ಸಾಮೂಹಿಕ ಆತ್ಮಹತ್ಯೆಗೆ ದಿನಕ್ಕೊಂದು ಟ್ವಿಸ್ಟ್

ಬೆಂಗಳೂರು ಸೆ 20 :  ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದ ಮನೆಯೊಂದರಲ್ಲಿ 9 ತಿಂಗಳು ಮಗು ಸೇರಿದಂತೆ ಒಂದೇ ಕುಟುಂಬದ ಐವರು ಆತ್ಮಹತ್ಯೆಮಾಡಿಕೊಂಡಿದ್ದ ಘಟನೆ ನಡೆದಿದ್ದು, ಈ ಘಟನೆ ಸಾಕಷ್ಟು ತಿರುವು ಪಡೆದದುಕೊಳ್ಳುತ್ತಿದ್ದು, ಇಂದು ಪೊಲೀಸರು ಶಂಕರ್ ಅವರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದರು. ಈ ವೇಳೆ ಪೊಲೀಸರಿಗೆ ಮೂರು ಡೆತ್ ನೋಟ್ ಲಭ್ಯವಾಗಿದೆ. ಇದರ ಆಧಾರದ ಮೇಲೆ ಮನೆ ಸಂಪಾದಕ ಶಂಕರ್, ಅಳಿಯಂದಿರಾದ ಪ್ರವೀಣ್, ಶ್ರೀಕಾಂತ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆಗೆ ಹಾಜರು ಪಡಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಬ್ಯಾಡರಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಡೆತ್ ನೋಟ್‍ನಲ್ಲಿ ಶಂಕರ್ ಹಾಗೂ ಪ್ರವೀಣ್, ಶ್ರೀಕಾಂತ್ ಕಿರುಕುಳದ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ಮೃತ ಸಿಂಚನಗೆ ಎರಡು ಸಾರಿ ಅಬಾರ್ಷನ್ ಮಾಡಿಸಿದ್ದಾರೆ ಎಂದು ಗಂಡನ ಮನೆಯವರು ಆರೋಪ ಮಾಡಿದ್ದಾರೆ. ಈ ಎಲ್ಲ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಮನೆಯ ಹಾಲ್‍ನ ಎಂಟ್ರಿಯಲ್ಲಿ ಸಿಸಿಟಿವಿ ಹಾಕಲಾಗಿದೆ. ಸಿಸಿಟಿಯ ಸಂಪೂರ್ಣ ಕಂಟ್ರೋಲ್ ಶಂಕರ್ ಮೊಬೈಲ್ ನಲ್ಲಿತ್ತು. 64 ಜಿಬಿಯ ಮೆಮೊರಿ ಕಾರ್ಡ್ ಹಾಕಲಾಗಿದೆ. ಅದು ಫುಲ್ ಆಗಿ ಭಾನುವಾರದ ನಂತರ ನಡೆದ ಚಲನವಲನಗಳು ದಾಖಲಾಗಿಲ್ಲ.

ಡೆತ್‌ ನೋಟ್‌ನಲ್ಲಿ ಏನಿದೆ ? ಡೆತ್ ನೋಟ್‍ಗಳಲ್ಲಿ ಮೂವರೂ ತಮ್ಮ ತಂದೆ ಶಂಕರ್ ವಿರುದ್ಧವೇ ಆರೋಪ ಮಾಡಿದ್ದಾರೆ.ತಿಗಳರಪಾಳ್ಯದ ಮನೆಯಲ್ಲಿ ಎಸಿಪಿ, ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ಪರಿಶೀಲನೆ ವೇಳೆ ಮಧುಸಾಗರ್, ಸಿಂಚನ, ಸಿಂಧುರಾಣಿ ಮೂವರ ಡೆತ್ ನೋಟ್‍ಗಳು ಪತ್ತೆಯಾಗಿವೆ. ಮೂವರು ಸಹ ಅಪ್ಪನ ವಿರುದ್ಧ ಆರೋಪ ಮಾಡಿದ್ದು, ತಂದೆಯ ಅನೈತಿಕ ಸಂಬಂಧ, ದೌರ್ಜನ್ಯ ನಡೆಸಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಕೌಟುಂಬಿಕ ಕಲಹದಿಂದ್ಲೇ ಸಾಮೂಹಿಕ ಆತ್ಮಹತ್ಯೆ – ದುರಂತಕ್ಕೆ ಪತ್ನಿಯೇ ಕಾರಣವೆಂದ ಪತಿ ಶಂಕರ್ ಸಾವಿನ ಸಂಬಂಧ ಕೆಲ ಸಾಕ್ಷ್ಯಗಳು ಲ್ಯಾಪ್ ಟಾಪ್‍ನಲ್ಲಿ ಇರುವ ಶಂಕೆ ಇದೆ. ಹೀಗಾಗಿ ಅವುಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. 9 ತಿಂಗಳ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಸಿಂಧುರಾಣಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಹ ಸಾಕ್ಷ್ಯ ಲಭ್ಯವಾಗಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಇನ್ನು ಎಷ್ಟು ತಿರುವುಗಳು ಸಿಗುತ್ತವೆಯೋ ಎಂದು ತನಿಖೆಯ ನಂತರ ಹೊರಬೀಳಲಿದೆ.

Exit mobile version