‘ಸರ್ ತಾನ್ ಸೆ ಜುದಾ’ ಘೋಷಣೆ ಕೂಗಿದ್ದಕ್ಕಾಗಿ ಉತ್ತರಪ್ರದೇಶದ ಅಮೇಥಿಯಲ್ಲಿ 7 ಜನರ ಬಂಧನ!

Amethi : ಉತ್ತರಪ್ರದೇಶದ (Uttar Pradesh) ಅಮೇಥಿಯಲ್ಲಿ ಬರವಾಫತ್ ಮೆರವಣಿಗೆ ವೇಳೆ “ಸಾರ್ ತಾನ್ ಸೆ ಜುದಾ” ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು (UP Police) ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ಏಳು ಜನರನ್ನು ಬಂಧಿಸಿದ್ದಾರೆ.

ಅಮೇಥಿಯಲ್ಲಿರುವ ಮೊಹಮ್ಮದ್ ಜಯಸಿ ಅವರ ದರ್ಗಾದಲ್ಲಿ ಪ್ರತಿ ವರ್ಷ ರಬಿಯುಲ್ ಅವ್ವಲ್ (Slogans Voilence Protest) ಅನ್ನು ಸರಳ ರೀತಿಯಲ್ಲಿ ಆಚರಿಸಲಾಗುತ್ತದೆ.

https://vijayatimes.com/army-dog-zoom-injured/

ಈ ವರ್ಷವೂ ನೂರಾರು ಮಂದಿ ಸೇರಿ ಮೆರವಣಿಗೆ ಮೂಲಕ ಹಬ್ಬ (Slogans Voilence Protest) ಆಚರಿಸಿದ್ದ ವೇಳೆ, ಹತ್ತಾರು ಯುವಕರು ಮತ್ತು ಮಕ್ಕಳು ಸಾರ್ ತಾನ್ ಸೆ ಜುದಾ ಎಂಬ ಆಕ್ಷೇಪಾರ್ಹ ಘೋಷಣೆಯನ್ನು ಕೂಗುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ (Viral) ಆಗಿದೆ.

ಈ ವಿಡಿಯೋದ ಆಧಾರದ ಮೇಲೆ ಉತ್ತರ ಪ್ರದೇಶದ ಪೊಲೀಸರು 10-15 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಒಂಬತ್ತು ಮಂದಿಯನ್ನು ಹೆಸರಿಸಿದ್ದಾರೆ.

ಡಿಐಜಿ (DIG) ಅಮರೇಂದ್ರ ಕುಮಾರ್ ಸಿಂಗ್ (Amerandra Kumar Singh) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವಿಡಿಯೋ ಜಯಾಸ್ ಪ್ರದೇಶದದ್ದು ಎಂದು ಅಮೇಥಿ ಪೊಲೀಸ್ ವರಿಷ್ಠಾಧಿಕಾರಿ ಇಳಮಾರನ್ ಹೇಳಿದ್ದಾರೆ.

https://youtu.be/3USIQLlGNHk

ಜೈಪುರದಲ್ಲಿಯೂ ಇದೇ ರೀತಿಯ ಘಟನೆ : ರಾಜಸ್ಥಾನದ (Rajasthan) ಜೋಧ್ಪುರದಲ್ಲಿ (Jodhapur) ನಡೆದ ಬರವಾಫತ್ ಮೆರವಣಿಗೆಯಲ್ಲಿ ಸರ್ ತಾನ್ ಸೆ ಜುದಾ ಘೋಷಣೆಗಳನ್ನು ಕೂಗಿರುವ ವಿಡಿಯೋ ಕೂಡ ವೈರಲ್ ಆಗಿತ್ತು.

ಈ ವೇಳೆ ಹಿಂದೂ ಪ್ರಾಬಲ್ಯವಿರುವ ಪ್ರದೇಶದಲ್ಲಿ ಕೋಮು ಸೌಹಾರ್ದತೆ ಕದಡಲು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ರ್ಯಾಲಿಯಲ್ಲಿ ಭಾಗವಹಿಸಿದವರ ವಿರುದ್ಧ ಸ್ಥಳೀಯರು ದೂರು ದಾಖಲಿಸಿದ್ದರು.

ಆರೋಪಿ ರೋಷನ್ ಅಲಿ ಸಿಂಧಿ ಸೇರಿ 10 ರಿಂದ 15 ಮಂದಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಇನ್ನು “ಗುಸ್ತಾಖ್-ಎ-ರಸೂಲ್ ಕಿ ಏಕ್ ಹಿ ಸಾಜಾ, ಸಾರ್ ತಾನ್ ಸೆ ಜುದಾ” ಎಂಬ ಘೋಷಣೆಯನ್ನು ಪಾಕಿಸ್ತಾನದ ತೀವ್ರಗಾಮಿ ಇಸ್ಲಾಮಿಸ್ಟ್ ಸಂಘಟನೆ ತೆಹ್ರೀಕ್-ಎ-ಲಬ್ಬೈಕ್ ಹುಟ್ಟುಹಾಕಿತು. ಅನ್ಯಧರ್ಮೀಯರ ತಲೆ ಕಡಿಯುವಂತೆ ಈ ಘೋಷಣೆ ಪ್ರಚೋದಿಸುತ್ತದೆ.

Exit mobile version