ಖ್ಯಾತ ನಿರ್ದೇಶಕ ಎಸ್.ಕೆ ಭಗವಾನ್‌ ನಿಧನ‌; ಕಂಬನಿ ಮಿಡಿದ ಸ್ಯಾಂಡಲ್‌ವುಡ್‌

Bengaluru : ಕನ್ನಡದ ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್ (SK Bhagavan passed away) ಅವರು ಇಂದು ನಿಧನರಾಗಿದ್ದಾರೆ. ರಾಜಕುಮಾರ (Dr Rajkumar),ವಿಷ್ಣುವರ್ಧನ್‌,

ಅಂಬರೀಶ್‌ (Dr Ambarish) ಮತ್ತು ಅನಂತ್‌ನಾಗ್‌ ಸೇರಿದಂತೆ ಅನೇಕ  ಕಲಾವಿದರ ಚಿತ್ರಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಅವರದ್ದು. ಕನ್ನಡಕ್ಕೆ ಹಲವು ಸೂಪರ್‌ಹಿಟ್‌ ಚಿತ್ರಗಳನ್ನು ಭಗವಾನ್‌ನೀಡಿದ್ದಾರೆ.

ಎಸ್.ಕೆ.ಭಗವಾನ್ ಅವರ ಸಾವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಂತಾಪ ಸೂಚಿಸಿದ್ದು, “ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ದೇಶಕ

ಶ್ರೀ ಎಸ್. ಕೆ. ಭಗವಾನ್ ರವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅತ್ಯಂತ ಬೇಸರವಾಯಿತು.

ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಕುಟುಂಬವರ್ಗದವರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು (SK Bhagavan passed away) ಪ್ರಾರ್ಥಿಸುತ್ತೇನೆ.

ದೊರೈ-ಭಗವಾನ್ ಜೋಡಿಯು ಕನ್ನಡ ಚಿತ್ರರಂಗಕ್ಕೆ ಅನೇಕ ಸದಭಿರುಚಿಯ ಚಿತ್ರಗಳನ್ನು ನೀಡಿದೆ.

ಡಾ. ರಾಜ್‌ ಕುಮಾರ್ ನಟನೆಯ  ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಹೊಸ ಬೆಳಕು’ ಸೇರಿದಂತೆ 55 ಚಿತ್ರಗಳನ್ನು ಸ್ನೇಹಿತ ದೊರೈ ರಾಜ್‌ ಜೊತೆ ಸೇರಿ ನಿರ್ದೇಶಿಸಿದ್ದರು.” ಎಂದು ಟ್ವೀಟ್‌ (Tweet) ಮಾಡಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು, “ಕನ್ನಡ ಕಲಾ ಜಗತ್ತು ಮತ್ತು ಸಿನಿಮಾ ಪ್ರಪಂಚವನ್ನು ಬೆಳಗಿ ಬೆಳ್ಳಿತೆರೆಯನ್ನು ಶ್ರೀಮಂತಗೊಳಿಸಿದ್ದ ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್ ಅವರ ನಿಧನದಿಂದ

ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅಭಿಮಾನಿಗಳು ಮತ್ತು ಕುಟುಂಬ ವರ್ಗಕ್ಕೆ ದೇವರು ಕರುಣಿಸಲೆಂದು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್‌ ಮಾಡಿದ್ಧಾರೆ.

ಇದನ್ನು ಓದಿ: ಕೇಂದ್ರದಿಂದ ಜಿಎಸ್‌ಟಿ ತೆರಿಗೆದಾರರಿಗೆ ರಿಲೀಫ್‌ ಸಿಕ್ತಾ? : ಯಾವ ವಸ್ತುಗಳ ದರ ಇಳಿಕೆ ಇಲ್ಲಿದೆ ಮಾಹಿತಿ

“ಕನ್ನಡ ಸಿನಿಮಾ ರಂಗದ ಹೆಸರಾಂತ ನಿರ್ದೇಶಕ ಎಸ್.ಕೆ.ಭಗವಾನ್ ಅಗಲಿಕೆಯ ಸುದ್ದಿ ಅಪಾರ ನೋವನ್ನುಂಟು ಮಾಡಿದೆ. ಕನ್ನಡ ಸಿನಿಮಾ ರಂಗಕ್ಕೆ 24ಕ್ಕೂ ಹೆಚ್ಚು ಕಾದಂಬರಿ ಆಧಾರಿತ ಸಿನಿಮಾಗಳನ್ನು ಕೊಟ್ಟು ಸಾಹಿತ್ಯ

ಮತ್ತು ಸಿನಿಮಾ ರಂಗವನ್ನು ಬೆಸೆದ ಅಪರೂಪದ ನಿರ್ದೇಶಕ ಅವರು. ದೊರೈ ಮತ್ತು ಭಗವಾನ್ ಸಿನಿಮಾ ರಂಗದ ಎರಡು ಕಣ್ಣುಗಳು” ಎಂದು ಸಂಸದೆ ಸುಮಲತಾ ಅಂಬರೀಶ್‌ (Sumalatha Ambarish) ಅವರು

ಟ್ವೀಟ್‌ಮಾಡಿ ಸಂತಾಪ ಸೂಚಿಸಿದ್ದಾರೆ.  ಇನ್ನು ಕೆ.ಎಸ್.ಭಗವಾನ್‌ಅವರು ಕಸ್ತೂರಿ ನಿವಾಸ, ಎರಡು ಕನಸು, ಬಯಲುದಾರಿ, ಗಾಳಿಮಾತು, ಚಂದನದ ಗೊಂಬೆ, ಹೊಸ ಬೆಳಕು, ಬೆಂಕಿಯ ಬಲೆ, ಜೀವನ ಚೈತ್ರ ಮತ್ತು

ಗೋವಾದಲ್ಲಿ C.I.D 999, ಆಪರೇಷನ್ ಜಾಕ್‌ಪಾಟ್ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದರು.

Exit mobile version