ಶುಲ್ಕ ನೀಡಿಲ್ಲವೆಂದು ಪರೀಕ್ಷೆ ನಿರಾಕರಿಸಿದ್ದ ಶಾಲೆ, ಆದರೆ ಆ ಬಾಲಕಿ ಇಂದು ರಾಜ್ಯಕ್ಕೆ ಪ್ರಥಮ

ಗ್ರೀಷ್ಮಾ

SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಗ್ರೀಷ್ಮಾ

ಬೆಂಗಳೂರು ಅ 12 : ಮೂಡುಬಿದ್ರೆಯ ಆಳ್ವಾಸ್ ವಸತಿ ಶಾಲೆಯ ವಿದ್ಯಾರ್ಥಿನಿ ಗ್ರೀಷ್ಮಾ ನಾಯ್ಕ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಈ ಬಾರಿ ರಾಜ್ಯಕ್ಕೇ ಪ್ರಥಮ ಸ್ಥಾನಿಯಾಗಿದ್ದಾರೆ. ಹುಡುಗಿಯ ಆಸೆಗೆ ಶಾಲಾಡಳಿತ ಸಂಸ್ಥೆ ತಣ್ಣೀರೆರಚಿದ್ರೂ, ಅಂದಿನ ಶಿಕ್ಷಣ ಸಚಿವರು ಸಕಾಲದಲ್ಲಿ ಸ್ಪಂದಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದು ಈಗ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿ ನಡೆಸಿದ ಬಿ.ಸಿ.ನಾಗೇಶ್, ಜುಲೈ 19 ಮತ್ತು 22ರಂದು ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಗ್ರೀಷ್ಮಾಗೆ ಅವಕಾಶ ನಿರಾಕರಿಸಲಾಗಿತ್ತು. ಈ ವಿಷಯ ತಿಳಿದ ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗ್ರೀಷ್ಮಾಳ ಮನೆಗೆ ತೆರಳಿ ಸಮಾಧಾನ ಹೇಳಿದ್ದರು. ಆನಂತರ, ಸೆ.27 ಮತ್ತು 29ರಂದು ನಡೆದಿದ್ದ ಪೂರಕ ಪರೀಕ್ಷೆಯಲ್ಲಿ ಕುಳಿತು ಪರೀಕ್ಷೆ ಬರೆಯಲು ಅನುವು ಮಾಡಲಾಗಿತ್ತು.ಆಕೆಯೀಗ 525ಕ್ಕೆ 599 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿ ಆಗಿದ್ದಾಳೆ ಎಂದು ಹೇಳಿದರು.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗ್ರೀಷ್ಮಾ ನಾಯ್ ಮೂಡುಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದಳು. 9ನೇ ಕ್ಲಾಸಿನಲ್ಲಿ 96 ಶೇಕಡಾ ಅಂಕ ಪಡೆದಿದ್ದ ಗ್ರೀಷ್ಮಾ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ರೆಡಿ ಮಾಡಿಕೊಂಡಿದ್ದಳು. ಆದರೆ, ಹಿಂದಿನ ಸಾಲಿನ (ವಸತಿ ಮತ್ತು ಊಟದ ಶುಲ್ಕ ಶಾಲೆಯ ಪೀಸನ್ನು ಕಟ್ಟಿರದ ಕಾರಣ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವುದಕ್ಕೆ ಶಾಲಾಡಳಿತ ಅವಕಾಶ ಕೊಟ್ಟಿರಲಿಲ್ಲ. ಕೊರೊನಾ ಲಾಕೌನ್ ಕಾರಣದಿಂದ ಕುಟುಂಬಕ್ಕೆ ತೊಂದರೆಯಾಗಿದ್ದರಿಂದ ಶಾಲಾ ಶುಲ್ಕ ಕಟ್ಟಿರಲಿಲ್ಲ. ಈ ಬಗ್ಗೆ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದ ಗ್ರೀಷ್ಮಾ ನಾಯಕ್, ನಾವು ಪೂರ್ತಿಯಾಗಿ ಶುಲ್ಕ ಭರಿಸುತ್ತೇವೆ. ನಮಗೆ ರಿಯಾಯಿತಿ ಕೊಡುವುದು ಬೇಡ, ಆದರೆ, ಸ್ವಲ್ಪ ಸಮಯ ಕೊಡಿ ಅಷ್ಟೇ. ಹಾಗೆಂದು, ಪರೀಕ್ಷೆ ಬರೆಯದಂತೆ ಮಾಡಿ ಒಂದು ವರ್ಷದ ಅವಧಿಯನ್ನು ಹಾಳು ಮಾಡಬೇಡಿ, ಭವಿಷ್ಯಕ್ಕೆ ಹುಳಿ ಹಿಂಡದಿರಿ ಎಂದು ಗೋಗರೆದಿದ್ದಳು.

ಈಕೆಯ ಪತ್ರ ಮತ್ತು ಈ ಕುರಿತು ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಆಗಿನ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತುಮಕೂರಿನ ಮನೆಗೆ ತೆರಳಿ, ಹುಡುಗಿಗೆ ಸಾಂತ್ವನ ಹೇಳಿದರು. ಇನ್ನೇನು ಪರೀಕ್ಷೆಗೆ ದಿನ ಹತ್ತಿರ ಬಂದಿರುವುದರಿಂದ ಈಗಿನದಕ್ಕೆ ಸಾಧ್ಯವಾಗದಿದ್ದರೆ, ಮುಂದಿನ ತಿಂಗಳು ನಡೆಯುವ ಪೂರಕ ಪರೀಕ್ಷೆ ಬರೆಯುವಂತೆ ಮನವೊಲಿಸಿದ್ದರು. ಪರಿಶಿಷ್ಟ ಜಾತಿ ವಿದ್ಯಾರ್ಥಿನಿ ಆಗಿದ್ದರಿಂದ ಆಕೆಗೆ ಪರೀಕ್ಷಾ ಶುಲ್ಕದಲ್ಲಿ ರಿಯಾಯಿತಿಯೂ ಇತ್ತು.ಶಾಲಾಡಳಿತ ನಡೆಸಿಕೊಂಡ ರೀತಿ ಬಗ್ಗೆ ನೋವಿದ್ದರೂ, ಗ್ರೀಷ್ಮಾ ಅದೇ ಶಾಲೆಯಲ್ಲಿ ಪೂರಕ ಪರೀಕ್ಷೆ ಬರೆದಿದ್ದಳು ಇದೀಗ ರಾಜ್ಯಕ್ಕೆ ಪ್ರಥಮ ಸ್ಥಾನಿ ಆಗುವ ಮೂಲಕ ವಿದ್ಯೆ ಎಂಬುವುದಕ್ಕೆ ಬಡತನದ ಹಂಗಿಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ.

Exit mobile version