Kannada Cinema : ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಪವರ್ ಸ್ಟಾರ್ ನಟಿಸಿದ ‘ಅರಸು’

Appu

Cinema : ಪವರ್ ಸ್ಟಾರ್(Power Star) ಪುನೀತ್ ರಾಜ್‌ಕುಮಾರ್(Puneeth Rajkumar) ವೃತ್ತಿ ಬದುಕಿನ ಬ್ಲಾಕ್ ಬಸ್ಟರ್ ಸಿನಿಮಾಗಳ(Blockbuster Cinema) ಪೈಕಿ ‘ಅರಸು’(Success record of Arasu Film) ಕೂಡ ಒಂದು. 2017ರಲ್ಲಿ ಬಿಡುಗಡೆಯಾದ ಅರಸು ಸಿನಿಮಾದಲ್ಲಿ ಎನ್‌ಆರ್‌ಐ ಉದ್ಯಮಿ ಶಿವರಾಜ್ ಅರಸ್ ಪಾತ್ರದಲ್ಲಿ ಅಪ್ಪು ಕಾಣಿಸಿಕೊಂಡಿದ್ದರು.

ಪುನೀತ್ ಜೊತೆ ರಮ್ಯಾ(Divya Spandana), ಮೀರಾ ಜಾಸ್ಮಿನ್(Meera Jasmine) ನಟಿಸಿದ್ದರು. ಡಾ.ರಾಜ್‌ಕುಮಾರ್ ಅವರ ಹೋಮ್ ಬ್ಯಾನರ್‌ನಲ್ಲಿ ತಯಾರಾಗಿದ್ದ ಈ ಚಿತ್ರಕ್ಕೆ ಮಹೇಶ್ ಬಾಬು ಆಕ್ಷನ್ ಕಟ್ ಹೇಳಿದ್ದರು. ವಿಭಿನ್ನ ಕಥಾಹಂದರ ಹೊಂದಿದ್ದ ‘ಅರಸು’ ಚಿತ್ರ ಸೂಪರ್ ಹಿಟ್ ಆಗಿತ್ತು.

https://youtu.be/gLbs3m60lIY ಶಾಲೆಯ ದುಸ್ಥಿತಿ!

‘ಅರಸು’ ಚಿತ್ರದಲ್ಲಿನ ಅಭಿನಯಕ್ಕಾಗಿ ಪುನೀತ್ ರಾಜ್‌ಕುಮಾರ್ ‘ಅತ್ಯುತ್ತಮ ನಟ’ ಫಿಲ್ಮ್‌ ಫೇರ್(Filmfare Award) ಪ್ರಶಸ್ತಿಯನ್ನೂ ಪಡೆದಿದ್ದರು. ವಿಭಿನ್ನ ತ್ರಿಕೋನ ಪ್ರೇಮಕತೆ, ಈ ಚಿತ್ರದ ಪ್ಲಸ್ ಪಾಯಿಂಟ್ ಆಗಿತ್ತು. ‘ಆಕಾಶ್’ ನಂತರ ಪುನೀತ್ ರಾಜ್‌ಕುಮಾರ್‌ಗೆ ಮತ್ತೊಮ್ಮೆ ಆಕ್ಷನ್ ಕಟ್ ಹೇಳುವ ಸದಾವಕಾಶ ನಿರ್ದೇಶಕ ಮಹೇಶ್ ಬಾಬು ಅವರಿಗೆ ಸಿಕ್ಕಿದ್ದು ‘ಅರಸು’ ಚಿತ್ರದಲ್ಲಿ.

https://vijayatimes.com/siddaramaiah-is-corrupted-says-bjp/

ಜೊತೆಗೆ, ಅಪ್ಪುಗಾಗಿ ವರದಪ್ಪ ಮತ್ತು ಡಾ.ರಾಜ್‌ಕುಮಾರ್ ಸೇರಿ, ಕಥೆಯನ್ನು ಆಯ್ಕೆ ಮಾಡಿದ್ದ ಕಟ್ಟ ಕಡೆಯ ಸಿನಿಮಾ ‘ಅರಸು’. ಹೀಗಾಗಿ ನಿರ್ದೇಶಕ ಮಹೇಶ್ ಬಾಬು ಅವರ ಮೇಲೆ ಜವಾಬ್ದಾರಿ ತುಸು ಹೆಚ್ಚೇ ಇತ್ತು. ರಾತ್ರಿಯೆಲ್ಲಾ ನಿದ್ದೆಗೆಟ್ಟು ‘ಅರಸು’ ಚಿತ್ರಕ್ಕಾಗಿ ಮಹೇಶ್ ಬಾಬು ಶ್ರಮ ವಹಿಸಿದ್ದರು. ಶ್ರಮಕ್ಕೆ ತಕ್ಕಂತೆ ಪ್ರತಿಫಲ ಲಭಿಸಿತು, ‘ಅರಸು’ ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು.


ಇನ್ನು, ‘ಅರಸು’ ಚಿತ್ರವನ್ನು ತೆರೆಮೇಲೆ ನೋಡಬೇಕು ಎಂಬ ಆಸೆ ಡಾ.ರಾಜ್‌ಕುಮಾರ್ ಹಾಗೂ ವರದಪ್ಪ ಅವರಿಗಿತ್ತು. ಆದರೆ, ‘ಅರಸು’ ಸಿನಿಮಾ ಸೆಟ್ಟೇರುವ ಮುನ್ನವೇ ವರದಪ್ಪ ಹಾಗೂ ಡಾ.ರಾಜ್‌ಕುಮಾರ್ ವಿಧಿವಶರಾದರು.

ಹೀಗಾಗಿ, ‘ಅರಸು’ ಚಿತ್ರವನ್ನು ತೆರೆಮೇಲೆ ನೋಡುವ ಅವರಿಬ್ಬರ ಆಸೆ ಈಡೇರಲೇ ಇಲ್ಲ. ಆದರೆ, ಈ ಚಿತ್ರ ಇಂದಿಗೂ ಕರ್ನಾಟಕದ ಜನರ ಮನದಲ್ಲಿ ಅಚ್ಚಳಿಯದೇ ಉಳಿದಿರುವುದಂತೂ ಸತ್ಯ.
Exit mobile version