ಹಿಜಾಬ್ ವಿವಾದ : ಸುಪ್ರೀಂ ಅರ್ಜಿ ಪರಿಶೀಲಿಸಲು ನಕಾರ!

hijab

ಹಿಜಾಬ್ ವಿವಾದಕ್ಕೆ ಈಗ ಮತ್ತೊಂದು ಹಂತಕ್ಕೆ ಹೋಗಿದ್ದು, ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಹಿಜಾಬ್- ಕೇಸರಿ ವಸ್ತ್ರ ಪ್ರಕರಣದ ಬಗ್ಗೆ ತೀರ್ಪು ಬರುವವರೆಗೂ ಶಾಲೆ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಉಡುಪು ಧರಿಸುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತೀರ್ಪನ್ನು ನೀಡಿತ್ತು. ಆದರೆ ಅದಕ್ಕೆ ಆಸ್ಪದ ಕೊಡದ ಅರ್ಜಿದಾರರು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ.
ಮಧ್ಯಂತರ ಆದೇಶವು ವ್ಯಕ್ತಿಗಳ, ವಿಶೇಷವಾಗಿ ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳ ಆತ್ಮಸಾಕ್ಷಿಯ ಆಯ್ಕೆಯನ್ನು ಪ್ರಶ್ನಿಸಿದೆ ಎಂದು ಅರ್ಜಿದಾರರ ವಿದ್ಯಾರ್ಥಿ ಹೇಳಿದರು.

ಮುಸ್ಲಿಂ ಮಹಿಳೆಯರ ವೃತ್ತಿ ಮತ್ತು ಭವಿಷ್ಯವು ಅತಂತ್ರದಲ್ಲಿದೆ, ಅವರ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ ಎಂದು `ಲೈವ್ ಲಾ’ ವರದಿ ಮಾಡಿದೆ. ತ್ರಿಸದಸ್ಯ ಪೀಠದ ಮುಂದೆ ನಡೆಯುತ್ತಿರುವ ವಿಚಾರಣೆಗಳು ಹಾಗೂ ಹಿಜಾಬ್ ಸಮಸ್ಯೆಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ನ ನಿರ್ದೇಶನಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದೆ.
ಡಾ. ಜೆ ಹಲ್ಲಿ ಮಸ್ಜಿದ್ ಮದಾರಿಸ್ ಮತ್ತು ವಕ್ಫ್ ಸಂಸ್ಥೆಗಳ ಫೆಡರೇಷನ್ ಈ ಅರ್ಜಿ ಸಲ್ಲಿಸಿದೆ. ಕರ್ನಾಟಕ ಹೈಕೋರ್ಟ್ ಗುರುವಾರ ನೀಡಿರುವ ಆದೇಶವು ಮುಸ್ಲಿಂ ವಿದ್ಯಾರ್ಥಿನಿಯರು- ಮಹಿಳೆಯರಿಗೆ ಹಿಜಾಬ್ ಧರಿಸಲು ಹಾಗೂ ಅವರು ತಮ್ಮ ಶಿಕ್ಷಣ ಪಡೆದುಕೊಳ್ಳಲು ಅವಕಾಶ ನೀಡದೆ ಅವರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲು ಮುಂದಾಗಿದೆ ಎಂದು ಆರೋಪಿಸಲಾಗಿದೆ.


ಮಧ್ಯ ಪ್ರದೇಶಕ್ಕೆ ಸುಪ್ರೀಂ ನಕಾರ :
ಹೈ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರಿಗೆ ಮತ್ತೆ ಹಿನ್ನೆಡೆ ಉಂಟಾಗಿದ್ದು, ಹೈ ಕೋರ್ಟ್ ಆದೇಶ ನೀಡುವವರೆಗೂ ನಾವು ಇದನ್ನು ಕೈಗೆತ್ತಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ.

Exit mobile version