ಸಿದ್ದರಾಮಯ್ಯರವರಿಗೆ ದ್ರೋಹ ಎಸಗಿದ ಸುಧಾಕರ್‌ : ಸಿದ್ದು ವಾಗ್ದಾಳಿ

Karnataka: ವಾದ ಮಾಡಿ ಈತನಿಗೆ ಟಿಕೆಟ್ ಕೊಡಿಸಿದೆ. ಇದಕ್ಕಾಗಿ ನಮ್ಮ ಆಂಜನಪ್ಪನವರಿಗೆ ಅನ್ಯಾಯವಾಯಿತು. ಈತ ದುಡ್ಡು ಮತ್ತು ಅಧಿಕಾರಕ್ಕಾಗಿ ತನ್ನನ್ನು ಮಾರಿಕೊಂಡು (Sudhakar betrayed Siddaramaiah) ದ್ರೋಹ ಎಸಗಿದ.

ನನಗೆ ಟಿಕೆಟ್ ಕೊಟ್ಟದ್ದು ಸಿದ್ದರಾಮಯ್ಯನವರಲ್ಲ, ಎಸ್ ಎಂ.ಕೃಷ್ಣ ಎಂದು(S.M Krishna)  ಸುಧಾಕರ್‌ ಹೇಳಿದ್ದಾರೆ.

ಅಭ್ಯರ್ಥಿ ಆಯ್ಕೆ ಸಮಿತಿಯಲ್ಲಿ ಸೋನಿಯಾಗಾಂಧಿ(Sonia Gandhi) ಅವರ ಜೊತೆ ಇದ್ದದ್ದು ಮಧುಸೂದನ್ ಮಿಸ್ತ್ರಿ,

ವೀರಪ್ಪ ಮೊಯಿಲಿ(Veerappa Moily), ಡಾ.ಜಿ.ಪರಮೇಶ್ವರ್ ಮತ್ತು ನಾನು. ಕೃಷ್ಣ ಎಲ್ಲಿದ್ದರು? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಚಿವ ಸುಧಾಕರ್‌ ಅವರನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿ ವಾಗ್ದಾಳಿ ನಡೆಸಿರುವ ಅವರು,  ಬಿಜೆಪಿ ಗ್ಯಾಂಗಿನ ಆಲಿಬಾಬಾ ಮತ್ತು 40 ಕಳ್ಳರ ದಂಡನಾಯಕ ಆಗುವ ಹಠಕ್ಕೆ ಬಿದ್ದ ಸುಧಾಕರ್‌(Dr Sudhakar) ಅವರನ್ನು ಸಿಎಂ ಬಫೂನ್ ಮಾಡುತ್ತಿದ್ದಾರೆ.

ಸುಧಾಕರ್ ಬಾಯಲ್ಲಿ ಸುಳ್ಳು ಹೇಳಿಸುತ್ತಿದ್ದಾರೆ. ಸುಧಾಕರ್ ಬಫೂನ್ ಆಗಿದ್ದಾರೆ.  ಕೃಷಿ, ತೋಟಗಾರಿಕೆ, ಗೃಹ ಮತ್ತು ಸಾರಿಗೆ, ಲೋಕೋಪಯೋಗಿ ಇಲಾಖೆಗಳಲ್ಲಿ ರೂ.1085 ಕೋಟಿ ಅವ್ಯವಹಾರವಾಗಿದೆ” ಎಂದು ಪೆದ್ದ  ಸುಧಾಕರ್‌ (Sudhakar betrayed Siddaramaiah) ಆರೋಪಿಸಿದ್ದಾರೆ.

ಎಜಿಯವರು ಇದನ್ನು ಭ್ರಷ್ಟಾಚಾರ ಎಂದು ಹೇಳಿಲ್ಲ. ಬಜೆಟ್ ಗಿಂತ  ಹೆಚ್ಚು ಖರ್ಚಾಗಿದೆ ಎಂದಷ್ಟೆ  ವರದಿ ಹೇಳಿದೆ.

ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್ ನಲ್ಲಿ ,ನಾರಿ ಶಕ್ತಿ ; ಇತ್ತ ರಾಜ್ಯದಲ್ಲಿ ದಿನೇ ದಿನೇ ಮಹಿಳಾ ದೌರ್ಜನ್ಯ ಹೆಚ್ಚಳ : ಜೆಡಿಎಸ್‌ ಟೀಕೆ

ಇದು ಭ್ರಷ್ಟಾಚಾರನಾ? ಈ ಸುಧಾಕರ್‌, ಅಶ್ವತ್ ನಾರಾಯಣ್(Ashwath Narayan)  ಅವರೆಲ್ಲ ಸತ್ಯಹರಿಶ್ಚಂದ್ರರ ಸಂತಾನದವರಾಗಿದ್ದರೆ ಕೊರೊನಾ(Corona) ಭ್ರಷ್ಟಾಚಾರದ ಬಗ್ಗೆ ಮರು ಅಡಿಟ್ ನಡೆಸಲು ಅನುಮತಿ ಯಾಕೆ ನಿರಾಕರಿಸಿದ್ದರು. 

ಇದು ಕಳ್ಳರ ಮನಸ್ಸು ಹುಳ್ಳಗೆ 2021-22 ರ ಕಾಲದ ಕೊರೊನಾ ಭ್ರಷ್ಟಾಚಾರದ ಬಗ್ಗೆ ಮರು ಅಡಿಟ್ ನಡೆಸಲು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಎಜಿಯವರಿಗೆ ಪತ್ರ ಬರೆದು ಕೋರಿತ್ತು, 

ಆದರೆ  ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳು ಮರು ಅಡಿಟ್ ಗೆ ಎಜಿಯವರಿಗೆ ಅನುಮತಿ ನೀಡಲು ನಿರಾಕರಿಸಿದ್ದವು  ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ, ಹೆಚ್.ಕೆ.ಪಾಟೀಲ್(H.K Patil) ಅವರು ಕೊಟ್ಟಿರುವ ವರದಿಯನ್ನು ವಿಧಾನಸಭಾಧ್ಯಕ್ಷರು ಸದನದಲ್ಲಿ ಮಂಡಿಸದೆ ತಾವೊಬ್ಬ ಆರ್ ಎಸ್ ಎಸ್(RSS) ಕೈಗೊಂಬೆ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.

ಆ ವರದಿ ಬಗ್ಗೆ ಚರ್ಚೆ ನಡೆದರೆ  ಸುಧಾಕರ್‌ ಬಣ್ಣ ಬಯಲಾಗಲಿದೆ. ಮೂರು ಸಾವಿರ ಕೋಟಿ ರೂಪಾಯಿ ಕೊರೊನಾ ಭ್ರಷ್ಟಾಚಾರದ ಆರೋಪ ಕಪೋಲ ಕಲ್ಪಿತ ಅಲ್ಲ ಸುಧಾಕರ್‌. 

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾದ ಹೆಚ್.ಕೆ.ಪಾಟೀಲ್ ಅವರು ತಮ್ಮ ವರದಿಯಲ್ಲಿ ದಾಖಲೆಗಳ ಸಮೇತ ಈ ಭ್ರಷ್ಟಾಚಾರವನ್ನು ಬಿಚ್ಚಿಟ್ಟಿದ್ದಾರೆ. ತೆಗೆದು ಓದಿ ಎಂದು ವ್ಯಂಗ್ಯವಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಭ್ರಷ್ಟಾಚಾರ ಎಂದರೆ ಏನು ಗೊತ್ತಾ ಸುಧಾಕರ್‌? ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಮೂರು ಸಾವಿರ ಕೋಟಿ ರೂಪಾಯಿ ನುಂಗಿದ್ದಿರಲ್ಲಾ ಅದು ಭ್ರಷ್ಟಾಚಾರ.

ನಾನು‌ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಜೆಟ್ ನಲ್ಲಿ ತಾಳೆಯಾಗದ ಅನುದಾನ ಮತ್ತು ಖರ್ಚಿನ ಮೊತ್ತ ಕಡಿಮೆಯಾಗಿತ್ತು.

ಇದಕ್ಕೆ ಕಾರಣ ನಾನು ಪಾಲಿಸಿಕೊಂಡು ಬಂದಿದ್ದ ಆರ್ಥಿಕ ಶಿಸ್ತು. ಇದಕ್ಕಾಗಿ  ಬಿಜೆಪಿ(BJP) ನಾಯಕರು ನನ್ನನ್ನು ಅಭಿನಂದಿಸಬೇಕಾಗಿತ್ತು. 

ಬಿಜೆಪಿ ಸರ್ಕಾರದ ಕಾಲದಲ್ಲಿ ತಾಳೆಯಾಗದ ಅನುದಾನ 2008-09 ರಲ್ಲಿ  49%,  2009-10ರಲ್ಲಿ 28.6%, 2011-12ರಲ್ಲಿ 34%  ಮತ್ತು 2012-13ರಲ್ಲಿ 42% ಇತ್ತು.

ನಮ್ಮ ಸರ್ಕಾರದ ಕಾಲದಲ್ಲಿ 2015-16ರಲ್ಲಿ 16%, 2016-17ರಲ್ಲಿ 17.76% ಮತ್ತು 2017-18ರಲ್ಲಿ 19% ಇತ್ತು. ಎಲ್ಲ ಸರ್ಕಾರದ ಕಾಲದ ಸಿಎಜಿ ವರದಿಗಳಲ್ಲಿ ತಾಳೆಯಾಗದ ಲೆಕ್ಕ ಇದೆ.

ಅದನ್ನು ಅಂತಿಮ ವರದಿಯಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ಕೇವಲ ಸುಧಾಕರ್‌ ಅವರಂತಹ ಮೂರ್ಖ ಶಿಖಾಮಣಿಗಳು ಮಾತ್ರ ಇದನ್ನು ಭ್ರಷ್ಟಾಚಾರ, ಅವ್ಯವಹಾರ ಎಂದು ಕತೆ ಕಟ್ಟಲು ಸಾಧ್ಯ.

2016-17ನೇ ಸಾಲಿನ ಆರ್ಥಿಕ ವರ್ಷದ ಆಯ-ವ್ಯಯದಲ್ಲಿ ಬಜೆಟ್ ಅನುದಾನ ಮತ್ತು ಖರ್ಚಿನ ಲೆಕ್ಕದಲ್ಲಿ 19% (ರೂ.35 ಸಾವಿರ ಕೋಟಿ) ತಾಳೆಯಾಗುತ್ತಿಲ್ಲವೆಂದು ಸಿಎಜಿ(CAG) ವರದಿಯಲ್ಲಿದೆ ಎಂದಿದ್ದಾರೆ.

ಇದನ್ನೂ ಓದಿ: ತುರ್ತು ಅಧಿಕಾರ ಬಳಸಿ, ಬಿಬಿಸಿಯ ಮೋದಿ ವಿರೋಧಿ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ ಕೇಂದ್ರ ಸರ್ಕಾರ

ಕೊನೆಯ ಟ್ವೀಟ್‌ನಲ್ಲಿ(Tweet), ಇದನ್ನೇ ಪೆದ್ದ ಸುಧಾಕರ್‌ “ಅವ್ಯವಹಾರ’’ ಎಂದು ಹೇಳಿ ನಗೆಪಾಟಲಿಗೀಡಾಗಿದ್ದಾರೆ.

ನಮ್ಮ ಸರ್ಕಾರದಲ್ಲಿ 35 ಸಾವಿರ ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು  ಸುಧಾಕರ್‌ ಆರೋಪ ಮಾಡುವ ಮೂಲಕ ತನ್ನ ಅಜ್ಞಾನವನ್ನು ಪ್ರದರ್ಶನಕ್ಕಿಟ್ಟು ತಾನು ಎಂತಹ ಬುದ್ದಿಗೇಡಿ ಎಂದು ಸಾಬೀತುಪಡಿಸಿದ್ದಾರೆ.

ಸಿಎಜಿ ವರದಿಯನ್ನು ಓದಿ ಅರ್ಥ ಮಾಡಿಕೊಳ್ಳಲಾಗದ  ಸುಧಾಕರ್‌ ಒಬ್ಬ ಪೆದ್ದ ಮತ್ತು ಸುಳ್ಳ. ಸರ್ಕಾರದ ಹಣಕಾಸು ವ್ಯವಹಾರದಲ್ಲಿ Reconciliation ಮತ್ತು ಅವ್ಯವಹಾರದ ನಡುವಿನ ವ್ಯತ್ಯಾಸ ಗೊತ್ತಿಲ್ಲದ ಪೆದ್ದರೆಲ್ಲ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವುದು ರಾಜ್ಯದ ದುರಂತ ಎಂದು ಲೇವಡಿ ಮಾಡಿದ್ದಾರೆ.

Exit mobile version