ಭಾರತಕ್ಕೆ ಕಾಲಿಟ್ಟ ಅಭ್ಯೇದ್ಯ S – 400

ನವದೆಹಲಿ ನ 23 :  ಸಾಕಷ್ಟು ಅಡೆತಡೆಗಳ ನಡುವೆಯೂ ಭಾರತದ ಬತ್ತಳಿಕೆಗೆ ಮತ್ತೊಂದು ಮಹಾಅಸ್ತ್ರ  ಸೇರ್ಪಡೆಯಾಗ್ತಿದೆ.  ಕೊಟ್ಟ ಮಾತಿನಂತೆ ರಷ್ಯಾ ಭಾರತಕ್ಕೆ ಆಕ್ರಮಣಾಕಾರಿ ಕ್ಷಿಪಣಿಯನ್ನ ಕಳುಹಿಸಲು ಶುರು ಮಾಡಿದೆ. ಭಾರತದ ಬತ್ತಳಿಕೆಗೆ ಇಂಥದೊಂದು ಅಭೇದ್ಯ ಕ್ಷಿಪಣಿ ಎಂಟ್ರಿಯಾಗ್ತಿರೋದು ಪಕ್ಕದ ರಾಷ್ಟ್ರಗಳಿಗೆ ನಡುಕ ಹುಟ್ಟಿಸಿದೆ.

ಮಹಾ ಅಸ್ತ್ರವೊಂದು ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳಲೂ ರಷ್ಯಾದ ಜೊತೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ಆದ್ರೆ ಈ ಒಪ್ಪಂದವನ್ನ ಮುರಿಯಲು ಅಮೆರಿಕಾ ಸಾಕಷ್ಟು ಸಂಚು ರೂಪಿಸಿತ್ತು. ಸದ್ಯ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಷ್ಯಾ ಭಾರತಕ್ಕೆ ಕೊಟ್ಟ ಮಾತಿನಂತೆ ಅಭೇದ್ಯ S-400 ಕ್ಷಿಪಣಿಗಳನ್ನ ಕಳುಹಿಸಿಕೊಡಲು ಶುರುಮಾಡಿದೆ.

2018ರಲ್ಲಿ ಭಾರತ ಐದು S-400 ಕ್ಷಿಪಣಿಗಳನ್ನ ಖರೀದಿಸಲು ರಷ್ಯಾದ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಒಟ್ಟು ಐದು ಬಿಲಿಯನ್ ಡಾಲರ್ ಅಂದ್ರೆ, ಸುಮಾರು 40 ಸಾವಿರ ಕೋಟಿಗೆ S-400 ಕ್ಷಿಪಣಿಗಳನ್ನ ಖರೀದಿಸಲು ಒಪ್ಪಂದವಾಗಿತ್ತು. ಸದ್ಯ ಕೊಟ್ಟ ಮಾತಿನಂತೆ ರಷ್ಯಾ ಅಭೇದ್ಯ S-400 ಕ್ಷಿಪಣಿಗಳನ್ನ ಭಾರತಕ್ಕೆ ಕಳುಹಿಸಲು ಶುರು ಮಾಡಿದೆ. ಈಗಾಗಲೇ ಕ್ಷಿಪಣಿಗಳ ಕೆಲ ಭಾಗಗಳು ಭಾರತಕ್ಕೆ ಎಂಟ್ರಿಯಾಗಿದ್ದು, ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ನಿಯೋಜಿಸಲಾಗ್ತಿದೆ. ಇದಾದ ಬಳಿಕ ಚೀನಾ ಗಡಿ ಪ್ರದೇಶಗಳಲ್ಲಿ ಎಸ್-400 ಕ್ಷಿಪಣಿಗಳನ್ನ ನಿಯೋಜಿಸಲಾಗುತ್ತೆ.

ಸದ್ಯ ಇಂಥದ್ದೊಂದು ಅಭೇದ್ಯ ಕ್ಷಿಪಣಿ ಭಾರತಕ್ಕೆ ಎಂಟ್ರಿ ಕೊಟ್ಟಿರೋದಕ್ಕೆ ವಿಶ್ವದ ದೊಡ್ಡಣ ಅಮೆರಿಕಾನೇ ದಂಗಾಗಿದೆ. ಇನ್ನು ಪಕ್ಕದ ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನ ಎದೆಯಲ್ಲಂತೂ ನಡುಕ ಹುಟ್ಟಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಅಭೇದ್ಯ S-400 ಕ್ಷಿಪಣಿ ಭಾರತದ ಗಡಿಯಲ್ಲಿ ಆಕಾಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತೆ. ಇದರ ಕಣ್ಣು ತಪ್ಪಿಸಿ ಯಾವುದೇ ಕ್ಷಿಪಣಿ, ಯುದ್ಧ ವಿಮಾನಗಳು ಭಾರತದ ಗಡಿ ಒಳಗೆ ನುಸುಳಲು ಬಿಡೋದಿಲ್ಲ. ಹಾಗೇನಾದರೂ ಎಂಟ್ರಿಕೊಟ್ಟರೆ ಕ್ಷಣಮಾತ್ರದಲ್ಲಿ ಆಕಶದಲ್ಲೇ ಯಾರನ್ನೇ ಆಗಲೀ ಉಡೀಸ್ ಮಾಡುತ್ತೆ.

400 ಕಿಲೋ ಮೀಟರ್ ದೂರದಲ್ಲೇ ಹಾಗೂ 30 ಕಿಲೋ ಮೀಟರ್ ಎತ್ತರದಲ್ಲಿ ಹಾರುವ ಯುದ್ಧ ವಿಮಾನಗಳನ್ನ ಹೊಡೆದುರುಳಿಸುತ್ತೆ. ವಿಮಾನ ಮಾತ್ರವಲ್ಲದೆ  ಕ್ಷಿಪಣಿ, ಡ್ರೋನ್‌ಗಳನ್ನೂ ಗುರುತಿಸಿ ಕ್ಷಣಮಾತ್ರದಲ್ಲೇ ಹೊಡೆದಾಕಿ ಮತ್ತೊಂದು ಹೊಸ ಪ್ರಹಾರಕ್ಕೆ ಸಜ್ಜಾಗುತ್ತೆ. ಸದ್ಯ ಈ S-400 ಕ್ಷಿಪಣಿಯನ್ನ ವಿಶ್ವದ ಬೆಸ್ಟ್ ಮತ್ತು ಟಾಪ್ ಮಿಲಿಟರಿ ವೆಪನ್ ಅಂತಾಲೇ ಕರೆಯಲಾಗುತ್ತದೆ.

Exit mobile version