Bangkok: ಬ್ಯಾಂಕಾಕ್ ಪ್ರವಾಸದಲ್ಲಿದ್ದ ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ (Spandana died of heart attack)
ಅವರು ನಿಧನರಾಗಿದ್ದಾರೆ. ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು, ಸ್ಪಂದನಾ ಅವರ ತಂದೆ ಬಿ ಕೆ ಶಿವರಾಮ್ ಮತ್ತು ಸಹೋದರ ರಕ್ಷಿತ್ ಅವರು ಬ್ಯಾಂಕಾಕ್ಗೆ ಹೋಗಿದ್ದು, ಸ್ಪಂದನಾ ಅವರ
ನಿಧನಕ್ಕೆ ಚಿತ್ರರಂಗದ ಗಣ್ಯರು, ಬಂಧುಗಳು (Spandana died of heart attack) ಸಂತಾಪ ಸೂಚಿಸಿದ್ದಾರೆ.
ಸ್ಪಂದನಾ ಅವರು ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಮ್ (B.K.Shivaram) ಅವರ ಪುತ್ರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬ ಸದಸ್ಯರು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಮಂಗಳವಾರ ಬೆಂಗಳೂರಿಗೆ ಮೃತದೇಹ
ಸ್ಪಂದನಾ ಅವರಿಗೆ ಹೃದಯಾಘಾತವಾಗುತ್ತಿದ್ದಂತೆಯೇ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ಧಾರೆ. ಬೆಂಗಳೂರಿಗೆ ಮಂಗಳವಾರ ಆಗಸ್ಟ್ .8ರಂದು
2,000 ರೂ ನೋಟು ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30 ವರೆಗೂ ಅವಕಾಶ ; ಬ್ಯಾಂಕುಗಳ ರಜಾದಿನಗಳ ಬಗ್ಗೆ ತಿಳಿದಿರಿ
ಪಾರ್ಥಿವ ಶರೀರವನ್ನು ತರುವುದಕ್ಕೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಈಗಾಗಲೇ ಸ್ಪಂದನಾ ಅವರ ತಂದೆ ಬಿ ಕೆ ಶಿವರಾಮ್ ಮತ್ತು ಸಹೋದರ ರಕ್ಷಿತ್ ಶಿವರಾವ್ (Rakshit Shivarao) ಅವರು ಬ್ಯಾಂಕಾಕ್ನತ್ತ
ಹೊರಟಿದ್ದಾರೆ. ಸ್ಪಂದನಾ ಅವರ ನಿಧನ ರಾಜ್ಯದಲ್ಲಿ ದೊಡ್ಡ ಆಘಾತವನ್ನು ಉಂಟು ಮಾಡಿದೆ.
2007ರ ಆಗಸ್ಟ್ 26ರಂದು ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಅವರು ವಿವಾಹ ಆಗಿದ್ದರು. ಈ ದಂಪತಿಗೆ ಶೌರ್ಯ (Shourya) ಹೆಸರಿನ ಮಗ ಇದ್ದಾನೆ. ಬಹಳ ಅನ್ಯೋನ್ಯವಾಗಿದ್ದ ಈ ಕುಟುಂಬದಲ್ಲಿ ಸ್ಪಂದನಾ
ಅವರ ನಿಧನ ಬರಸಿಡಿಲಿನಂತೆ ಎರಗಿದೆ. ಚಿತ್ರರಂಗದ ಗಣ್ಯರು, ಆತ್ಮೀಯರು, ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.
ಸ್ಪಂದನಾ ವಿಜಯ್ ರಾಘವೇಂದ್ರ ಕೂಡ ಸಿನಿಮಾವೊಂದರಲ್ಲಿ ನಟಿಸಿದ್ದರು, ರವಿಚಂದ್ರನ್ ನಟಿಸಿ ನಿರ್ದೇಶಿಸಿದ್ದ ‘ಅಪೂರ್ವ’ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರ ಜೊತೆಗೆ ಸ್ಪಂದನಾ ಕೂಡ ಅತಿಥಿ ಪಾತ್ರ ಮಾಡಿದ್ದರು.
ಈ ಸಿನಿಮಾದಲ್ಲಿ ಕೂಡ ಈ ಜೋಡಿ ತೆರೆಮೇಲೆಯೂ ದಂಪತಿಯಾಗಿಯೇ ಕಾಣಿಸಿಕಂಡಿದ್ದರು. ಇನ್ನು ವಿಜಯ್ ರಾಘವೇಂದ್ರ ನಟಿಸಿ, ನಿರ್ದೇಶಿಸಿದ್ದ ‘ಕಿಸ್ಮತ್‘ (Kismat) ಚಿತ್ರವನ್ನು ಸ್ಪಂದನಾ ಅವರು ನಿರ್ಮಾಣ ಮಾಡಿದ್ದರು.
2023ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪಂದನಾ ಅವರ ಸಹೋದರ ರಕ್ಷಿತ್ ಶಿವರಾಮ್ ಅವರು ಬೆಳ್ತಂಗಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸಹೋದರನ ಪರವಾಗಿ ಸ್ಪಂದನಾ ಅವರು ಪ್ರಚಾರ ಮಾಡಿದ್ದರು. ಕೆಲವು
ದಿನಗಳ ಹಿಂದಷ್ಟೇ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (D.K.Shivakumar) ಅವರನ್ನು ಸ್ಪಂದನಾ ವಿಜಯ್ ರಾಘವೇಂದ್ರ ಅವರು ಭೇಟಿಯಾಗಿ ಮತಾತುಕತೆ ನಡೆಸಿದ್ದರು.
ನಟ ವಿಜಯ ರಾಘವೇಂದ್ರ ಹಾಗೂ ಸ್ಪಂದನ ಇವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಪ್ರಾರ್ಥನೆ. ಭಾವಪೂರ್ಣ ಶ್ರದ್ಧಾಂಜಲಿ.
ಭವ್ಯಶ್ರೀ ಆರ್.ಜೆ