ಕೇರಳ ಮತ್ತು ಗೋವಾ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಡಾ. ಸುಧಾಕರ್ !

ಕರ್ನಾಟಕ ರಾಜ್ಯದ ಆರೋಗ್ಯ ಸಚಿವರಾದ ಡಾ. ಸುಧಾಕರ್ ಅವರು ಕರ್ನಾಟಕ ರಾಜ್ಯಕ್ಕೆ ಗೋವಾ ಮತ್ತು ಕೇರಳದಿಂದ ಬರುವ ಪ್ರಯಾಣಿಕರಿಗೆ ಇನ್ಮುಂದೆ ಆರ್.ಟಿ.ಪಿ.ಸಿ.ಆರ್ ವರದಿ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚುತ್ತಿದ್ದ ಕಾರಣ, ಮೂರನೇ ಅಲೆಯ ಮುನ್ಸೂಚನೆ ಎಂದು ಎಚ್ಚರಿಕೆಯಿಂದ ರಾಜ್ಯ ಸರ್ಕಾರ ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರಕಟಿಸಿತ್ತು. ಗೋವಾ, ಕೇರಳ ಪ್ರಾಂತ್ಯದಿಂದ ಕರ್ನಾಟಕಕ್ಕೆ ಪ್ರಯಾಣಿಸುವವರಿಗೆ ಯಾವುದೇ ಕಾರಣಕ್ಕೂ ಕೋವಿಡ್ -19 ವರದಿ ತೆಗೆದುಕೊಂಡು ಬರಬೇಕು ಇದು ಅಗತ್ಯ ಎಂದು ಈ ಹಿಂದೆ ಸ್ಪಷ್ಟವಾಗಿ ತಿಳಿಸಿದ್ದರು. ಕೊರೊನಾ ಪರೀಕ್ಷೆ ಮಾಡಿಸಿ ಅದರ ವರದಿಯನ್ನು ತೆಗೆದುಕೊಂಡು ಪ್ರಯಾಣಿಸಬೇಕು ಎಂದು ಹೇಳಲಾಗಿತ್ತು.

ಈ ನಿಯಮ ಇಲ್ಲಿಯವರೆಗೂ ಕೂಡ ಶಿಸ್ತಿನಿಂದ ಪಾಲಿಸಲಾಗಿತ್ತು. ರಾಜ್ಯದ ಗಡಿಭಾಗ ಸೇರಿದಂತೆ ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಕೋವಿಡ್-19 ವರದಿ ಕಡ್ಡಾಯವಾಗಿತ್ತು. ಸದ್ಯ ಈಗ ಆ ನಿಯಮಕ್ಕೆ ಕೊಂಚ ರಿಲೀಫ್ ನೀಡಲಾಗಿದೆ. ರಾಜ್ಯ ಸರ್ಕಾರದ ಆರೋಗ್ಯ ಸಚಿವರಾದ ಸುಧಾಕರ್ ಅವರು ಗೋವಾ ಮತ್ತು ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಕೋವಿಡ್-19 ವರದಿ ತೆಗೆದುಕೊಂಡು ಬರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಇದೇ ನಿಯಮ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಅನ್ವಯವಾಗುವುದಿಲ್ಲ! ಅಲ್ಲಿನ ಪ್ರಯಾಣಿಕರು ಎಂದಿನಂತೆ ಕೋವಿಡ್-19 ವರದಿ ತರುವುದು ಕಡ್ಡಾಯ ಎಂದು ತಿಳಿಸಲಾಗಿದೆ.

Exit mobile version