ಬಿಜೆಪಿ ಸರ್ಕಾರ 50,000 ಯುವಕರ ‘ಜೀವನದ ಕೊಲೆ’ ಮಾಡಿದೆ : ಕಾಂಗ್ರೆಸ್

BJP

ಪಿಎಸ್‌ಐ ಅಕ್ರಮ(PSI Recruitment Scam) ಕೊಲೆಗಿಂತಲೂ ಮಿಗಿಲಾದದ್ದು, ಕೊಲೆಯಾದರೆ ಒಬ್ಬನ ಪ್ರಾಣ ಹೋಗುತ್ತದೆ, ಇಲ್ಲಿ 50,000 ಜನ ತೊಂದರೆಗೆ ಸಿಲುಕಿದ್ದಾರೆ.

ಜೀವದ ಕೊಲೆಯಂತೆಯೇ ಜೀವನದ ಕೊಲೆಯೂ ಭೀಕರವಾದುದು. ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ರಾಜ್ಯದ 50,000 ಯುವಕರ ‘ಜೀವನದ ಕೊಲೆ’ ಮಾಡಿದೆ ಬಿಜೆಪಿ ಸರ್ಕಾರ(BJP Government).

ಈ ಕೊಲೆಗೆ ಅಂದಿನ ಗೃಹಸಚಿವರೇ ಹೊಣೆ. ಪಿಎಸ್‌ಐ ಅಕ್ರಮ ಸಮಾಜದ ಮೇಲಿನ ಭಯೋತ್ಪಾದಕ ದಾಳಿ ಇದ್ದಂತೆ ಎಂದು ಕಾಂಗ್ರೆಸ್‌(Congress) ಗಂಭೀರ ಆರೋಪ ಮಾಡಿದೆ.


ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಕಾಂಗ್ರೆಸ್‌, ‘ಪಾರದರ್ಶಕ ತನಿಖೆ’ ನಡೆಯುತ್ತಿದೆ ಎಂದು ಹಾದಿ ಬೀದಿಯಲ್ಲಿ ಹೇಳಿಕೊಂಡು ತಿರುಗುತ್ತಿದ್ದಿರಲ್ಲ ಮುಖ್ಯಮಂತ್ರಿ ಬೊಮ್ಮಾಯಿ(Basavaraj Bommai) ಅವರೇ, ಹೈಕೋರ್ಟ್ ನಿಮ್ಮ ‘ಪ್ರಾಮಾಣಿಕ ತನಿಖೆ’ಯನ್ನು ಪ್ರಶ್ನಿಸುತ್ತಿದೆ.

https://vijayatimes.com/siddaramaiah-clarify-about-keruru-incident/

ಈಗ ಉತ್ತರ ಹೇಳಿ, 10 ದಿನಗಳಾದರೂ ಅಮೃತ್ ಪೌಲ್ರ ಹೇಳಿಕೆಯನ್ನು ನ್ಯಾಯಾಲಯ ಮುಂದೆ ದಾಖಲಿಸಲು ಭಯಪಡುತ್ತಿರುವುದೇಕೆ? ಸರ್ಕಾರದ ಮಿಕಗಳು ಬಲೆಗೆ ಬೀಳುವ ಭಯವೇ? ಎಂದು ಪ್ರಶ್ನಿಸಿದೆ.
ಪಿಎಸ್‌ಐ ಅಕ್ರಮ ಹಗರಣದ ಆಳ, ಅಗಲವನ್ನು ಹಾಗೂ ಅದರ ಹಾನಿಯನ್ನು ವಿವರಿಸಲು ಹೈಕೋರ್ಟ್(Highcourt) ನ್ಯಾಯಾಧೀಶರ ಮಾತು ಸಾಕು.

ಇಂತಹ ‘ಭೀಕರ’ ಹಗರಣ ನಡೆದೇ ಇಲ್ಲ ಎಂದು ಪ್ರತಿಪಾದಿಸಿದ್ದ ಸರ್ಕಾರ, ಈಗ ತನಿಖೆಯನ್ನು ಹಳ್ಳ ಹಿಡಿಸಲು ಯತ್ನಿಸುತ್ತಿದೆ. ವಿಷಯದಲ್ಲಿ ಹುರುಳಿಲ್ಲದಾಗ ಒಗಟಿನ ಭಾಷೆಯ ಮೊರೆ ಹೋಗುತ್ತದೆ ಬಿಜೆಪಿ ಸರ್ಕಾರ. https://vijayatimes.com/siddaramaiah-clarify-about-keruru-incident/

ಆದರೆ ನಿಮ್ಮದೇ ಪಕ್ಷದ ಯತ್ನಾಳ್ರ ಪ್ರಶ್ನೆಗಳನ್ನು ನಾವು ನೇರವಾಗೆ ಕೇಳುತ್ತೇವೆ. ಬಿಎಸ್‌ವೈ(BSY) ಆಪ್ತನ ಮನೆಯಲ್ಲಿ ಸಿಕ್ಕ ಬೇನಾಮಿ ಲೂಟಿ ಹಣ ಯಾರದ್ದು? ವಿಜಯೇಂದ್ರರ ದುಬೈ-ಮಾರಿಷಸ್ನ ಭೇಟಿಗಳ ರಹಸ್ಯವೇನು? ಸಿಎಂ ಹುದ್ದೆಗೆ 2,500 ಕೋಟಿ ಕೊಟ್ಟವರಾರು? ಎಂದು ಪ್ರಶ್ನಿಸಿದೆ.

ಪಿಎಸ್‌ಐ ಅಕ್ರಮ ಹಗರಣ ಹೊರಬರುವ ಮೊದಲು 'ಅಕ್ರಮ ನಡದೇ ಇಲ್ಲ' ಎನ್ನುತ್ತಿದ್ದವರು, ಈಗ 'ಪ್ರಾಮಾಣಿಕ ತನಿಖೆ ನಮ್ಮದು' ಎನ್ನುತ್ತಿದ್ದಾರೆ. ಕಾಂಗ್ರೆಸ್ ಹೋರಾಡದಿದ್ದರೆ ಈ ತಪ್ಪೊಪ್ಪಿಗೆಯ ಹಂತಕ್ಕೆ ಬಿಜೆಪಿ ಬರುತ್ತಿರಲಿಲ್ಲ.
ಅಮೃತ್ ಪೌಲ್, ಶಾಂತಕುಮಾರ್ ಅವರ ಹೇಳಿಕೆಯನ್ನು ನ್ಯಾಯಾಧೀಶರೆದುರು ದಾಖಲಿಸಿ ‘ಪ್ರಾಮಾಣಿಕ ತನಿಖೆ’ಯನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದೆ.
Exit mobile version