“ಮಮತಾ ಬ್ಯಾನರ್ಜಿ” ಜೊತೆ ದಾಂಪತ್ಯಕ್ಕೆ ಕಾಲಿಡುತ್ತಿರುವ “ಸೋಶಿಯಲಿಸಂ”: ಸೇಲಂನಲ್ಲಿ ಒಂದು ವಿಶೇಷ ಮದುವೆ

ಸೇಲಂ, ಜೂ. 11: ಮದುವೆ ಅನ್ನೋದು ಸಾಮಾನ್ಯ ಜನರನ್ನ ಹೆಚ್ಚಾಗಿ ಆಕರ್ಷಿಸುವುದಿಲ್ಲ. ಅದರೆ ಕೆಲವಿ ಬಾರಿ ಸೆಲೆಬ್ರಿಟಿಗಳು ಪಾಲ್ಗೊಂಡಾಗ ವಿವಾಹ ಕಾರ್ಯಕ್ರಮಗಳು ಹೆಚ್ಚು ಆಕರ್ಷಣೀಯವಾಗುತ್ತದೆ. ಆದರೆ ಸೇಲಂನಲ್ಲಿ ನಡೆಯುತ್ತಿರುವ ವಿವಾಹವೊಂದು ಇದೀಗ ಎಲ್ಲರನ್ನ ಗಮನ ಸೆಳೆದಿದೆ. ಏಕೆಂದ್ರೆ ಇಲ್ಲಿ, “ಸೋಶಿಯಲಿಸಂ ” ಹಾಗೂ “ಮಮತಾ ಬ್ಯಾನರ್ಜಿ” ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ.

ಹೌದು, ಕೇಳೋಕ್ಕೆ ವಿಚಿತ್ರ ಅನ್ಸುದ್ರು ಇದು ಸತ್ಯ. ಸೇಲಂನಲ್ಲಿ ಇದೇ ಜೂ.13ರಂದು ಸೋಶಿಯಲಿಸಂ ಅನ್ನೋ ಹೆಸರಿನ ವರ, ಮಮತಾ ಬ್ಯಾನರ್ಜಿ ಅನ್ನೋ ಹೆಸರಿನ ವಧುವಿನ ಜೊತೆ ವೈವಾಹಿಕ ಜೀವನ ನಡೆಸೋಕ್ಕೆ ಸಜ್ಜಾಗ್ತಿದ್ದಾರೆ. ಇವರಿಬ್ಬರ ಮದುವೆ ಆಮಂತ್ರಣ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ವಧು-ವರನ ಹೆಸರಿನ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದೆ.

ಈ “ಸೋಶಿಯಲಿಂ” ನ ತಂದೆ ಮೋಹನ ತಮಿಳುನಾಡಿನ ಸೇಲಂ ಜಿಲ್ಲೆಯ ಭಾರತ ಕಮ್ಯುನಿಸ್ಟ್ ಪಕ್ಷದ ( ಸಿಪಿಐ) ಕಾರ್ಯದರ್ಶಿ. ಇವರ ಮೂವರು ಮಕ್ಕಳ ಹೆಸರು “ಕಮ್ಯೂನಿಸಂ” “ಲೆನಿನಿಸಂ” ಹಾಗೂ “ಸೋಶಿಯಲಿಸಂ”. ಸಣ್ಣ ಮಗ ಸೋಶಿಯಲಿಸಂ ಮಮತಾ ಬ್ಯಾನರ್ಜಿಯನ್ನು ಮದುವೆಯಾಗುತ್ತಿದ್ದಾನೆ.

ಈ ಮಮತಾ ಬ್ಯಾನರ್ಜಿ ತಮಿಳುನಾಡಿನ ಕಾಂಗ್ರೆಸ್ ನಾಯಕರೊಬ್ಬರ ಮಗಳು. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ೨೦ ವರ್ಷದ ಹಿಂದೆ ಕಾಂಗ್ರೆಸ್ ನಲ್ಲಿದ್ದಾಗ ಫೈರ್ ಬ್ರಾಂಡ್ ಆಗಿದ್ದರು.ಆಕೆಯ ಮೇಲಿನ ಅಭಿಮಾನದಿಂದ ಈ ಹೆಸರನ್ನು ಇಡಲಾಗಿದೆ.

ಮೋಹನ ತಂದೆ, ತಾತ ಎಲ್ಲರೂ ಕಟ್ಟಾ ಸಿಪಿಐ ಕಾರ್ಯಕರ್ತರು. ಮಗ ಮೋಹನ ಕೂಡ ಅದೇ ಪಕ್ಷದ ಕಟ್ಟಾಳು. ಸೋವಿಯತ್ ರಷ್ಯಾದ ಕಮ್ಯುನಿಸ್ಟ್ ಸರ್ಕಾರ ಪತನಗೊಂಡ ನಂತರವೂ ಮೋಹನ್ ನಿರಾಶೆಯಾಗಿಲ್ಲ. ಮೂವರು ಮಕ್ಕಳಿಗೆ ಈ ಹೆಸರುಗಳನ್ನು ಇಡುವ ಮೂಲಕ ತಮ್ಮ ಸೈದ್ಧಾಂತಿಕ ಬದ್ದತೆ ತೋರಿಸಿಕೊಟ್ಟಿದ್ದಾರೆ.

Exit mobile version