ಸುಬ್ರಹ್ಮಣ್ಯ ಷಷ್ಠಿ ಹಿನ್ನೆಲೆ: ಸಿದ್ದಲಿಂಗಪುರದಲ್ಲಿ ಸಂಭ್ರಮದ ಅಚರಣೆ

ಮೈಸೂರು, ಡಿ. 20: ಇಂದು ಸುಬ್ರಹ್ಮಣ್ಯ ಷಷ್ಠಿ ಹಿನ್ನೆಲೆ. ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರ ಗ್ರಾಮದ ಬಳಿಯಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ. ಕೊರೊನಾ ಭೀತಿಯ ಕಾರಣದಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ.
ಪ್ರತಿವರ್ಷ ವೈಭವದಿಂದ ನಡೆಯುತ್ತಿದ್ದ ಸುಬ್ರಮಣ್ಯ ಸ್ವಾಮಿಯ ಷಷ್ಠಿ ಪೂಜೆ.
ಮೈಸೂರಿ, ಮಂಡ್ಯ, ಚಾಮರಾಜನಗರ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಿದ್ದಲಿಂಗಪುರಕ್ಕೆ ಆಗಮಿತ್ತಿದ್ದ ಭಕ್ತರು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಷಷ್ಠಿ ಆಚರಿಸುವಂತೆ ಮೈಸೂರು ಜಿಲ್ಲಾಡಳಿತ ಸೂಚನೆ.

ಈ ಬಾರಿ ಷಷ್ಠಿ ಜಾತ್ರಾ ಮಹೋತ್ಸವ ರದ್ದು‌.
ರಥೋತ್ಸವದ ಬದಲು ಪ್ರಾಕಾರೋತ್ಸವ ಆಚರಣೆ‌. ಇಂದು ಮುಂಜಾನೆಯೇ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿಕೆ.
ಮುಂಜಾನೆ 5 ರಿಂದ ಬೆಳಗ್ಗೆ 7 ರವರೆಗೆ ನಡೆದ ಷಷ್ಠಿಯ ಪೂಜಾ ಕೈಂಕರ್ಯಗಳು. ಬಳಿಕ ದೇವಾಲಯದ ಬಾಗಿಲು ಮುಚ್ಚುವ ಮೂಲಕ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಸುಬ್ರಹ್ಮಣ್ಯೇಶ್ವರ ದೇಗುಲದ ಬಳಿ ಪೊಲೀಸರಿಂದ ಬಿಗಿ ಭದ್ರತೆ‌.
ಈ ನಡುವೆ ದೇವಾಲಯಕ್ಕೆ ಪ್ರವೇಶವಿಲ್ಲ ಎಂಬುದನ್ನು ಅರಿಯದೇ ತಂಡೋಪತಂಡವಾಗಿ ಆಗಮಿಸುತ್ತಿರುವ ಭಕ್ತರು.
ದೇವಾಲಯದ ಎದುರು ಕೈಮುಗಿದು ನಮಸ್ಕರಿಸಿ ತೆರಳುತ್ತಿರುವ ಭಕ್ತಾದಿಗಳು. ಸಾರ್ವಜನಿಕರು ದೇವಾಲಯದ ಎದುರು ನಿಲ್ಲುವುದಕ್ಕೂ ಅವಕಾಶ ನೀಡದ ಪೊಲೀಸರು, ಧ್ವನಿವರ್ಧಕದ ಮೂಲಕ ಜನರಿಗೆ ಮಾಹಿತಿ ನೀಡುತ್ತಿರುವ ಪೊಲೀಸರು.

Exit mobile version