ರಾಜೀವ್ ಗಾಂಧಿ(Rajiv Gandhi) ಅವರನ್ನು ಹತ್ಯೆ(Kill) ಮಾಡಿರುವ ಅಪರಾಧಿ(Culprit) ಎ.ಜಿ. ಪೇರರಿವಾಳನ್‍ನನ್ನು ಸುಪ್ರೀಂಕೋರ್ಟ್(Supremecourt) ನೀಡಿರುವ ಆದೇಶದ ಹಿನ್ನಲೆಯಲ್ಲಿ ಬುಧವಾರ ಬಿಡುಗಡೆ ಮಾಡಲಾಗಿದೆ.

ಸುಧೀರ್ಘ 31 ವರ್ಷಗಳ ಕಾರಾಗೃಹ ವಾಸ ಅನುಭವಿಸಿ ಬಿಡುಗಡೆಯಾದ ಎ.ಜಿ. ಪೇರರಿವಾಳನ್ ತಮಿಳುನಾಡು ಮುಖ್ಯಮಂತ್ರಿ(Tamilnadu Chiefminister) ಸ್ಟಾಲಿನ್(Stalin) ಅವರನ್ನು ಕುಟುಂಬ ಸಮೇತ ಭೇಟಿಯಾಗಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಅಪರಾಧಿಯನ್ನು ಮುಖ್ಯಮಂತ್ರಿ ಸ್ಟಾಲಿನ್ ಭೇಟಿಯಾಗಿರುವುದು ತೀವ್ರ ಚರ್ಚೆಗೆಗ್ರಾಸವಾಗಿದೆ. 1991 ಜೂನ್ 19ರಂದು ಪೇರರಿವಾಳನ್‍ನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದರು. ರಾಜೀವ್ ಗಾಂಧಿ ಹತ್ಯೆಯಲ್ಲಿ ಭಾಗಿಯಾದ ಪ್ರಮುಖ ಏಳು ಜನ ಅಪರಾಧಿಗಳಲ್ಲಿ ಪೇರರಿವಾಳನ್ ಕೂಡಾ ಒರ್ವನಾಗಿದ್ದು, ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಸುಧೀರ್ಘ 31 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಇದೀಗ ಬಿಡುಗಡೆಯಾಗಿದ್ದಾನೆ. ಪೇರರಿವಾಳನ್ ಬಿಡುಗಡೆಗಾಗಿ ಅವನ ತಾಯಿ ಅರ್ಪುತಮ್ಮಾ ಅಮ್ಮಾಳ್ ಸಾಕಷ್ಟು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಇನ್ನು ಪೇರರಿವಾಳನ್‍ನನ್ನು ಭೇಟಿಯಾದ ಕುರಿತು ಟ್ವೀಟ್‍ರ್‍ನಲ್ಲಿ ವಿಡಿಯೋ ಹಂಚಿಕೊಂಡಿರುವ ಮುಖ್ಯಮಂತ್ರಿ ಸ್ಟಾಲಿನ್ “30 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿ ಹಿಂತಿರುಗಿದ ಸಹೋದರ ಪೇರರಿವಾಳನ್ ಅವರನ್ನು ಭೇಟಿಯಾದೆ. ಪೇರರಿವಾಳನ್ ಮತ್ತು ಆತನ ತಾಯಿ ಅರ್ಪುತಮ್ಮಾ ಅಮ್ಮಾಳ್ ಅವರಿಗೆ ಆನಂದದಿಂದ ಜೀವನ ನಡೆಸಲು ಹಾರೈಸಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ರಾಜೀವ್ ಗಾಂಧಿ ಹತ್ಯೆಯ ಅಪರಾಧಿಗಳನ್ನು ಬಿಡುಗಡೆ ಮಾಡಿಸುತ್ತೇವೆ ಎಂಬ ಅಂಶವನ್ನು ಡಿಎಂಕೆ ಕಳೆದ ವಿಧಾನಸಭಾ ಚುನಾವಣೆಯ ತನ್ನ ಪ್ರನಾಳಿಕೆಯಲ್ಲಿ ಸೇರಿಸಿತ್ತು. ರಾಜೀವ್ ಗಾಂಧಿ ಹತ್ಯೆಯ ಅಪರಾಧಿಗಳ ಬಿಡುಗಡೆ ವಿಷಯವೂ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ರಾಜಕೀಯ ಸಂಘರ್ಷವಾಗಿದ್ದು, ಅಪರಾಧಿಗಳನ್ನು ಬಿಡುಗಡೆ ಮಾಡುವ ಸಂಬಂಧ ಎರಡು ಪಕ್ಷಗಳು ಜನರಿಗೆ ಆಶ್ವಾಸನೆ ನೀಡಿದ್ದವು.
2018ರಲ್ಲಿ ಎಐಎಡಿಎಂಕೆ ಪಕ್ಷವು ರಾಜೀವ್ ಗಾಂಧಿ ಹತ್ಯೆಯ ಅಪರಾಧಿಗಳನ್ನು ಬಿಡುಗಡೆ ಮಾಡಬೇಕೆಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಆದರೆ ಅಂದಿನ ರಾಜ್ಯಪಾಲರು ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ.

ಇನ್ನು ಸಂವಿಧಾನದ 142ನೇ ವಿಧಿಯನ್ನು ಬಳಸಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ್ ರಾವ್ ಮತ್ತು ಬಿ.ಆರ್. ಗವಾಯಿ ಅವರು ಅಪರಾಧಿ ಪೇರರಿವಾಳನ್ ಬಿಡುಗಡೆಗೆ ಆದೇಶಿಸಿದ್ದರು.