Bengaluru: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ 2,900ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಪೆನ್ಡ್ರೈವ್ (Pendrive) ಮೂಲಕ ವೈರಲ್ ಆಗಿದ್ದು, ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಅಲ್ಲದೆ ಪ್ರಜ್ವಲ್ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ. ಇದರ ಬೆನ್ನಲ್ಲಿಯೇ 34 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಗುರವಾರ ಮಧ್ಯರಾತ್ರಿ ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಬಂದಿಳಿದರು. ಪ್ರಜ್ವಲ್ ರೇವಣ್ಣ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು.
ಪ್ರಜ್ವಲ್ ರೇವಣ್ಣರನ್ನ SIT ಕಚೇರಿಗೆ ಜೀಪ್ನಲ್ಲಿ ಕರೆತಂದಿದ್ದು ಐವರು ಮಹಿಳಾ ಅಧಿಕಾರಿಗಳು. ಪ್ರಜ್ವಲ್ ರೇವಣ್ಣ (Prajwal Revanna) ಅವರು ಇದ್ದ ಜೀಪ್ನಲ್ಲಿ ಚಾಲಕ ಹೊರತು ಪಡಿಸಿದರೆ ಉಳಿದ ಐವರು ಮಹಿಳಾ ಅಧಿಕಾರಿಗಳೆ ಇದ್ದರು. ಎಸ್ಐಟಿ ಅಧಿಕಾರಿಗಳು ಮೂವರು ಮಹಿಳಾ ಪೊಲೀಸ್ ಪೇದೆಗಳ ಮೂಲಕ ಪ್ರಜ್ವಲ್ ಅವರನ್ನ ವಶಕ್ಕೆ ಪಡೆದಿದ್ದರು. ಮಹಿಳಾ ಪೊಲೀಸರಿಂದಲೇ ಬಂಧಿಸಿದ್ದು ಯಾಕೆ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.
ಕೆಲ ದಿನಗಳಿಂದ ಅಲ್ಲಿದ್ದೇನೆ ,ಇಲ್ಲಿದ್ದೇನೆ ಎಂದು ಎಸ್ ಐಟಿ ಅಧಿಕಾರಿಗಳ ತಾಳ್ಮೆ ಪರೀಕ್ಷೆ ನಡೆಸಿದ್ದ ಪ್ರಜ್ವಲ್ ರೇವಣ್ಣ ಅವರನ್ನ ಮಹಿಳಾ ಪೋಲಿಸರಿಂದಲೇ ಬಂದಿಸಿದ್ದು, ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಅನ್ನು ಎಸ್ ಐಟಿ ಅಧಿಕಾರಿಗಳು ಮಾಡಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ #Sex Assault ಒಳಗಾದ ಸಂತ್ರಸ್ತ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೆಣ್ಣನ್ನು ಕೇವಲವಾಗಿ ನೋಡಿದ ಪ್ರಜ್ವಲ್ಗೆ ಮುಜುಗರ, ಅವಮಾನಿಸಲು, ನಾಚಿಕೆಪಡುವಂತಾಗಲಿ ಎಂದು ಮಹಿಳಾ ಅಧಿಕಾರಿಗಳಿಂದಲೇ ಎಸ್ ಐಟಿ ಅಧಿಕಾರಿಗಳು ಅರೆಸ್ಟ್ ಮಾಡಿಸಿದ್ದಾರೆ.
ಮಹಿಳಾ ಪೊಲೀಸ್ ಅಧಿಕಾರಿಗಳಿಂದಲೇ ಅರೆಸ್ಟ್ ಮಾಡಿಸಿ ಹೆಣ್ಣು ಅಬಲೆಯಲ್ಲ, ನಾವಿದ್ದೇವೆ ಧೈರ್ಯವಾಗಿ ಬಂದು ದೂರು ನೀಡುವಂತೆ ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬುವ ಸಂದೇಶ ರವಾನಿಸಲು SIT ಹೇಗೆ ಮಾಡಿದೆ ಎಂದು ಹೇಳಲಾಗುತ್ತಿದೆ.