ಮೋದಿ ಕಾಂಗ್ರೇಸ್ ಬಗ್ಗೆ ಸುಳ್ಳು ಹೇಳಿ ಹಿಂದುತ್ವದ ಹೆಸರಿನಲ್ಲಿ ವೋಟ್ ಕೇಳೋದು ಸರಿಯಲ್ಲ ಎಂದ ಎಸ್.ಎಂ.ಪಾಟೀಲ್‌ ಗಣಿಹಾರ 

Vijayapura: ಲೋಕ ಸಭಾ ಚುನಾವಣೆಯ (Loksabha Election) ಹಿನ್ನೆಲೆ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದ್ದು ವಿಜಯಪುರದಲ್ಲಿ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ್‌ ಗಣಿಹಾರ ಪ್ರಧಾನಿ ಮೋದಿ ಸಾಧನೆಯ ಕುರಿತು ವ್ಯಂಗ್ಯವಾಡಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಎಂ. ಪಾಟೀಲ್‌ (S.M Patil Ganihara) ಗಣಿಹಾರ ಅವರು, ಮುಸ್ಲಿಂ ಲೀಗ್ ಎಂದರೆ ಏನು ಎಂಬುದನ್ನು ಮೋದಿ ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ಲೀಗ್‌ನ (Muslim League) ಅನೇಕರು ಪ್ರಾಣತ್ಯಾಗ ಮಾಡಿದ್ದು, ಮುಸ್ಲಿಂ ಲೀಗ್ ಜೊತೆ ಆಗಿನ ಜನಸಂಘದವರು ಸೇರಿ ಸರ್ಕಾರ ಮಾಡಿದ್ದರು ಈಗ ಅದೇ ಮುಸ್ಲಿಂ ಸಮುದಾಯ ಬದಿಗೆ ಸರಿಸಿ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ದೇಶದ ಸಂವಿಧಾನ ಬದಲಾಯಿಸುವುದು. ಸಾಂವಿಧಾನಿಕ ಹುದ್ದೆಗಳನ್ನು ದುರ್ಬಲಗೊಳಿಸುವುದು ಮುಂತಾದ ದುರುದ್ದೇಶಗಳೇ ಬಿಜೆಪಿಯ (BJP) ಅಜೆಂಡಾ ಆಗಿದೆ. ಅಭಿವೃದ್ಧಿ ನೆಪದಲ್ಲಿ ಹಿಂದೂಗಳ ಪೋಷಣೆ ಮಡುವ ಅವರು ಮಾಡಿದ ಸಾಧನೆ ಬಗ್ಗೆ ಹೇಳುವ ಬದಲು ಕಾಂಗ್ರೆಸ್ (Congress) ಬಗ್ಗೆ ಸುಳ್ಳು ಹೇಳಿ, ಹಿಂದುತ್ವದ ಹೆಸರಿನಲ್ಲಿ ವೋಟ್ ಕೇಳುತ್ತಾರೆ.

ನೋಟ್ ಬ್ಯಾನ್ (Note Ban) ಮಾಡಿದ್ದು, ಕೊರೋನಾ ಹೆಸರಲ್ಲಿ ಬಡವರಿಗೆ ಸಹಾಯ ಮಾಡುವ ನೆಪದಲ್ಲಿ ಸುಲಿಗೆ ಮಾಡುವುದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಬಿಜೆಪಿಯವರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಅವರಿಗೆ ಮಾತನಾಡಲು ಬೇರೆ ವಿಚಾರಗಳಿಲ್ಲ. ಇಡಿ ತಮ್ಮ ಕೆಲಸಕ್ಕೆ ಬಳಸಿಕೊಂಡು ಬೇರೆ ಪಕ್ಷದ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ. ದೇಶದ ಸಾರ್ವಜನಿಕ ಉದ್ಯಮಗಳನ್ನು ಮಾರಾಟ ಮಾಡುವುದು, ಬಂಡವಾಳಶಾಹಿಗಳ ಸಾಲಮನ್ನಾ ಮಾಡುವುದು, ಇಂತಹವುಗಳೇ ಇವರ ದೂರದೃಷ್ಟಿ ಕಪ್ಪು ಹಣ ತರುವ ಉದ್ದೇಶ ಇವರಿಗೆ ಇಲ್ಲ.

ಬಡವರು ಬಡವರಾಗಿಯೇ ಇರಬೇಕು ಎಂಬ ಉದ್ದೇಶ ಇವರದ್ದಾಗಿದೆ ನರೇಂದ್ರ ಮೋದಿ (Narendra Modi) ಸಿಎಂ ಆಗಿದ್ದಾಗ ಗುಜರಾತನಲ್ಲಿ ಗೌತಮ್ ಅದಾನಿ ಜೊತೆಗೆ ಇದ್ದ, ಕೇವಲ 20 ವರ್ಷಗಳಲ್ಲಿ ಆತ ಜಗತ್ತಿನ ನಂಬರ್‌ ಒನ್ ಶ್ರೀಮಂತ ಆಗುತ್ತಾನೆ ಎಂದರೆ ಆತನಿಗೆ ಎಷ್ಟು ಸಪೋರ್ಟ್ ಮಾಡಿರಬೇಕು ಎಂದು ಪ್ರಶ್ನಿಸಿ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.

Exit mobile version