ಸ್ಟಾರ್‌ ಫ್ರೂಟ್‌ ತಿನ್ನಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

Star Fruit Health Benefits : ಭಾರತದಲ್ಲಿ ಮಳೆಗಾಲವು (Rainy Season) ಆರಂಭವಾದ ಕೂಡಲೇ ಸುಡುವ ಬೇಸಿಗೆಯಿಂದ ನಮಗೆ ಮುಕ್ತಿ ಸಿಗುತ್ತೆ. ವಾತಾವರಣ (Weather) ತಂಪಾಗುತ್ತೆ.

Star Fruit

ಜೊತೆಗೆ ಪರಿಸರದಲ್ಲೂ ಅನೇಕ ಬದಲಾವಣೆಗಳಾಗುತ್ತವೆ. ಇದ್ದಕ್ಕಿದ್ದಂತೆ ವಾತಾವರಣ ಬದಲಾದಾಗ ಮನುಷ್ಯನ ದೇಹದಲ್ಲಿ (Body) ರೋಗನಿರೋಧಕ ಶಕ್ತಿ ಕಡಿಮೆ ಆಗಿ ಅನೇಕ ಆರೋಗ್ಯ

ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು ನಾವು ಆಯಾ ಕಾಲದಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳನ್ನು

(Vegetables) ತಿಂದು ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡೆಯಬಹುದು. ಈ ರೀತಿ ಮಳೆಗಾಳದಲ್ಲಿ ನಮ್ಮ ಆರೋಗ್ಯ ಕಾಪಾಡುವ ಒಂದು ಹಣ್ಣಿನ ಪರಿಚಯ ಮಾಡಿಸ್ತೀವಿ ಬನ್ನಿ.

Star Fruit

ಯಸ್‌, ಸ್ಟಾರ್ ಫ್ರೂಟ್. ಇದನ್ನು ಕ್ಯಾರಂಬೋಲ ಹಣ್ಣು ಅಂತಲೂ ಕರೀತಾರೆ. ಹಸಿರು ಹಳದಿ ಬಣ್ಣದ ಈ ಹಣ್ಣನ್ನು ಕತ್ತರಿಸಿದ ನಂತರ ನಕ್ಷತ್ರದಂತಹ ಆಕಾರ ಕಾಣಬಹುದಾಗಿದೆ. ಹುಳಿ ರುಚಿಯನ್ನು

ಹೊಂದಿರುವ ಇದು ಕ್ವೆರ್ಸೆಟಿನ್, ಗ್ಯಾಲಿಕ್ ಆಮ್ಲ ಮತ್ತು ಎಪಿಕಾಟೆಚಿನ್ ಸೇರಿದಂತೆ ಹಲವು ಪೋಷಕ ತತ್ವಗಳನ್ನು ಹೊಂದಿದ್ದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಶಕ್ತಿಯುತವಾದ ಉತ್ಕರ್ಷಣ

ನಿರೋಧಕ ಗುಣಲಕ್ಷಣಗಳನ್ನು ಮತ್ತು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಸ್ಟಾರ್ ಹಣ್ಣು ಕೊಬ್ಬಿನ ಅಂಶಗಳನ್ನು ಕಡಿಮೆ (star fruit health benefits) ಮಾಡುತ್ತದೆ.

ಇದನ್ನು ಓದಿ: ಬೆಚ್ಚಿ ಬೀಳಿಸುವ ಸುದ್ದಿ ! ರಾಜ್ಯದಲ್ಲಿ 5 ವರ್ಷಗಳಲ್ಲಿ 10,687ಮಕ್ಕಳು ನಾಪತ್ತೆ


ಸ್ಟಾರ್‌ಫ್ರೂಟ್‌ನ ಪೌಷ್ಠಿಕಾಂಶದ ಮೌಲ್ಯ. ಹೃದಯದ ಆರೋಗ್ಯಕ್ಕೆ ಒಳ್ಳೆಯದು 100 ಗ್ರಾಂ ಸ್ಟಾರ್‌ಫ್ರೂಟ್‌ನಲ್ಲಿ 34.4 ಮಿಗ್ರಾಂ ವಿಟಮಿನ್ ಸಿ, 1 ಗ್ರಾಂ ಪ್ರೋಟೀನ್, 133 ಮಿಗ್ರಾಂ ಪೊಟ್ಯಾಸಿಯಮ್,

10 ಮಿಗ್ರಾಂ ಮೆಗ್ನೀಸಿಯಮ್, 2 ಮಿಗ್ರಾಂ ಸೋಡಿಯಂ, 61 ಐಯು ವಿಟಮಿನ್ ಎ, 3 ಮಿಗ್ರಾಂ ಕ್ಯಾಲ್ಸಿಯಂ ಮತ್ತು 0.1 ಮಿಗ್ರಾಂ ಕಬ್ಬಿಣವಿದೆ. ಇದು ಫೈಬರ್, 7 Start ಕಾರ್ಬೋಹೈಡ್ರೇಟ್

ಮತ್ತು ಸುಮಾರು 31 ಕ್ಯಾಲೊರಿಗಳನ್ನು ಹೊಂದಿರುತ್ತದೆ, ಇದು ಕಡಿಮೆ ಕ್ಯಾಲೋರಿ ಹಣ್ಣಾಗಿರುತ್ತದೆ. ಸ್ಟಾರ್‌ಫ್ರೂಟ್‌ನಲ್ಲಿ ಪಾಲಿಫಿನೋಲಿಕ್ ಸಂಯುಕ್ತಗಳು, ಗ್ಯಾಲಿಕ್ ಆಮ್ಲ, ಕ್ವೆರ್ಸೆಟಿನ್ ಮತ್ತು

ಎಪಿಕಾಟೆಚಿನ್ ನಂತಹ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಇರುತ್ತವೆ.

Exit mobile version