ಸಿನಿ ದಿಗ್ಗಜರ ಸಭೆ ಕರೆದ ಸಚಿವ ಸುಧಾಕರ್

ಬೆಂಗಳೂರು, ಫೆ. 03: ಕೇಂದ್ರ ಸರ್ಕಾರ 100% ಪ್ರಮಾಣದಲ್ಲಿ ಚಿತ್ರಮಂದಿರ ತೆರೆಯಲು ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರದಿಂದ ಅಂತಿಮ ತೀರ್ಮಾನ ತೆಗೆದುಕೊಳ್ಳುವ ತೀರ್ಮಾನವನ್ನು ನೀಡಿತ್ತು. ಹಾಗಾಗಿ ಫೆ. 28ರವರೆಗೆ  ಶೆ 50 ರಷ್ಟು ಭರ್ತಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು ಇದನ್ನು ಪ್ರತಿಭಟಿಸಿದ ಸಿನಿ ದಿಗ್ಗಜರು 100% ಅನುಮತಿ ನೀಡಬೇಕು ಎಂದು ಕೋರಿ ಕನ್ನಡ ಸಿನಿಮಾ ರಂಗದ ದಿಗ್ಗಜರು ಇಂದು ಸಂಜೆ 5 ಗಂಟೆಗೆ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ.

ಇಂದು ಸಂಜೆ 5 ಗಂಟೆಗೆ ಆರೋಗ್ಯ ಸಚಿವ ಕೆ. ಸುಧಾಕರ್‌ ಅವರನ್ನೊಳಗೊಂಡು ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಹಿರಿಯ ನಟರು, ನಿರ್ಮಾಪಕ, ನಿರ್ದೇಶಕರು, ಫಿಲ್ಮ್‌ ಚೆಂಬರ್‌ ಅಧ್ಯಕ್ಷ್ಯ ಪದಾಧಿಕಾರಿಗಳು ಸೇರಿದಂತೆ ಚಿತ್ರೋದ್ಯಮದ ಸದಸ್ಯರೊಂದಿಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭೆ ನಡೆಸಲಿದ್ದಾರೆ.

ರಾಜ್ಯ ಸರ್ಕಾರ ನಿನ್ನೆಯಷ್ಟೇ ಮಾರ್ಗಸೂಚಿ ಹೊರಡಿಸಿದ್ದು, ಫೆಬ್ರವರಿ 28ರವೆಗೆ 50ರಷ್ಟು ಮಾತ್ರ ಚಿತ್ರಮಂದಿರ ಭರ್ತಿಗೆ ಅವಕಾಶ ನೀಡಿದೆ. ಈ ನೀತಿಗೆ ಸಿನಿ ದಿಗ್ಗಜರು ತೀವ್ರ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.

Exit mobile version