ಹಸುಗಳಲ್ಲಿ ಕಂಡುಬರುವ ಸಿಡುಬು ರೋಗಕ್ಕೆ ಇಲ್ಲಿದೆ ಸುಲಭ ಪರಿಹಾರ!

cow

ಕರ್ನಾಟಕದಲ್ಲಿ ಹಲವು ಪ್ರದೇಶಗಳಲ್ಲಿ ಹೈನುಗಾರಿಕೆಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಆದರೆ ಹಸುಗಳಿಗೆ ಕೆಲವೊಮ್ಮೆ ಕಾಲುಬಾಯಿ ಜ್ವರ, ಸಿಡುಬು ಹೀಗೆ ಹಲವು ರೀತಿಯ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಂದು ಖಾಯಿಲೆಗೆ ಮನೆಯಲ್ಲೇ ಔಷಧಿಗಳನ್ನು ಮಾಡಬಹುದಾಗಿದೆ. ಪ್ರತಿಯೊಂದು ಕೃಷಿ ಮನೆಯಲ್ಲಿ ಹಾಲಿನ ಸಲುವಾಗಿ ಒಂದು ಎಮ್ಮೆ ಅಥವಾ ಒಂದು ಆಕಳು ಸಾಕುವ ರೂಢಿಯಲ್ಲಿದೆ. ಮನುಷ್ಯರಂತೆ ಅವುಗಳಿಗೂ ಕೂಡ ರೋಗರುಜಿನಗಳು ಬಂದೇ ಬರುತ್ತದೆ. ಹೀಗಾಗಿ ಅವುಗಳನ್ನು ಪಶುವೈದ್ಯರಿಗೆ ತೋರಿಸುವ ಮೂಲಕ ಅಥವಾ ನಾಟಿ ಚಿಕಿತ್ಸೆಯಿಂದ ಅವುಗಳನ್ನು ಹೋಗಲಾಡಿಸಬಹುದು ಅವುಗಳಲ್ಲಿ ಒಂದು ಪ್ರಮುಖ ಸಿಡುಬು ಅಥವಾ ಒರಟು ರೋಗ ನಿರ್ವಹಣೆ ಬಗ್ಗೆ ಸಂಪೂರ್ಣವಾಗಿ ಕೆಳಗಡೆ ನೀಡಲಾಗಿದೆ.

ಬೇಕಾಗುವ ಪದಾರ್ಥಗಳು:

ಬೆಳ್ಳುಳ್ಳಿ- 5 ಎಸಳು
ಅರಿಶಿನದ ಪುಡಿ- 10 ಗ್ರಾಂ
ಜೀರಿಗೆ- 15 ಗ್ರಾಂ
ಕಾಮಕಸ್ತೂರಿ- 1 ಹಿಡಿ
ಬೇವಿನೆಲೆ- 1 ಹಿಡಿ
ಬೆಣ್ಣೆ / ತುಪ್ಪ-50 ಗ್ರಾಂ

ತಯಾರಿಸುವ ವಿಧಾನ:
ಜೀರಿಗೆಯನ್ನು 15 ನಿಮಿಷ ನೀರಿನಲ್ಲಿ ನೆನೆಸಿಡಿ ನಂತರ ಎಲ್ಲಾ ಪದಾರ್ಥಗಳನ್ನು ನುಣ್ಣನೆಯ ಪೇಸ್ಟಿನ ಹದಕ್ಕೆ ರುಬ್ಬಿ ಅದಕ್ಕೆ ಬೆಣ್ಣೆಯನ್ನು ಹಾಕಿ ಚೆನ್ನಾಗಿ ಬೆರೆಸಿ. ಈ ರೀತಿಯಾಗಿ ಸರಿಯಾದ ಕ್ರಮದಲ್ಲಿ ಮಾಡಿಕೊಳ್ಳಿ. ರುಬ್ಬಿದ ಪದಾರ್ಥವು ಆದಷ್ಟು ನುಣ್ಣಗೆ ಇರಬೇಕು. ಸಾಕಷ್ಟು ನುಣ್ಣಗಾದ ಬಳಿಕ ಇದನ್ನು ತೆಗೆದು ಒಂದು ಬಟ್ಟಲಿಗೆ ಹಾಕಿಕೊಳ್ಳಬೇಕು

ಔಷಧಿ ನೀಡುವ ಕ್ರಮ:
ಸಿಡುಬು ರೋಗದಿಂದಾಗಿ ಬಾಧಿತವಾಗಿರುವ ಪ್ರದೇಶವನ್ನು ಶುಚಿಮಾಡಿ ಒಣಗಿಸಿ ನಂತರ ಹಚ್ಚಿ. ಬಾಧಿತ ಪ್ರದೇಶಕ್ಕೆ ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಗುಣವಾಗುವವರೆಗೂ ಹಚ್ಚಿ, ಹೀಗೆ ಕನಿಷ್ಠ 1 ವಾರಗಳ ಕಾಲ ರೈತರು ಇದನ್ನು ಸರಿಯಾಗಿ ಪಾಲಿಸಿದರೆ ಖಂಡಿತವಾಗಿಯೂ, ನಿಮ್ಮ ದನಗಳಿಗೆ ಈ ಸಿಡುಬು ರೋಗದ ನಿರ್ವಹಣೆಯನ್ನು ಸುಲಭವಾಗಿ ಮಾಡಬಹುದು.

Exit mobile version