ಚೀನಾಗೆ ತಕ್ಕ ಉತ್ತರ ಕೊಟ್ಟ ಭಾರತೀಯ ಯೋಧರು

ನವದೆಹಲಿ: ಚೀನಾ ಸೈನಿಕರ ಕುತಂತ್ರಕ್ಕೆ ತಕ್ಕ ಉತ್ತರ ಕೊಟ್ಟಿರುವ ಭಾರತೀಯ ಯೋಧರು ಗಾಲ್ವಾನ್‌ ಕಣಿವೆ ನಮ್ಮ ಹಿಡಿತದಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೊಸ ವರ್ಷದಂದು ಭಾರತೀಯ ಸೇನಾ ಯೋಧರು ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದ್ದಾರೆ. ಈ ಚಿತ್ರಗಳು ಇದೀಗ  ಹೊರಬಂದಿವೆ. ಭದ್ರತಾ ಸಂಸ್ಥೆಯ ಮೂಲಗಳಿಂದ ಬಿಡುಗಡೆಯಾದ ಫೋಟೋಗಳು ಜನವರಿ 1 ರಂದು ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಗ್ಲೋಬಲ್ ಟೈಮ್ಸ್ ಹಂಚಿಕೊಂಡ ವೀಡಿಯೊಗೆ ಪ್ರಬಲವಾದ ಪ್ರತಿಕ್ರಿಯೆ ಎಂದು ಗ್ರಹಿಸಲಾಗಿದೆ.

ಚೀನಾ ಹಂಚಿಕೊಂಡ ವೀಡಿಯೊದಲ್ಲಿ, ಗಾಲ್ವಾನ್ ಕಣಿವೆಯ ಮೇಲೆ ತನ್ನ ನಿಯಂತ್ರಣವನ್ನು ಹೊಂದಿದೆ ಎಂಬ ತಪ್ಪು ಮಾಹಿತಿಯನ್ನು ಹರಡಲು ಪ್ರಯತ್ನಿಸಲಾಗಿದೆ. ವೀಡಿಯೋದಲ್ಲಿನ ಈ ಪ್ರದೇಶದವು ಉಭಯ ದೇಶಗಳ ನಡುವಿನ ಸೇನಾರಹಿತ ವಲಯವನ್ನು ಉಲ್ಲಂಘಿಸುವುದಿಲ್ಲ ಎಂದು ಭಾರತೀಯ ಸೇನಾ ಮೂಲಗಳು ಸ್ಪಷ್ಟಪಡಿಸಿದ್ದವು. ಬೇರೆ ರೀತಿಯಲ್ಲಿ ಹೇಳುವುದಾದರೆ, ಧ್ವಜವನ್ನು ನಿರ್ವಿವಾದ ಚೀನಾದ ಅಧೀನದ ಪ್ರದೇಶಗಳಲ್ಲಿ ಹಾರಿಸಲಾಗುತ್ತಿದೆ ಮತ್ತು ಜೂನ್ 2020 ರಲ್ಲಿ ಭಾರತೀಯ ಮತ್ತು ಚೀನಾ ಸೈನಿಕರು ನಡುವೆ ಘರ್ಷಣೆ ನಡೆದ ನದಿಯ ತಿರುವಿನಲ್ಲಿ ಅಲ್ಲ ಎಂದಿದೆ.

ಆದರೂ ಕೆಲವು ಮಾಧ್ಯಮವು ಇದು ಭಾರತೀಯ ಭೂಪ್ರದೇಶ ಎಂಬ ಮೊಂಡು ವಾದವನ್ನು ಮುಂದಿಟ್ಟು ಭಾರತ ಸರ್ಕಾರ ಮತ್ತು ಆಭರತೀಯ ಸೇನೆಯನ್ನು ಹಳಿಯುವ ಪ್ರಯತ್ನ ಮಾಡಿವೆ.

ಇದೀಗ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರು ಕೈಯಲ್ಲಿ ತ್ರಿವರ್ಣ ಧ್ವಜದೊಂದಿಗೆ ನಿಂತಿರುವ ಚಿತ್ರಗಳು ಬಿಡುಗಡೆಯಾಗಿದೆ. ಈ ಮೂಲಕ ಚೀನಾ ಧ್ವಜವನ್ನು ಹಾರಿಸಲಾಗುತ್ತಿದೆ ಎಂಬ ಹೇಳಿಕೆಗೆ ಭಾರತೀಯ ಸೈನಿಕರು ಪೂರ್ಣ ವಿರಾಮ ಹಾಕಿದ್ದಾರೆ.

Exit mobile version