ಶಂಕಿತ ಉಗ್ರರ ಟಾರ್ಗೆಟ್ಟೇ BMTC ಬಸ್‌, ಸ್ಫೋಟಿಸಲು 4 ವಾಕಿಟಾಕಿ ಬಳಕೆ: ಬೆಚ್ಚಿಬೀಳಿಸೋ ರಹಸ್ಯ ಬಯಲು

Bengaluru: ಜುಲೈ 20: ಸಿಸಿಬಿ ಪೊಲೀಸರು(CCB Police) ಐವರು ಭಯೋತ್ಪಾದಕ ಶಂಕಿತರನ್ನು ಸೆರೆಹಿಡಿದು ಮೂರನೇ ದಿನವಾಗಿದೆ. (suspected terrorists target BMTC) ಸಿಸಿಬಿ ತನಿಖೆಯಲ್ಲಿ

ಇದೀಗ ಈ ಪ್ರಕರಣ ಬಗೆದಷ್ಟು ಸ್ಫೋಟಕ ರಹಸ್ಯಗಳು ಒಂದೊಂದಾಗಿ ಬಯಲಾಗುತ್ತಲೇ ಇವೆ. ಮೊದಲ ದಿನ ಆರೋಪಿಯ ಬಳಿ ಪಿಸ್ತೂಲ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿದ್ದು, ನಾಲ್ಕು

ವಾಕಿಟಾಕಿಗಳು(Walkie Talkie) ಪತ್ತೆಯಾಗಿವೆ.

ಆದರೆ ವಾಕಿಟಾಕಿಗಳ ಪರಿಶೀಲನೆ ವೇಳೆ ಇದೀಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಸಿಕ್ಕಿರುವ ಗ್ರೆನೇಡ್​​ಗಳ (suspected terrorists target BMTC) ಕಥೆ ಬೆಂಗಳೂರಿಗರನ್ನು

(Bengaluru) ಬೆಚ್ಚಿ ಬೀಳಿಸಿದೆ ಅದರ ಜೊತೆಗೆ ಇದೀಗ ಈ ಮಾಹಿತಿ ಕೇಳಿದರೆ ಒಂದು ಕ್ಷಣ ಎದೆ ಬಡಿತ ನಿಂತ ಹಾಗೆ ಆಗುವುದು ನಿಜ ಏಕೆಂದರೆ ಒಂದು ವೇಳೆ ಶಂಕಿತನು ಮಾಡಿದ

ಯೋಜನೆಯು ಕಾರ್ಯರೂಪಕ್ಕೆ ಬಂದುಬಿಟ್ಟಿದ್ದರೆ ಎಂದು ಊಹಿಸಲು ಕೂಡ ಅಸಾಧ್ಯವಾಗಿದೆ.

ಮೊದಲ ದಿನ ಪೊಲೀಸರಿಗೆ 45 ಜೀವಂತ ಗುಂಡುಗಳು, ಏಳು ಪಿಸ್ತೂಲ್‌ಗಳು, 15 ಮೊಬೈಲ್ ಫೋನ್‌ಗಳು, 20 ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಮತ್ತು ನಾಲ್ಕು ವಾಕಿ-ಟಾಕಿಗಳು ಸಿಕ್ಕಿವೆ.

ಆದರೆ ಪೊಲೀಸರಿಗೆ ಸಿಕ್ಕಿದ್ದು ಅಸಲಿ ವಾಕಿಟಾಕಿಗಳಾ? ಅಷ್ಟಕ್ಕೂ, ಈ ವಾಕಿಟಾಕಿಗಳಿಂದ ಏನು ಪ್ರಯೋಜನ? ಏನಕ್ಕೆ ಬಳಕೆ ಮಾಡಲು ತಂದಿರಬಹುದು. ಇದರ ರೇಂಜ್ ಏನು?

ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಪರಿಶೀಲಿಸಲು ಅಲ್ಲಿಗೆ ತೆರಳಿದ ಸಿಸಿಬಿ ಕೂಡ ಆತಂಕ ಗೊಂಡಿದ್ದಾರೆ ಏಕೆಂದರೆ ಸಿಕ್ಕಿದ ವಾಕಿಟಾಕಿ ನಿಜವಾದ ವಾಕಿಟಾಕಿ ಅಲ್ಲ.

IED ಬಾಂಬ್ ಸ್ಫೋಟಕ್ಕೆ (Bomb Blast) ಬಳಸುವ ಟ್ರಿಗರ್​ಗಳು (Trigger).

ವಾಕಿಟಾಕಿ ರಹಸ್ಯ

ಈಗಾಗಲೇ 4 ಗ್ರೆನೇಡ್ ಶಂಕಿತರ ಮನೆಯಲ್ಲಿ ಸಿಕ್ಕಿರುವುದು ಆತಂಕಕಾರಿ ಸಂಗತಿ. ಆದರೆ, ಅದಕ್ಕಿಂತ ಅಪಾಯಕಾರಿ ಸಂಗತಿ ಏನೆಂದರೆ 4 ವಾಕಿಟಾಕಿ ಪತ್ತೆಯಾಗಿರುವುದು. ಆದರೆ ಯಾವುದೇ

ಸಂವಹನ ನಡೆಸಲು ಈ 4 ವಾಕಿಟಾಕಿ ಬಳಸಿಲ್ಲ ಬದಲಾಗಿ ಬಾಂಬ್ ಆಪರೇಟ್‌ ಮಾಡುವುದಕ್ಕೆ. ಚೀನಾ (China) ನಿರ್ಮಿತ 4 ವಾಕಿಟಾಕಿ ಇದಕ್ಕಾಗಿಯೇ ಶಂಕಿತರ ಕೈಸೇರಿತ್ತು.

ಬಿಎಂಟಿಸಿ ಬಸ್ ಸ್ಫೋಟಕ್ಕೆ ಪ್ಲ್ಯಾನ್

ಶಂಕಿತರು ಈ ವಾಕಿಟಾಕಿಗಳನ್ನು ಟ್ರಿಗರ್ ಆಗಿ ಬದಲಾವಣೆ ಮಾಡಿದ್ದರು. ವಾಕಿಟಾಕಿಯನ್ನು ರಿಮೋಟ್ (Remote) ರೂಪದಲ್ಲಿ ಬಳಕೆಗೆ ಸಂಚು ಮಾಡಿದ್ದರು. ಬೆಂಗಳೂರಿನಲ್ಲಿ ಬಸ್‌ಗಳಲ್ಲಿ

(Bengaluru Bus) ಸ್ಫೋಟ ಮಾಡಲು ಇದರ ಜೊತೆಗೆ ತಯಾರಿ ನಡೆಸುತ್ತಿದ್ದರು. ಅದರಲ್ಲೂ ಶಂಕಿತರು ಮುಖ್ಯವಾಗಿ ಬಿಎಂಟಿಸಿ ಬಸ್ (BMTC Bus)ಸ್ಫೋಟಿಸಲು ಪ್ಲಾನ್ ಮಾಡಿಕೊಂಡಿದ್ದರು.

ಇದನ್ನು ಓದಿ: ನಗ್ನ ಮೆರವಣಿಗೆ ಮಾಡಿ ಅತ್ಯಾಚಾರಗೈದ ಗುಂಪಿಗೆ ನಮ್ಮನ್ನು ಒಪ್ಪಿಸಿದ್ದೇ ಪೊಲೀಸರು: ಮಣಿಪುರ ಸಂತ್ರಸ್ತೆಯ ದೂರು

ವಾಕಿಟಾಕಿಗೆ ಗ್ರೆನೇಡ್‌ಗಳನ್ನು ಆಪರೇಟ್ ಮಾಡಲು ಟ್ರಿಗರ್ ಮಾಡಿದ್ದರು. ಅವರ ಪ್ಲಾನ್ ಸಣ್ಣದಾದ್ರೂ ದೊಡ್ಡ ಪರಿಣಾಮ ಬೀರುವಂತೆ ಸಂಚು ಮಾಡಿದ್ದರು ಎಂಬ ಬೆಚ್ಚಿ ಬೀಳಿಸುವ ಸಂಗತಿ ತನಿಖೆಯಲ್ಲಿ ಬಯಲಾಗಿದೆ.

ಶಸ್ತ್ರಾಸ್ತ್ರಗಳ ಶೇಖರಣೆಗೆ ಪ್ಲ್ಯಾನ್

ಕರ್ನಾಟಕ(Karnataka) ಸ್ಫೋಟಕ್ಕೆ ಶಂಕಿತ ಉಗ್ರರು ಸಂಚು ರೂಪಿಸಿದ್ದರು. ಇದಕ್ಕಾಗಿ ಶಸ್ತ್ರಾಸ್ತ್ರಗಳ ಶೇಖರಣೆಗೆ ದೊಡ್ಡ ಪ್ರಮಾಣದಲ್ಲಿ ಪ್ಲ್ಯಾನ್ ಮಾಡಿಕೊಂಡಿದ್ದರು.ಶಸ್ತ್ರಾಸ್ತ್ರಗಳ ಶೇಖರಣೆಯನ್ನು

ಓರ್ವ ಶಂಕಿತನ ಮನೆಯಲ್ಲಿ ಮಾಡುವಂತೆ ನಿರ್ಧಾರ ಮಾಡಿದ್ದರು. ಬಾಂಬ್‌ಗಳನ್ನೂ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಬರುತ್ತಿದ್ದ ಶಸ್ತ್ರಾಸ್ತ್ರಗಳನ್ನು ಸಹ ಶೇಖರಿಸಿ ಇಡುತ್ತಿದ್ದರು. ಕರ್ನಾಟಕದಲ್ಲಿ

ವಿಧ್ವಂಸಕ ಕೃತ್ಯಕ್ಕೆ ಬಳಕೆಯಾಗುವಷ್ಟು ಬಾಂಬ್ ಶೇಖರಿಸುತ್ತಿದ್ದರು.ಐವರು ಶಂಕಿತ ಉಗ್ರರ ವಿಚಾರಣೆಯನ್ನು ಉಗ್ರರ ಸಂಚು ಬಯಲಾದ ಕೂಡಲೇ ಸಿಸಿಬಿ ತೀವ್ರಗೊಳಿಸಿದೆ.

ಅವರು ಶಸ್ತ್ರಾಸ್ತ್ರಗಳನ್ನ ಎಲ್ಲೆಲ್ಲಿಂದ ತರಿಸಿಕೊಳ್ಳುತ್ತಿದ್ದರು ಎಂಬ ಆಯಾಮದಲ್ಲಿ ತನಿಖೆ ಮಾಡುತ್ತಿದೆ.

ನೀಚ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಆರೋಪಿಗಳು

ಟಿ. ನಜೀರ್, ಸದ್ಯ ಜೈಲಿನಲ್ಲಿದ್ದಾನೆ
ಸುಹೇಲ್, ಬಂಧನ
ಜುನೈದ್, ಪರಾರಿಯಾಗಿದ್ದಾನೆ.
ಜಾಹಿದ್, ಬಂಧನ
ಉಮರ್, ಬಂಧನ
ಫೈಜರ್, ಬಂಧನ
ಮುದಾಸಿರ್, ಬಂಧನ

ಶಂಕಿತರ ಬಳಿ ಇದ್ದ 42 ಸಜೀವ ಗುಂಡುಗಳು, 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 2 ಡ್ರ್ಯಾಗರ್, ಮದ್ದುಗುಂಡು, 2 ಸ್ಯಾಟಲೈಟ್ ಫೋನ್ ಹಾಗೂ 4 ಗ್ರೆನೇಡ್ ವಶಕ್ಕೆ ಪಡೆಯಲಾಗಿದೆ.

ರಶ್ಮಿತಾ ಅನೀಶ್

Exit mobile version