New Delhi: ಕೇಂದ್ರ ಚುನಾವಣಾ ಆಯೋಗದ (Election Commission Of India) ಆದೇಶದಂತೆ (Supreme Court Slams SBI) ಚುನಾವಣಾ ಬಾಂಡ್ಗಳ ಕುರಿತು ಮಾಹಿತಿ ಹಂಚಿಕೊಂಡಿದ್ದ
ಎಸ್ ಬಿಐ ಗೆ ತೀವ್ರ ಮುಖಭಂಗ ಉಂಟಾಗಿದೆ.ಅಸಮರ್ಪಕ ಮಾಹಿತಿ ಹಂಚಿಕೊಂಡ ಕಾರಣ ನೀಡಿ ಭಾರತೀಯ ಸ್ಟೇಟ್ ಬ್ಯಾಂಕ್ ಅನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ನಾಳೆ ಮಾರ್ಚ್ 16 ರೊಳಗೆ ಎಲ್ಲಾ ಚುನಾವಣಾ ಬಾಂಡ್ಗಳಲ್ಲಿನ ಸಂಖ್ಯೆಗಳನ್ನು ಪ್ರಕಟಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿದೆ.
ಈ ಸಂಖ್ಯೆಗಳು ದಾನಿಗಳು ಮತ್ತು ರಾಜಕೀಯ ಪಕ್ಷಗಳ ನಡುವಿನ ಸಂಪರ್ಕವನ್ನು ಬಹಿರಂಗಪಡಿಸುತ್ತವೆ, ಅಂದರೆ ಯಾರು ದೇಣಿಗೆ ನೀಡಿದರು ನಿರ್ದಿಷ್ಟವಾಗಿ ಯಾವ ಪಕ್ಷಕ್ಕೆ ನೀಡಿದರು ಎಂಬ ಮಾಹಿತಿ
ಗೊತ್ತಾಗಲಿದೆ. ಮಾರ್ಚ್ 12 ರಂದು, ಎಸ್ಬಿಐ ಬಾಂಡ್ಗಳ ದಾಖಲೆಗಳನ್ನು ಭಾರತೀಯ ಚುನಾವಣಾ ಆಯೋಗಕ್ಕೆ (ECI) ಸಲ್ಲಿಸಿತ್ತು. ಆದರೆ ಅದರಲ್ಲಿ ಮಾಹಿತಿಗಳು ಸಂಪೂರ್ಣವಾಗಿರಲಿಲ್ಲ.
ಚುನಾವಣಾ ಬಾಂಡ್ಗೆ (Election Bond) ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ, ಮಾರ್ಚ್ (March) 11ರ ನ್ಯಾಯಾಲಯದ
ಆದೇಶವನ್ನು ಎಸ್ಬಿಐ ಸಂಪೂರ್ಣವಾಗಿ ಪಾಲಿಸಿಲ್ಲ. ಚುನಾವಣಾ ಬಾಂಡ್ಗಳ ಖರೀದಿ ದಿನಾಂಕ, ಖರೀದಿದಾರರ ಹೆಸರು, ಮುಖಬೆಲೆ ಸೇರಿದಂತೆ ಎಲ್ಲಾ ವಿವರಗಳನ್ನು ನೀಡಲು ಸೂಚಿಸಿತ್ತು. ಆದರೆ ಎಸ್ಬಿಐ
ಬಾಂಡ್ ನಂಬರ್ಗಳನ್ನು ಬಹಿರಂಗಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ (Supreme Court Slams SBI) ಇಂದು ಬ್ಯಾಂಕ್ಗೆ ನೋಟಿಸ್ ನೀಡಿದೆ.
ದತ್ತಾಂಶವನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಿದ ನಂತರ ಚುನಾವಣಾ ಆಯೋಗ ಮುಚ್ಚಿದ ಕವರ್ನಲ್ಲಿ ಸಲ್ಲಿಸಿದ ಚುನಾವಣಾ ಬಾಂಡ್ಗಳ ಡೇಟಾವನ್ನು ಹಿಂತಿರುಗಿಸುವಂತೆ ಅದು ನಿರ್ದೇಶಿಸಿದೆ.
ಈ ಹಿನ್ನೆಲೆಯಲ್ಲಿ ನಾವು ಎಸ್ ಬಿಐ ಗೆ ನೋಟಿಸ್ ನೀಡುತ್ತೇವೆ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಕಳೆದ ತಿಂಗಳು ಚುನಾವಣಾ ಬಾಂಡ್ಗಳ ಯೋಜನೆಯನ್ನು ಸುಪ್ರೀಂ ಕೋರ್ಟ್
ರದ್ದುಗೊಳಿಸಿತು. ಏಪ್ರಿಲ್ 12, 2019 ರಿಂದ ಚುನಾವಣಾ ಬಾಂಡ್ಗಳ ಮೂಲಕ ಕೊಡುಗೆಗಳನ್ನು ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಮಾರ್ಚ್
6ರರೊಳಗೆ ಸಲ್ಲಿಸುವಂತೆ ಎಸ್ಬಿಐಗೆ ನಿರ್ದೇಶಿಸಿತ್ತು. ಆದರೆ ಎಸ್ಬಿಐ ಗಡುವಿನ ವಿಸ್ತರಣೆಯನ್ನು ಕೋರಿ ಅರ್ಜಿ ಸಲ್ಲಿಸಿತು.
ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಎಸ್ಬಿಐ ಮಾಡಿದ ವಿನಂತಿಯನ್ನು ತಿರಸ್ಕರಿಸಿತ್ತು.ಚುನಾವಣಾ ಆಯೋಗದ ಅಂಕಿ ಅಂಶವನ್ನು ನಾಳೆ ಸಂಜೆಯೊಳಗೆ ಹಿಂತಿರುಗಿಸಬೇಕು ಮತ್ತು ಭಾನುವಾರ
ಸಂಜೆಯೊಳಗೆ ಅದನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಇಂದು ನಿರ್ದೇಶಿಸಿದೆ. ಭಾರತೀಯ ಚುನಾವಣಾ ಆಯೋಗ ತನ್ನ ವೆಬ್ಸೈಟ್ನಲ್ಲಿ (Website) ಅಪ್ಲೋಡ್
ಮಾಡಲು ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಸಲ್ಲಿಸಿದ ಚುನಾವಣಾ ಬಾಂಡ್ಗಳ ನಕಲುಗಳನ್ನು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಇದನ್ನು ಓದಿ: ಚುನಾವಣಾ ಬಾಂಡ್ ಪ್ರಕರಣ: ಎಸ್ಬಿಐ ನೀಡಿದ ಸಂಪೂರ್ಣ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿದ ಚುನಾವಣಾ ಆಯೋಗ