Bengaluru: ಬೆಂಗಳೂರಿನ (Suspect in Bus Stand) ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ
ಸಂಬಂಧಿಸಿದಂತೆ ವೈಟ್ಫೀಲ್ಡ್ನ ಬ್ರೂಕ್ ಫೀಲ್ಡ್ ಸಮೀಪದ ಸಂಬಂಧ ಸ್ಥಳ ಪರಿಶೀಲನೆ ವೇಳೆ ಬ್ಯಾಟರಿ, ಟೈಮರ್ ಹಾಗೂ ಟೈಮರ್ ಫಿಕ್ಸ್ (Timer Fix)
ಮಾಡಿ ಸ್ಪೋಟಿಸಲು ಬಳಿಸಿದ್ದ ರಾಸಾಯನಿಕಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ, ಶಂಕಿತ ಆರೋಪಿ ಬಸ್ ನಿಲ್ದಾಣದಲ್ಲೇ ಬಾಂಬ್ಗೆ ಟೈಮ್ ಫಿಕ್ಸ್
ಮಾಡುತ್ತಿದ್ದ ವಿಡಿಯೋ (Suspect in Bus Stand) ಲಭ್ಯವಾಗಿದೆ.
ನಿಲ್ದಾಣದಲ್ಲಿ ಯಾವುದೇ ಭಯ ಇಲ್ಲದೆ ಜನರ ಮುಂದೆಯೇ ಟೈಮ್ ಸೆಟ್ (Time Set) ಮಾಡಿದ್ದಾನೆ. ಈ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಲ್ಲದೆ, ಇತರೆಡೆ ಸಂಚರಿಸುತ್ತಿರುವ ವಿಡಿಯೋ ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶಂಕಿತ ಬಾಂಬರ್ ಮಾರ್ಚ್ (March) 1 ರಂದು ಬಸ್ ನಿಲ್ದಾಣಕ್ಕೆ
ಬಂದು ಬೆಳಗ್ಗೆ 10.43ಕ್ಕೆ ಬಾಂಬ್ಗೆ ಟೈಮರ್ ಸೆಟ್ ಮಾಡಿದ್ದಾನೆ.
ಶುಕ್ರವಾರ ಬೆಳಗ್ಗೆ 10 ಗಂಟೆ 40 ನಿಮಿಷಕ್ಕೆ ಬಿಎಂಟಿಸಿ ವೋಲ್ವೋ ಬಸ್ನಲ್ಲಿ ಬಂದಿದ್ದ ಶಂಕಿತ ಉಗ್ರ, ರಾಮೇಶ್ವರಂ ಕೆಫೆಯ ಬಳಿ ಬಸ್ ನಿಲ್ದಾಣದಲ್ಲಿ ಇಳಿದು
ಕೆಫೆಗೆ ತೆರಳಿ ಬಾಂಬ್ (Bomb) ಇಟ್ಟು ಬಂದಿದ್ದ. ಆದರೆ ಬಾಂಬ್ ಇಟ್ಟಾದಮೇಲೆ ಮಾರ್ಗ ಬದಲಿಸಿದ್ದ ಆತ, ಬೇರೆ ಮಾರ್ಗವಾಗಿ ತೆರಳಿದ್ದ.
ಬ್ಯಾಟರಿ, ಟೈಮರ್, ಕೆಮಿಕಲ್ಸ್ ಪತ್ತೆ
ಈಗಾಗಲೇ ಸ್ಫೋಟಗೊಂಡ ಸ್ಥಳದಲ್ಲಿ ಬ್ಯಾಟರಿ (Battery) ಜೊತೆಗೆ ಟೈಮರ್ ಪತ್ತೆಯಾಗಿತ್ತು. ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ
ಸಂಬಂಧ ಸ್ಥಳ ಪರಿಶೀಲನೆ ಮುಂದುವರಿಸಲಾಗಿದೆ. ಬಳಿಕ ಟೈಮರ್ ಫಿಕ್ಸ್ ಮಾಡಿ ಸ್ಪೋಟಿಸಲು ಬಳಿಸಿದ್ದ ರಾಸಾಯನಿಕಗಳು ಪತ್ತೆಯಾಗಿವೆ.
ಟೈಮರ್ ಫಿಕ್ಸ್ ಮಾಡಿ ಸ್ಪೋಟಿಸಲು ಈ ರಾಸಾಯನಿಕಗಳನ್ನು ಬಳಕೆ ಮಾಡಲಾಗಿದೆ. ಸದ್ಯ, ಸ್ಫೋಟದ ಅವಶೇಷಗಳ ಮಾದರಿಗಳನ್ನು ಎಫ್ಎಸ್ಎಲ್
(FSL) ಮತ್ತು ಸೋಕೋ ಟೀಂ ಸಂಗ್ರಹಿಸಿದೆ. ಪೊಟ್ಯಾಷಿಯಂ ನೈಟ್ರೇಟ್ ಮತ್ತು ಹೈಡ್ರೋಜನ್ ಪರಾಕ್ಸೈಡ್ ಬಳಸಿ ಕೃತ್ಯ ಎಸಗಲಾಗಿದೆ.
ಇದನ್ನು ಓದಿ: ಹೋಟೆಲ್ ಮಾಲೀಕರೇ ಎಚ್ಚರ: ಬೆಂಗಳೂರಿನ ಹೋಟೆಲ್ಗಳಲ್ಲಿ ಜಾರಿಯಾಗಲಿವೆ ಕಠಿಣ ಭದ್ರತಾ ನಿಯಮಗಳು