ಇಲ್ಲಿವೆ ನೋಡಿ ವಿಚಿತ್ರ ಸಾಕುಪ್ರಾಣಿಗಳು: ಇವುಗಳ ಬಗ್ಗೆ ಕೇಳಿದರೆ ಅಚ್ಚರಿಯಾಗುವುದು ಖಂಡಿತ!

ಸಂಶೋಧನೆಗಳ ಪ್ರಕಾರ ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅದರಿಂದ ಬಹಳಷ್ಟು ಉಪಯೋಗಗಳಿವೆಯಂತೆ. ಆರೋಗ್ಯ, ಮಾನಸಿಕ ನೆಮ್ಮದಿ ಎಲ್ಲವನ್ನು ಮನೆಯಲ್ಲಿನ ಸಾಕು ಪ್ರಾಣಿಗಳು ಸುಧಾರಿಸುತ್ತವಂತೆ.

ಆದರೆ ಇತ್ತೀಚಿಗಿನ ದಿನಗಳಲ್ಲಿ ಮನೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕುವುದು ಒಂದು ಜವಾಬ್ದಾರಿಯುತ ಕೆಲಸವಾಗಿದೆ.

ಇನ್ನು, ಸಾಕುಪ್ರಾಣಿಗಳೆಂದರೆ ತಕ್ಷಣ ನೆನಪಿಗೆ ಬರುವುದು, ನಾಯಿ, ಬೆಕ್ಕು, ಮೊಲ, ಗಿಳಿ, ಪಾರಿವಾಳಗಳು ಅಲ್ಲವೇ? ಆದರೆ, ಜಗತ್ತಿನಲ್ಲಿ ಬೇರೆ ಬೇರೆ ಕಡೆ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ತಮ್ಮ ಸಾಕುಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ತಿಳಿಯೋಣ ಬನ್ನಿ.

ಪಿಗ್ಮಿ ಆಡು: ಆಡುಗಳು ನಮ್ಮಲ್ಲಿ ಬಹಳ ಕಾಲದಿಂದಲೂ ಸಾಕು ಪ್ರಾಣಿಗಳಾಗಿವೆ. ಆದರೆ ಇದು ಕುಳ್ಳ ಆಡು. ಇದನ್ನು ಸಾಕಲು ಖರ್ಚೇನೂ ಬರುವುದಿಲ್ಲ. ಇದೂ ಸಸ್ಯಾಹಾರಿಯೇ,

https://vijayatimes.com/sonia-gandhi-will-join-bharat-jodo-yatra/

ಇದನ್ನು ಸಾಕಲು 8 ಅಡಿ ಉದ್ದ, 10 ಅಡಿ ಅಗಲ ಮತ್ತು ಸುಮಾರು 4 ಅಡಿ ಎತ್ತರದ ಬೇಲಿಯನ್ನು ನಿರ್ಮಿಸಬೇಕಾಗುತ್ತದೆ. ವಿಚಿತ್ರ ಎಂದರೆ, (Strange pets) ಇದು ತನ್ನ ವಿಶಿಷ್ಟ ಕಂಠದಿಂದ ಪ್ರತಿಕ್ರಿಯಿಸಬಲ್ಲದು.


ಕೆಪಿಬೆರಾ: ಇದೊಂದು ಗಿನಿ ದೇಶದ ಹಂದಿ. ಇದರ ಮೂಲ ದಕ್ಷಿಣ ಅಮೆರಿಕಾ. ಇದು ಇಲಿಯಂತೆ ಕಾಣುವ ದಂಶಕ ವರ್ಗದ ಪ್ರಾಣಿ. ಇದು ಸಂಪೂರ್ಣ ಬೆಳೆದಾಗ 4 ಅಡಿ ಉದ್ದವಿದ್ದು ,

ಸುಮಾರು 45 ಕೆ.ಜಿ. ಭಾರ ತೂಗಬಲ್ಲದು. ಇಂತಹ ಪ್ರಸಿದ್ಧಿ ಪಡೆಯದ ಪ್ರಾಣಿಯೊಂದು (Strange pets) ಸಾಕುಪ್ರಾಣಿಯಾಗಿದೆಯೆಂದರೆ ಅಚ್ಚರಿಯಲ್ಲವೆ? ಇದು ಇಂದು ಬುಡಾಪೆಸ್ಟ್ ಮತ್ತು ಟೆಕ್ಸಾಸ್‌ಗಳಲ್ಲಿ ಸಾಕುಪ್ರಾಣಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ.

ಇವು ಭಾಗಶಃ ನೀರಿನಲ್ಲಿ ಈಜಬಲ್ಲವು. ಆದರೆ, ಇವು ಚೂಪಾದ ಹಲ್ಲುಗಳನ್ನು ಹೊಂದಿರುವುದರಿಂದ ಚಿಕ್ಕ ಮಕ್ಕಳಿರುವ ಮನೆಯಲ್ಲಿ ಸಾಕಲು ಯೋಗ್ಯವಲ್ಲ.

https://vijayatimes.com/cover-story-donation-scam/

ಸ್ಟಿಕ್ ಇನ್‌ಸೆಕ್ಟ್: ಇದೊಂದು ಮಕ್ಕಳಾಟಕ್ಕೆ ಬಳಸಬಹುದಾದ ವಿಚಿತ್ರ ಸಾಕುಪ್ರಾಣಿ. ಇದನ್ನು ಸಾಕಲು ಹೆಚ್ಚು ಶ್ರಮ ಪಡಬೇಕಾಗಿಲ್ಲ. ಈ ಕಡ್ಡಿಯಂತಹ ಪ್ರಾಣಿ ಸುಮಾರು 3ರಿಂದ 4 ಇಂಚು ಉದ್ದವಿರುತ್ತದೆ.

ಇದಕ್ಕೆ ಯೋಗ್ಯ ವಾತಾವರಣವನ್ನು ಕಲ್ಪಿಸಿದರೆ ಹಲವಾರು ವರ್ಷಗಳ ಕಾಲ ಸಂಗಾತಿಯಾಗಿರಬಲ್ಲದು. ಕೊಠಡಿಗಳಲ್ಲಿ ನೇತಾಡಬಲ್ಲ ಇವುಗಳನ್ನು ಎತ್ತಾಡುವಾಗ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಇದರ ಕೈ, ಕಾಲುಗಳು ಮುರಿಯುವ ಸಾಧ್ಯತೆಯಿದೆ.


ಪುಟ್ಟ ಕತ್ತೆ: ಈ ಪುಟ್ಟ ಕತ್ತೆ ‘ಶ್ರೆಕ್’ ಎನ್ನುವ ಅನಿಮೇಟೆಡ್ ಇಂಗ್ಲಿಷ್ ಚಲನಚಿತ್ರದಲ್ಲಿ ಕಾಣಿಸಿಕೊಂಡ ಮೇಲೆ ಇದೊಂದು ಜನಪ್ರಿಯ ಸಾಕು ಪ್ರಾಣಿಯಾಗಿದೆ. ಇಂದು ಅಮೆರಿಕದಲ್ಲಿ ಇದೊಂದು ಜನಪ್ರಿಯ ಸಾಕುಪ್ರಾಣಿ.

ಈ ಪ್ರಾಣಿಗಳು ಅತ್ಯಂತ ಪ್ರೀತಿ ತೋರಿಸುವ ಹಾಗೂ ಮಕ್ಕಳೊಂದಿಗೆ ಬಲು ಸ್ನೇಹದಿಂದ ಇರಬಲ್ಲವು. ಇವು 3 ಅಡಿ ಎತ್ತರವಿದ್ದು ಸುಮಾರು 90ರಿಂದ 150 ಕಿಲೋಗ್ರಾಂ ತೂಗಬಲ್ಲವು. ಇದು ಸಸ್ಯಹಾರಿಯಾಗಿದ್ದು ಸಾಕಲು ಮಾತ್ರ ಹೆಚ್ಚು ಜಾಗ ಬೇಕಾಗುತ್ತದೆ.

ಶುಗರ್ ಗ್ಲೈಡರ್: ಇದೊಂದು ಅಮೆರಿಕದ ಜನಪ್ರಿಯ ಹಾರಾಡುವ ಸಾಕುಪ್ರಾಣಿ. ಆಸ್ಟ್ರೇಲಿಯಾ ಮೂಲದ ಈ ಪ್ರಾಣಿಗೆ ಮುಂಗಾಲಿನಿಂದ ಹಿಂಗಾಲಿನವರೆಗೆ ತೆಳುವಾದ ಪದರ ಹರಡಿಕೊಂಡಿದೆ.

https://www.youtube.com/watch?v=FqcKfS31-lk&list=PLuyhotqqrzj9jbwbtr6Wo69H8TUVGTLX1

ಇದು ಅಳಿಲಿನಂತೆ ಮರದಿಂದ ಮರಕ್ಕೆ ಸುಲಭವಾಗಿ ಹಾರಾಡಬಲ್ಲದು. ಪೂರ್ಣ ಬೆಳೆದ ಈ ಪ್ರಾಣಿ ಕೇವಲ 85 ಗ್ರಾಂ ಭಾರವಿದ್ದು, ಸುಮಾರು 7 ಇಂಚು ಉದ್ದ ಇರಬಲ್ಲದು.

ಇವು ಅತ್ಯಂತ ಸ್ನೇಹಜೀವಿಗಳಾಗಿದ್ದು ಗುಂಪಾಗಿರಲು ಬಯಸುತ್ತವೆ. ಇವು ಕೀಟಗಳನ್ನು ತಿನ್ನ್ನುವ ಪರಿಸರಪ್ರೇಮಿಯೂ ಹೌದು. ಇವುಗಳಿಗೆ ಚೂಪಾದ ಹಲ್ಲುಗಳಿರುವುದರಿಂದ ಚಿಕ್ಕಮಕ್ಕಳಿರುವ ಮನೆಯಲ್ಲಿ ಸಾಕುವುದು ಸೂಕ್ತವಲ್ಲ.

ಪವಿತ್ರ

Exit mobile version