ಲಸಿಕೆ ಪಡೆಯಲು ಜನರ ಹಿಂದೇಟು, ಸಿಂಗಾಪುರ ಮಾದರಿಯತ್ತ ಸರ್ಕಾರ ?

ಬೆಂಗಳೂರು ನ 13 : ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಎರಡನೇ ಡೋಸ್ ಲಸಿಕೆ ಹಂಚಿಕೆ ತೀವ್ರ ಪ್ರಮಾಣದಲ್ಲಿ ಕಳೆಗುಂದಿದೆ. ಇದೇ ಕಾರಣದಿಂದ ತಾಂತ್ರಿಕ ಸಲಹಾ ಸಮಿತಿ ಸಿಂಗಾಪೂರ್ ಮಾದರಿಯನ್ನು ಜಾರಿ ಮಾಡುವಂತೆ ಸರ್ಕಾರಕ್ಕೆ ಹಾಗೂ ಬಿಬಿಎಂಪಿಗೆ ಸಲಹೆ ನೀಡಿದೆ. ಈ ಮೂಲಕ ಎರಡನೇ ಡೋಸ್ ಲಸಿಕೆ ಹಂಚಿಕೆಯನ್ನು ಹೆಚ್ಚಿಸಲು ಸೂಚಿಸಲಾಗಿದೆ.

ರಾಜ್ಯದಲ್ಲಿ ಸುಮಾರು 2 ಕೋಟಿ 46 ಲಕ್ಷ ಜನರಷ್ಟೇ ಈವರೆಗೆ ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಲೆಕ್ಕದ ಪ್ರಕಾರ 4 ಕೋಟಿಗೂ ಅಧಿಕ ಮಂದಿ ಇನ್ನೂ ಎರಡನೇ ಡೋಸ್ ಲಸಿಕೆಯನ್ನೇ ಪಡೆದಿಲ್ಲ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಎರಡನೇ ಡೋಸ್ ಲಸಿಕೆ ಹಂಚಿಕೆಯಾಗಲು ಸಿಂಗಾಪೂರ್ ಮಾದರಿಯನ್ನು ಅನುಸರಿಸಿ ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಕಿವಿ ಮಾತು ಹೇಳಿದೆ.

ಏನಿದು ಸಿಂಗಾಪುರ್ ಮಾದರಿ

ಯಾರು ವ್ಯಾಕ್ಸಿನ್ ಹಾಕಿಸಿಕೊಳ್ಳುವುದಲ್ಲಿವೋ ಅಂಥವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದಿಲ್ಲ. ಈ ನಿಯಮ ಸದ್ಯಕ್ಕೆ ಸಿಂಗಾಪೂರದಲ್ಲಿ ಜಾರಿ ಇದೆ. ಹೀಗಾಗಿ ಅಲ್ಲಿ ಯಶಸ್ವಿಯಾಗಿ ಎರಡನೇ ಡೋಸ್ ಕೂಡ ನಡೆಯುತ್ತಿದೆ ಎಂದು ಇತ್ತೀಚೆಗೆ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಹೀಗಾಗಿ ಇಲ್ಲೂ ಕೂಡ ಅದೇ ಮಾದರಿಯ ನಿಯಮ ಜಾರಿಗೊಳಿಸುವಂತೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ. 

ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲೂ ಎರಡನೇ ಡೋಸ್ ಗಣನೀಯವಾಗಿ ಕಡಿಮೆಯಾಗಿದೆ. 57% ನಷ್ಟು ಮಾತ್ರ ಸದ್ಯಕ್ಕೆ ಬೆಂಗಳೂರಲ್ಲಿ ಎರಡನೇ ಡೋಸ್ ಡ್ರೈವ್ ಮಾಡಲಾಗಿದೆ. ಹೀಗಾಗಿ ಬೆಂಗಳೂರಲ್ಲಿ ಕೂಡ ಸಿಂಗಾಪೂರ್ ಮಾದರಿ ಜಾರಿ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಶೇಕಾಡ 57ರಷ್ಟು ಜನರು ಎರಡನೇ ಡೋಸ್ ವ್ಯಾಕ್ಸಿನೇಷನ್  ಪಡೆದಿದ್ದಾರೆ. ಕೆಲವರು 12 ವಾರಗಳಾದ ನಂತರ ಸಹ ಎರಡನೇ ಡೋಸ್ ವ್ಯಾಕ್ಸಿನ್ ಪಡೆದಿಲ್ಲ. ಅಂತವರಿಗೆ ನಾವು ಕಾಲ್ ಸೆಂಟರ್ ಮೂಲಕ ಕರೆ ಮಾಡಿ ಜಾಗೃತಿಗೊಳಿಸುತ್ತಿದ್ದೇವೆ. ಎಂದು ಅವರು ತಿಳಿಸಿದರು.

Exit mobile version