Bengaluru : ಭಾರತ ಮತ್ತು ಕೆನಡಾ ಮಧ್ಯೆ ತೀವ್ರಗೊಂಡಿರುವ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ಎರಡು (Sukhdul Singh’s murder) ದಿನಗಳ ಹಿಂದೆ ಕೆನಡಾದ ವಿನ್ನಿಪೆಗ್ ನಗರದಲ್ಲಿ
ಹತ್ಯೆಯಾಗಿದ್ದ ಭಯೋತ್ಪಾದಕ ಸುಖದೂಲ್ ಸಿಂಗ್ (Sukhdul Singh) ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್. (Lawrence Bishnoi Gang) ಹೊತ್ತುಕೊಂಡಿದೆ.
ಈ ಕುರಿತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಫೇಸ್ಬುಕ್ನಲ್ಲಿ (Facebook) ಪೋಸ್ಟ್ ಬರೆದುಕೊಂಡಿದ್ದು, ಸುಖ ದುನುಕೆ ಎಂದೂ ಕರೆಯಲ್ಪಡುವ ಸುಖದೂಲ್ ಸಿಂಗ್, ಗುರ್ಲಾಲ್ ಬ್ರಾರ್ ಮತ್ತು ವಿಕ್ಕಿ ಮಿಡ್ಖೇರಾ
ಅವರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸುಖದೂಲ್ ಸಿಂಗ್ ವಿದೇಶದಲ್ಲಿದ್ದಾಗಲೇ ಈ ಕೊಲೆಗಳನ್ನು ಯೋಜಿಸಿದ್ದರು ಎಂದು ಆರೋಪಿಸಿದೆ.
ಸುಖ್ದೂಲ್ ಸಿಂಗ್ “ಡ್ರಗ್ ವ್ಯಸನಿ”ಯಾಗಿದ್ದು, ಅನೇಕ ಜನರ ಜೀವನವನ್ನು ನಾಶಪಡಿಸಿದ್ದಾನೆ. ಅಂತಿಮವಾಗಿ “ಅವನ ಪಾಪಗಳಿಗಾಗಿ ಅವನೇ ಶಿಕ್ಷೆಗೆ ಗುರಿಯಾಗಿದ್ದಾನೆ. ದಾವೀಂದರ್ ಬಾಂಬಿಹಾದ
ಸದಸ್ಯನಾಗಿರುವ ಸುಖದೂಲ್ ಸಿಂಗ್, ಮತ್ತೊಬ್ಬ ದರೋಡೆಕೋರ ಸಂದೀಪ್ ನಂಗಲ್ ಅಂಬಿಯಾನನ್ನು ಸಹ ಕೊಂದಿದ್ದಾನೆ. ಭಾರತ ವಿರೋಧಿ ಶತ್ರುಗಳು ಭಾರತ ಅಥವಾ ಇನ್ನಾವುದೇ ದೇಶದಲ್ಲಿ
ತಲೆಮರೆಸಿಕೊಂಡರೂ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ ಎಂದು ಲಾರೆನ್ಸ್ (Sukhdul Singh’s murder) ಬಿಷ್ಣೋಯ್ ಗ್ಯಾಂಗ್ ಹೇಳಿಕೊಂಡಿದೆ.
ಇನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸುತ್ತಿರುವ ಡ್ರಗ್ಸ್ ಕಳ್ಳಸಾಗಣೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತಿನ ಅಹಮದಾಬಾದ್ನ ಜೈಲಿನಲ್ಲಿದ್ದಾರೆ. ಈತ ಪಂಜಾಬಿ
ಗಾಯಕ ಸಿಧು ಮೂಸ್ ವಾಲಾ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಆದರೆ ಈತನ ಗ್ಯಾಂಗ್ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಭಾರತ ಸೇರಿದಂತೆ ವಿದೇಶಗಳಲ್ಲೂ ಈತ
ತನ್ನದೇ ಆದ ನೆಟ್ವರ್ಕ್ ಹೊಂದಿದ್ದಾನೆ.
ಸುಖ್ದೂಲ್ ಸಿಂಗ್ ಯಾರು?
ಮೂಲತಃ ಪಂಜಾಬ್ನ ಮೊಗಾ ಗ್ರಾಮದವನಾದ ಈತ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ನಂತರ ಕೆನಡಾಕ್ಕೆ ಪರಾರಿಯಾಗಿದ್ದನು. ಈತ ಖಲಿಸ್ತಾನಿ ಭಯೋತ್ಪಾದಕ ಅರ್ಷದೀಪ್ ಸಿಂಗ್
ಅಲಿಯಾಸ್ ಅರ್ಶ್ ದಲಾನ ಸಹಾಯಕನಾಗಿದ್ದ ಎನ್ನಲಾಗಿದೆ. 2017 ರಲ್ಲಿ, ಸುಖದೂಲ್ ಸಿಂಗ್ ಅಲಿಯಾಸ್ ಸುಖ ಡುನುಕೆ ಪಂಜಾಬ್ನಲ್ಲಿ 18 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದರೂ ಕೆನಡಾಕ್ಕೆ
ಪಲಾಯನ ಮಾಡಲು ನಕಲಿ ದಾಖಲೆಗಳ ಮೇಲೆ ಪಾಸ್ಪೋರ್ಟ್ ಮತ್ತು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆದ್ದನು. ಬ್ರಿಟೀಷ್ ಕ್ಯಾಲಿಫೋರ್ನಿಯಾದ ಸರ್ರೆಯಲ್ಲಿ ಮತ್ತೊಬ್ಬ ಖಲಿಸ್ತಾನಿ ಭಯೋತ್ಪಾದಕ
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಸುಖದೂಲ್ ಸಿಂಗ್ ಹತ್ಯೆ ನಡೆದಿದೆ. ಭಾರತದಲ್ಲಿ ಬೇಕಾಗಿದ್ದ ನಿಜ್ಜರ್ನನ್ನು
ಜೂನ್ನಲ್ಲಿ ಗುರುದ್ವಾರದ ಹೊರಗೆ (Sukhdul Singh’s murder) ಗುಂಡಿಕ್ಕಿ ಕೊಲ್ಲಲಾಯಿತು
ಇದನ್ನು ಓದಿ: ಮುಸ್ಲಿಂ ಸಂಸದನ ವಿರುದ್ದ ಅಸಂಸದೀಯ ಪದ ಬಳಕೆ ; ಸಂಸದ ರಮೇಶ್ ಬಿಧುರಿಗೆ ಶೋಕಾಸ್ ನೋಟಿಸ್