ವರುಣಾಕ್ಕೆ ಸೋಮಣ್ಣ ಎಂಟ್ರಿ ; ಲಿಂಗಾಯತ-ಒಕ್ಕಲಿಗ ಅಸ್ತ್ರ ಪ್ರಯೋಗ

Mysore : ರಾಜ್ಯ ವಿಧಾನಸಭಾ ಚುನಾವಣೆಯ (State Assembly Elections) ಕಾವು ರಂಗೇರಿದೆ. ಕಾಂಗ್ರೆಸ್‌ಪಕ್ಷದ ತಂತ್ರಗಾರಿಕೆಗೆ ಬಿಜೆಪಿ (BJP) ಸೆಡ್ಡು ಹೊಡೆದಿದ್ದು, ಇದೀಗ ಪ್ರತ್ಯುತ್ತರವಾಗಿ ಕಾಂಗ್ರೆಸ್‌ಕೂಡಾ ಬಿಜೆಪಿ ವಿರುದ್ದ ರಣತಂತ್ರ ಹೆಣೆಯಲು ಸಿದ್ದತೆ ನಡೆಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ (Somanna entry to Varuna) ಅವರು ಸ್ಪರ್ಧೆ ಮಾಡುವ ವರುಣಾ ಕ್ಷೇತ್ರಕ್ಕೆ ಅಚ್ಚರಿ ಎಂಬಂತೆ ಬಿಜೆಪಿ ವಿ. ಸೋಮಣ್ಣ (V. Somanna) ಅವರನ್ನು ಕಣಕ್ಕಿಳಿಸಿದೆ.

ವಿ.ಸೋಮಣ್ಣ ವರುಣಾಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಸಿದ್ದರಾಮಯ್ಯ ಬಣದಲ್ಲಿ ರಾಜಕೀಯ ತಂತ್ರಗಾರಿಕೆಗಳು ಗರಿಗೇದರಿವೆ.

ಲಿಂಗಾಯತ-ಒಕ್ಕಲಿಗ ಅಸ್ತ್ರ ಪ್ರಯೋಗಿಸಲು ಬಿಜೆಪಿ (BJP) ಸಿದ್ದತೆ ನಡೆಸಿದ್ದು, ವರುಣಾದಲ್ಲಿ ನೇರ ಹಣಾಹಣಿ ಏರ್ಪಡುವ ಸಾಧ್ಯತೆಯಿದೆ.

ವಿ.ಸೋಮಣ್ಣ ಎಂಟ್ರಿಯಿಂದ ಏನಾಗಲಿದೆ?
ರಾಜಕೀಯ ವಲಯದಲ್ಲಿ ವಿ.ಸೋಮಣ್ಣ ಅವರನ್ನು ಸಂಘಟನಾ ಚತುರ ಎಂದೇ ಗುರುತಿಸಲಾಗುತ್ತದೆ. ಕೆಳಮಟ್ಟದಲ್ಲಿ ಸಂಘಟನೆ ಮಾಡುವ,

ರಾಜಕೀಯ ತಂತ್ರಗಾರಿಕೆಗಳನ್ನು ರೂಪಿಸುವುದರಲ್ಲಿ ಸೋಮಣ್ಣ ನಿಸ್ಸಿಮ ಎಂಬ ಮಾತಿದೆ.

ಹೀಗಾಗಿಯೇ ವರುಣಾಕ್ಕೆ ಸೋಮಣ್ಣ ಎಂಟ್ರಿ ಕೊಟ್ಟಿರುವುದು ಸಿದ್ದರಾಮಯ್ಯನವರಿಗೆ (Siddaramaiah) ದೊಡ್ಡ ತಲೆನೋವು ತಂದಿದೆ.

ಇದನ್ನೂ ಓದಿ : https://vijayatimes.com/jagdishshetter-meet-jp-nadda/

ವಿ.ಸೋಮಣ್ಣ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದು, ವರುಣಾದಲ್ಲಿರುವ ಲಿಂಗಾಯತ ಸಮುದಾಯ ಸೋಮಣ್ಣರ ಬೆಂಬಲಕ್ಕೆ ನಿಂತರೆ,

ಸಿದ್ದರಾಮಯ್ಯವರು ಗೆಲುವು ಸಾಧಿಸಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ.

ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಒಂದಾಗಿ ಸೋಮಣ್ಣನವರ ಬೆಂಬಲಕ್ಕೆ ನಿಂತರೆ ಸಿದ್ದರಾಮಯ್ಯನವರ (Somanna entry to Varuna) ಗೆಲುವು ಕಷ್ಟಕರ ಎನ್ನಲಾಗುತ್ತಿದೆ.

ಹೀಗಾಗಿಯೇ ವರುಣಾದಲ್ಲಿ ಲಿಂಗಾಯತ ಮುಖಂಡರನ್ನು ಸೆಳೆಯಲು ಸಿದ್ದರಾಮಯ್ಯನವರು ಸಿದ್ದತೆ ನಡೆಸಿದ್ದಾರೆ.

ವಿ.ಸೋಮಣ್ಣ, ಸಂಸದ ಪ್ರತಾಪ್‌ಸಿಂಹ (Pratapsinh) ಮತ್ತು ಶ್ರೀನಿವಾಸ್‌ಪ್ರಸಾದ್‌ಒಂದಾಗಿ ಸಿದ್ದರಾಮಯ್ಯನವರನ್ನು ಹೆಣೆಯಲು ಸಿದ್ದತೆ ನಡೆದಿದೆ ಎನ್ನಲಾಗಿದೆ.

ಲಿಂಗಾಯತ-ಒಕ್ಕಲಿಗ-ದಲಿತ ಅಸ್ತ್ರ ಪ್ರಯೋಗಿಸಲು ಬಿಜೆಪಿ ಸಿದ್ದತೆ ನಡೆಸಿದೆ. ಈ ಅಸ್ತ್ರ ಫಲ ನೀಡಿದರೆ, ಸಿದ್ದರಾಮಯ್ಯ ಮತ್ತು ಸೋಮಣ್ಣ ನಡುವೆ ತೀವ್ರ ಸ್ಪರ್ಧೆ ಏರ್ಪಡಲಿದೆ.

ಸಾಕಷ್ಟು ವರ್ಷಗಳ ನಂತರ ಸಿದ್ದರಾಮಯ್ಯ ಮರಳಿ ವರುಣಾಕ್ಕೆ ಬಂದಿದ್ದಾರೆ. ಹೀಗಾಗಿ ವರುಣಾದ ಮೇಲೆ ಸಿದ್ದರಾಮಯ್ಯನವರಿಗೆ ಮೊದಲಿದ್ದ ಹಿಡಿತ ಈಗಿಲ್ಲ.

ಇನ್ನೊಂದೆಡೆ ಈ ಹಿಂದಿನ ಚುನಾವಣೆಗಳನ್ನು ಗಮನಿಸಿದರೆ, ಸಿದ್ದರಾಮಯ್ಯನವರಿಗೆ ವರುಣಾ ಅಷ್ಟು ಸೇಫ್‌ ಕ್ಷೇತ್ರವೂ ಅಲ್ಲ ಎನ್ನಲಾಗಿದೆ.

ಕಳೆದ ಮೂರು-ನಾಲ್ಕು ವಿಧಾನಸಭಾ ಚುನಾವಣೆಗಳನ್ನು ಗಮನಿಸಿದರೆ, ವರುಣಾದಲ್ಲಿ ಕಾಂಗ್ರೆಸ್‌ (Congress) ವಿರುದ್ದ ಬಿಜೆಪಿಯಿಂದ ಯಾವುದೇ ಪ್ರಬಲ ಅಭ್ಯರ್ಥಿಗಳಿರಲಿಲ್ಲ. ಆದರೆ ಈ ಬಾರಿ ಸೋಮಣ್ಣ ವರುಣಾದಿಂದ ಸ್ಪರ್ಧೆ ಮಾಡಿರುವುದರಿಂದ ವರುಣಾದಲ್ಲಿ ರಾಜಕೀಯ ಧ್ರುವೀಕರಣ ಉಂಟಾಗುವ ಸಾಧ್ಯತೆಯಿದೆ.

Exit mobile version