ಸಂಸದೆ ಸುಮಲತಾ ಅಂಬರೀಶ್‌ಗೆ ಬಿಜೆಪಿಯಿಂದ ಕೈ ತಪ್ಪಿದ ಟಿಕೆಟ್: ಬಿ.ವೈ.ವಿಜಯೇಂದ್ರ ಭೇಟಿಯಾಗುವ ಸಾಧ್ಯತೆ

Mandya: ಲೋಕಸಮರಕ್ಕೆ ಇನ್ನೇನು ಕೆಲವು ತಿಂಗಳು ಬಾಕಿ ಇದ್ದು, ಮಂಡ್ಯ (Mandya) ಲೋಕಸಭಾ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಟಿಕೆಟ್ ಜೆಡಿಎಸ್​ಗೆ ಹೋಗಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ @SumalathaAmabareesh ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗುವುದು ಡೌಟ್ ಆಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಸಂಸದೆ ಸುಮಲತಾ ಅಂಬರೀಶ್ ಅವರನ್ನ ಭೇಟಿಯಾಗುವ ಸಾಧ್ಯತೆ ಇದ್ದು, ಎರಡು ಮೂರು ದಿನಗಳಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ವಿಜಯೇಂದ್ರ (Vijayendra) ಭೇಟಿ ವೇಳೆ ಮಂಡ್ಯ ಲೋಕಸಭೆ ಕ್ಷೇತ್ರ ಟಿಕೆಟ್ ನೀಡುವಂತೆ ಸುಮಲತಾ ಅವರು ಡಿಮ್ಯಾಂಡ್ ಮಾಡುವ ಸಾಧ್ಯತೆ ಇದೆ.

ಸಂಸದೆಯಾದ ನಂತರ ಸುಮಲತಾ ಅವರು ಬಿಜೆಪಿಗೆ #BJP ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಈಗ ಟಿಕೆಟ್ ಸಿಗದಿರೋ ಹಿನ್ನೆಲೆ ಬಿಜೆಪಿ ಮೇಲೆ ಅಸಮಾಧಾನಗೊಂಡಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿ ಸ್ವರ್ಧೆ ಮಾಡಲು ಸುಮಲತಾ ಅವರು ಚಿಂತನೆ ನಡೆಸಿದ್ದು, ಈ ಮಧ್ಯೆ ಕಾಂಗ್ರೆಸ್ ಗೆ ಸೆಳೆಯಲು ಕಾಂಗ್ರೆಸ್ ಹೈಕಮಾಂಡ್ (Highcommand) ಮಾಸ್ಟರ್ ಪ್ಲ್ಯಾನ್ ಮಾಡಿದೆ.

ಮಂಡ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಸೂಕ್ತ ಅಭ್ಯರ್ಥಿ ಸಿಗದ ಹಿನ್ನೆಲೆ ಸುಮಲತಾರನ್ನೆ ಕಾಂಗ್ರೆಸ್ ನಿಂದ ಕಣಕ್ಕೆ ಇಳಿಸಲು ಪ್ಲ್ಯಾನ್ (Plan) ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಸುಮಲತಾರ ಮೇಲೆ ಒಲವು ತೋರಿಸಿದ್ದಾರೆ. ಪಕ್ಷೇತರಗಿಂತ ಕಾಂಗ್ರೆಸ್ ನಿಂದ ಸ್ವರ್ಧೆ ಮಾಡಿದ್ರೆ ಗೆಲುವು ಸುಲಭ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ.

ಕಾಂಗ್ರೆಸ್ ಪಕ್ಷವು, ಮಂಡ್ಯ ಕ್ಷೇತ್ರ ಗೆಲ್ಲಲೇಬೇಕೆಂದು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಮಂಡ್ಯ ವಶಪಡಿಸಿಕೊಳ್ಳಲು ಸುಮಲತಾರನ್ನು ಅಭ್ಯರ್ಥಿ ಮಾಡಲು ಸಿಎಂ ಸಿದ್ದರಾಮಯ್ಯ (CM Siddaramaiah) ಕೈ ಪಡೆ ಒಲವು ತೋರಿಸಿದೆ. ಆ ಮೂಲಕ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಸಿಎಂ ಪ್ಲಾನ್ ಮಾಡಿದ್ದಾರೆ. ಸುಮಲತಾ ಕರೆತಂದರೆ ದಳಪತಿಗಳು‌ ಹಾಗೂ ಬಿಜೆಪಿಗೆ ಕೌಂಟರ್ ಹಾಗೂ ಕಾಂಗ್ರೆಸ್ ಶಕ್ತಿ ಪ್ರದರ್ಶಿಸುವ ಅವಕಾಶ ಸಿಗಲಿದೆ.

ಆದರೆ ಸುಮಲತಾರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದ್ದು, ಮತ್ತೊಂದೆಡೆ ಕೈ ಪಡೆ ಸೇರಲು ಸೂಕ್ತ ಸಮಯಕ್ಕೆ ಮಂಡ್ಯ ಸಂಸದೆ ಸುಮಲತಾ ಕಾಯುತ್ತಿದ್ದಾರೆ. ಕಾಂಗ್ರೆಸ್ (Congress) ನಿಂದಲೇ ಸ್ಪರ್ಧೆ ಮಾಡುವುದು ಉತ್ತಮ ಎಂಬ ಸಲಹೆಯನ್ನು ಸುಮಲತಾ ಆಪ್ತ ಪಡೆ ನೀಡಿದೆ. ಸದ್ಯ ಕಾಂಗ್ರೆಸ್​ಗೆ ಸುಮಲತಾ ಅನಿವಾರ್ಯ, ಸುಮಲತಾಗೆ ಕಾಂಗ್ರೆಸ್ ಅನಿವಾರ್ಯ ಎಂಬ ಪರಿಸ್ಥಿತಿ ಎದುರಾಗಿದೆ. ಸ್ಥಳೀಯ ನಾಯಕರನ್ನ ವಿಶ್ವಾಸ ತೆಗೆದುಕೊಂಡು ಸೂಕ್ತ ನಿರ್ಧಾರಕ್ಕೆ ಚಿಂತನೆ ನಡೆದಿದ್ದು ಸುಮಲತಾ ಜೊತೆ ಮಾತುಕತೆ ನಡೆಸಲು ಸಿಎಂ ಮುಂದಾಗಿದ್ದಾರೆ.

ಭವ್ಯಶ್ರೀ ಆರ್ ಜೆ

Exit mobile version