ನಕಲು ಮಾಡಿದ್ದಾಳೆ ಎಂದು ಶಂಕಿಸಿ ವಿದ್ಯಾರ್ಥಿನಿ ಬಟ್ಟೆ ಬಿಚ್ಚಿಸಿದ ಶಿಕ್ಷಕಿ ; ಅವಮಾನ ತಾಳಲಾರದೆ ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿನಿ

Student

Jharkhand : ಜಾರ್ಖಂಡ್‌ನ (Jharkhand) ಜೆಮ್‌ಶೆಡ್‌ಪುರದಲ್ಲಿ (Jamshedpur) ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ನಕಲು ಮಾಡಿದ್ದಾಳೆ ಎಂದು ಶಂಕಿಸಿ ಶಿಕ್ಷಕಿಯೊಬ್ಬರು ಆಕೆಯ ಬಟ್ಟೆ ತೆಗೆಯುವಂತೆ ಒತ್ತಾಯಿಸಿ ಬಟ್ಟೆ ಬಿಚ್ಚಿಸಿದ್ದಾರೆ.

ಈ ಕಾರಣ ತೀವ್ರ ಮನನೊಂದ ಬಾಲಕಿ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ (Student Set Fire On Herself) ಯತ್ನಿಸಿದ್ದಾಳೆ.

ಈ ಘಟನೆಯ ಸಂಭವಿಸಿದ ಬೆನ್ನಲ್ಲೇ 9ನೇ ತರಗತಿ ವಿದ್ಯಾರ್ಥಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆಸ್ಪತ್ರೆಗೆ ವಿದ್ಯಾರ್ಥಿಯನ್ನು ದಾಖಲು ಮಾಡಿದ ಬಳಿಕ ಚಿಕಿತ್ಸೆಗೆ ಒಳಪಡಿಸಿದ ವೈದ್ಯರು ಸದ್ಯ ಬಾಲಕಿಯ(Student Set Fire On Herself) ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.

https://youtu.be/MRjQfgXgN60

ಪೊಲೀಸ್ ಅಧಿಕಾರಿ(Police Officer) ಅವರ ಮಾಹಿತಿಯ ಪ್ರಕಾರ, ವಿದ್ಯಾರ್ಥಿಯು ತನ್ನ ಸಮವಸ್ತ್ರದಲ್ಲಿ ಪೇಪರ್ ಚಿಟ್‌ಗಳನ್ನು ಸಾಗಿಸುತ್ತಿರಬಹುದು ಎಂದು ಶಿಕ್ಷಕಿ ಶಂಕಿಸಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿನಿ ನೀಡಿರುವ ಹೇಳಿಕೆ ಹೀಗಿದೆ, ತಾನು ಪರೀಕ್ಷೆ ಬರೆಯಲು ಕೊಠಡಿಗೆ ತೆರಳಿದೆ. ಶಿಕ್ಷಕಿ ನನ್ನನ್ನು ಅನುಮಾನಿಸಿ,

ಇದನ್ನೂ ಓದಿ : https://vijayatimes.com/hc-mahadevappa-allegation-over-pm/

ಎಲ್ಲರ ಸಮ್ಮುಖದಲ್ಲಿ ಅವಮಾನಿಸಿ, ಸಮವಸ್ತ್ರದಲ್ಲಿ ಚಿಟ್‌ಗಳನ್ನು ಬಚ್ಚಿಟ್ಟಿರಬಹುದು ಎಂದು ಪರೀಕ್ಷಿಸಲು ತರಗತಿಯ ಪಕ್ಕದ ಕೋಣೆಯಲ್ಲಿ ನನ್ನ ಬಟ್ಟೆಗಳನ್ನು ಬಲವಂತವಾಗಿ ತೆಗೆಯುವಂತೆ ಮಾಡಿದರು ಎಂದು ಹೇಳಿಕೊಂಡಿರುವ ಬಗ್ಗೆ ಪೊಲೀಸ್ ಅಧಿಕಾರಿ ವರದಿಯಲ್ಲಿ ತಿಳಿಸಿದ್ದಾರೆ.

ಈ ಪ್ರಕರಣ ಕುರಿತು ಈಗಾಗಲೇ ಶಿಕ್ಷಕಿಯ ವಿರುದ್ಧ ದೂರು ದಾಖಲಾಗಿದ್ದು, ಪ್ರಕರಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನನ್ನ ಮಗಳು ಈ ಅವಮಾನ ಸಹಿಸಲಾಗದೆ, ಪರೀಕ್ಷೆ ಮುಗಿಯುತ್ತಿದ್ದಂತೆ ಶಾಲೆಯಿಂದ ಮನೆಗೆ ಕೂಡಲೇ ಬಂದು ತನ್ನ ದೇಹಕ್ಕೆ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ವಿದ್ಯಾರ್ಥಿನಿಯ ತಾಯಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Exit mobile version