New Delhi : ದ್ವೇಷದ ಭಾಷಣಗಳು(Grudge Speech) ರಾಷ್ಟ್ರದ ವಾತಾವರಣವನ್ನು ಕೆಡಿಸುತ್ತವೆ ಮತ್ತು ಅದನ್ನು ತಡೆಯುವ ಅಗತ್ಯವಿದೆ. ದ್ವೇಷದ ಭಾಷಣಗಳು(SupremeCourt About Hate Speech) ಕ್ರಿಮಿನಲ್ ಪಿತೂರಿಯಿಂದ ಕೂಡಿವೆ ಎಂದು ಸುಪ್ರೀಂಕೋರ್ಟ್(SupremeCourt) ಅಭಿಪ್ರಾಯಪಟ್ಟಿದೆ.
ಹರ್ಪ್ರೀತ್ ಮನ್ಸುಖಾನಿ ಸೈಗಲ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ನಡೆಸಿದ, ಭಾರತದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರ ನೇತೃತ್ವದ ನ್ಯಾಯಪೀಠ, ಕೆಲವರು ದ್ವೇಷದ(SupremeCourt About Hate Speech) ಭಾಷಣಗಳಿಂದ ಇಡೀ ದೇಶದ ವಾತಾವರಣವನ್ನು ಕೆಡಿಸುತ್ತಿದ್ದಾರೆ ಮತ್ತು ಇದನ್ನು ತಡೆಯುವ ಅಗತ್ಯವಿದೆ.
ಆದರೆ, ನ್ಯಾಯಾಲಯದ ಗಮನಕ್ಕೆ ಅದನ್ನು ತೆಗೆದುಕೊಳ್ಳಲು ವಾಸ್ತವಿಕ ಹಿನ್ನೆಲೆ ಇರಬೇಕು.
ಭಯೋತ್ಪಾದಕ ಗುಂಪುಗಳೊಂದಿಗೆ ಕೈಜೋಡಿಸಿ, ಭಾರತವನ್ನು ಪೊಲೀಸ್ ರಾಜ್ಯವಾಗಿ ಪರಿವರ್ತಿಸುವ ಮತ್ತು ಸಾಮಾನ್ಯ ಬಲಿಪಶುಗಳ ಮೂಲಕ ನಾಗರಿಕರ ವಿರುದ್ಧ ಯುದ್ಧ ಮಾಡುವ ದೊಡ್ಡ ಪಿತೂರಿ ಇದರ ಹಿಂದೆ ಇರುವ ಸಾಧ್ಯತೆ ಇದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ : https://vijayatimes.com/pm-to-innagurate-at-ujjaini/
ಇನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಪೀಠವು, ಅಕ್ಟೋಬರ್ 31 ರೊಳಗೆ ಪ್ರಶ್ನಾರ್ಹ ಅಪರಾಧ ಮತ್ತು ತನಿಖೆಯ ಸಂದರ್ಭದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಿವರಗಳನ್ನು ನೀಡುವ ಹೆಚ್ಚುವರಿ ಅಫಿಡವಿಟ್ ಅನ್ನು ಸಲ್ಲಿಸಲು ಅರ್ಜಿದಾರ ಸೈಗಲ್ ಅವರಿಗೆ ಸೂಚಿಸಿತು.
ವಿಚಾರಣೆಯ ಸಂದರ್ಭದಲ್ಲಿ, ದ್ವೇಷದ ಭಾಷಣದ ಅಸ್ತ್ರವನ್ನು ಉದ್ದೇಶಪೂರ್ವಕವಾಗಿ ದ್ವೇಷದ ಅಪರಾಧಗಳನ್ನು ಮಾಡಲು ಮತ್ತು 2024ರ ಚುನಾವಣೆಯ ಮೊದಲು ನರಮೇಧ ಮಾಡಲು ಉದ್ದೇಶಪೂರ್ವಕವಾಗಿ ಬಳಸಲಾಗಿದೆ.
ಇದನ್ನು ಜಾರಿಗೆ ತರಲು ಪತ್ರಕರ್ತರು ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರಂತಹ ಪ್ರಸಿದ್ಧ ವ್ಯಕ್ತಿಗಳನ್ನು ಕೊಲ್ಲಲಾಯಿತು ಮತ್ತು ದ್ವೇಷದ ಭಾಷಣಗಳು ನಡೆದವು ಎಂದು ಅರ್ಜಿದಾರರು ಆರೋಪಿಸಿದ್ದಾರೆ. ರಾಷ್ಟ್ರದ ವಿರುದ್ಧ ಮಾಡಿದ ಅಪರಾಧಗಳನ್ನು ಶಿಕ್ಷಿಸುವಂತೆ ನ್ಯಾಯಾಲಯವನ್ನು ಕೋರಲಾಗಿದೆ.
- ಮಹೇಶ್.ಪಿ.ಎಚ್