ ವರ್ಗಾವಣೆಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ (Sindhuri in Gazetteer Dept) ಕೊನೆಗೂ ರಾಜ್ಯ ಸರ್ಕಾರ ಹುದ್ದೆ ನೀಡುವ

ಮೂಲಕ ಕರ್ನಾಟಕ ಗೆಜೆಟಿಯರ್ ಇಲಾಖೆಗೆ ಮುಖ್ಯ ಸಂಪಾದಕರನ್ನಾಗಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಜೊತೆಗಿನ ವಿವಾದದ ಆರು ತಿಂಗಳ ಬಳಿಕ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸರ್ಕಾರ ಹುದ್ದೆ ನಿಯೋಜನೆ ಮಾಡಿದ್ದು,

ಈಗ ರೋಹಿಣಿ ಸಿಂಧೂರಿ ಅವರು ಕರ್ನಾಟಕ ಗೆಜೆಟಿಯರ್‌ ಡಿಪಾರ್ಟ್‌ಮೆಂಟ್‌ನ ಮುಖ್ಯ ಸಂಪಾದಕರಾಗಿದ್ದಾರೆ. ಬುಧವಾರ ರಾಜ್ಯದ ಹಲವು ಐಎಎಸ್‌ ಅಧಿಕಾರಿಗಳ ವರ್ಗಾವಣೆಯಾಗಿದ್ದು, ಈ ವೇಳೆ

ಕೆಲವು ದಿನಗಳಿಂದ ಹುದ್ದೆಗಾಗಿ ಕಾದು ಕುಳಿತಿದ್ದ ರೋಹಿಣಿ ಸಿಂಧೂರಿ ಅವರಿಗೆ ಹುದ್ದೆ ನಿಯೋಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈಗಿನಿಂದ ಮುಂದಿನ ಆದೇಶದವರೆಗೂ ಅವರು ಕರ್ನಾಟಕ

ಗೆಜೆಟಿಯರ್‌ ಇಲಾಖೆಯ ಮುಖ್ಯ ಸಂಪಾದಕರ ಹುದ್ದೆ (Sindhuri in Gazetteer Dept) ನಿರ್ವಹಿಸುವಂತೆ ಸೂಚಿಸಲಾಗಿದೆ.

ಕಳೆದ ಕೆಲ ತಿಂಗಳ ಹಿಂದೆ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ನಡುವೆ ಕಿತ್ತಾಟ ನಡೆದಿತ್ತು. ಈ ವೇಳೆ ಇಬ್ಬರಿಗೂ ಸರ್ಕಾರ ಯಾವುದೇ ಹುದ್ದೆಯನ್ನು ನೀಡದೆ ವರ್ಗಾವಣೆ

ಮಾಡಿತ್ತು. ಆದರೆ ಈಗ 6 ತಿಂಗಳಿನ ನಂತರ ಸರ್ಕಾರ ರೋಹಿಣಿ ಸಿಂಧೂರಿ ಅವರಿಗೆ ಈ ಹುದ್ದೆ ನೀಡಿದೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೀಗ ಹಲವು ಐಎಎಸ್ ಅಧಿಕಾರಿಗಳ ನೇಮಕ ಅಲ್ಲದೆ ಇನ್ನುಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಇದೀಗ ರೋಹಿಣಿ ಸಿಂಧೂರಿಗೆ ಕರ್ನಾಟಕ

ಗೆಜೆಟಿಯರ್ ಇಲಾಖೆಗೆ ಮುಖ್ಯ ಸಂಪಾದಕರಾಗಿ ವರ್ಗಾವಣೆ ಮಾಡಿದೆ.

ಐಎಎಸ್‌ ಅಧಿಕಾರಿಗಳ ವರ್ಗಾವಣೆ
೧. ಎಸ್‌ ವಿಕಾಶ್‌ ಕಿಶೋರ್‌ ಅವರನ್ನು ಬಿಬಿಎಂಪಿ ರಾಜರಾಜೇಶ್ವರಿ ನಗರ ವಲಯದ ಆಯ್ತುಕ್ತರಾಗಿ ನಿಯೋಜನೆ ಮಾಡಲಾಗಿದೆ. ಇದಕ್ಕೂ ಮುನ್ನ ಲೋಕಸೇವಾ ಆಯೋಗದ ಕಾರ್ಯದರ್ಶಿಯಾಗಿದ್ದರು.
೨. ಸಂಗಪ್ಪ ಅವರನ್ನು ಕಿಯೋನಿಸ್ಕ್‌ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
೩. ಹುದ್ದೆ ನಿಯೋಜನೆಗೆ ಕಾದಿದ್ದ ಪ್ರದೀಪ್‌ ಜಿ ಅವರನ್ನು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ (ಸೋಶಿಯಲ್‌ ಆಡಿಟ್‌) ನಿರ್ದೇಶಕರಾಗಿ ನಿಯೋಜಿಸಲಾಗಿದೆ.
೪. ಹುದ್ದೆ ನಿಯೋಜನೆ ಕಾದಿದ್ದ ಲತಾ ಕುಮಾರಿ ಅವರನ್ನು ಲೋಕಸೇವಾ ಆಯೋಗದ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
೫. ಹುದ್ದೆ ನಿಯೋಜನೆ ಕಾದಿದ್ದ ಸಿಎಸ್‌ ಸುದೀಂದ್ರ ಅವರನ್ನು ಕರಕುಶಲ ಮತ್ತು ಕೈಮಗ್ಗ ಇಲಾಖೆ ನಿರ್ದೇಶಕರ ಹುದ್ದೆಗೆ ನಿಯೋಜನೆ ಮಾಡಲಾಗಿದೆ.
೬. ರೇಷ್ಮೆ ಸಂಶೋಧನಾ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿದ್ದ ಶ್ರೀರೂಪಾ ಅವರನ್ನು ಕರ್ನಾಟಕ ರಾಜ್ಯ ಮಿನರಲ್ಸ್‌ ಕಾರ್ಪೋರೇಷನ್‌ ಕಾರ್ಯಕಾರಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಇದನ್ನು ಓದಿ: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ; ಅಮೇರಿಕಾವನ್ನೂ ಹಿಂದಿಕ್ಕಿದ ಚೀನಾ, ಭಾರತಕ್ಕೆ ಎಷ್ಟನೆ ಸ್ಥಾನ..?

Exit mobile version