Shivamogga: ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ್ದ ಎರಡು (Suspicious box in Shimoga) ಅನುಮಾನಾಸ್ಪದ ಬಾಕ್ಸ್ ಪತ್ತೆ ಪ್ರಕರಣ ಅಂತೂ ಸುಖಾಂತ್ಯ ಕಂಡಿದ್ದು,
ಆದರೆ ಬಾಕ್ಸ್ ನಲ್ಲಿದ್ದ (Box) ವಸ್ತುಗಳು ಸ್ನೋ-ಪೌಡರ್ ಅಂತೂ ಅಲ್ಲ ಎಂದು ಶಿವಮೊಗ್ಗ ಶಾಸಕ ಎಸ್.ಎನ್ ಚನ್ನಬಸಪ್ಪ (S.N.Channabasappa) ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ
ಕಾರ್ಯಾಚರಣಗೆ 12 ಗಂಟೆ ಕಾಲಾವಕಾಶ ತೆಗದುಕೊಂಡಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕಾರ್ಯಾಚರಣೆಗಳು ತ್ವರಿತವಾಗಿ ನಡೆಯಬೇಕು ಎಂದಿದ್ದಾರೆ.

ಭಾನುವಾರ ಮುಂಜಾನೆ ಬೆಂಗಳೂರು- ಶಿವಮೊಗ್ಗ ಎಕ್ಸ್ಪ್ರೆಸ್ (Express) ರೈಲಿಗೆ ಬರುವ ಪ್ರಯಾಣಿಕರನ್ನ ಪಿಕ್ ಅಪ್ ಮಾಡಲು, ಶಿವಮೊಗ್ಗ ಮುಖ್ಯ ರೈಲ್ವೇ ನಿಲ್ದಾಣಕ್ಕೆ ಸಾಕಷ್ಟು ಆಟೋ ಚಾಲಕರು
ಬರುತ್ತಾರೆ. ಹಾಗೆ ಬಂದವರಲ್ಲಿ ಸಯ್ಯದ್ ಕಾಕ ಎಂಬಾತ ಶನಿವಾರ ನೋಡಿದ್ದ ಬಾಕ್ಸ್ ಗಳು ಭಾನುವಾರ ಮುಂಜಾನೆವರೆಗೂ ನಿಲ್ದಾಣದ ಮುಂಭಾಗ ಇರುವುದನ್ನ ನೋಡಿ ಅನುಮಾನ ವ್ಯಕ್ತಪಡಿಸಿದ್ದರು
ಸ್ವಲ್ಪ ಸಮಯದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಜಯನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ, ಮೇಡ್ ಇನ್ ಬಾಂಗ್ಲಾದೇಶ್ ಎಂಬ ಹೆಸರಲ್ಲಿ ಗೋಣಿ ಚೀಲದದಿಂದ ಮುಚ್ಚಿದ ಎರಡು
ಟ್ರಂಕ್ ಇರುವುದು ತಿಳಿದಿದೆ. ತಕ್ಷಣ ಮೆಟಲ್ ಡಿಟೆಕ್ಟೀವ್ (Metal Detective) , ಡಾಗ್ ಸ್ಕ್ವಾಡ್ (Dog Squad) ಕರೆಸಿ, ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ಪರಿಶೀಲನೆ ನಡೆಸಿ ಮರಳು ಚೀಲಗಳನ್ನ
ತರಿಸಿ ಸುತ್ತಲೂ ಇಟ್ಟು, ಬೆಂಗಳೂರಿನಿಂದ ಬರಬೇಕಿರುವ ಬಾಂಬ್ ನಿಷ್ಕ್ರಿಯ (Suspicious box in Shimoga) ದಳಕ್ಕೆ ಕಾಯತೊಡಗಿದರು.
ಬೆಳಕಿನ ವ್ಯವಸ್ಥೆ ಮಾಡಿಕೊಂಡು ಸುಮಾರು ಎಂಟು ಗಂಟೆಗೆ ಆಗಮಿಸಿದ ನಿಷ್ಕ್ರಿಯ ದಳ, ಕಾರ್ಯಾಚರಣೆ ತಯಾರಿಯನ್ನ ಬೆಂಗಳೂರು- ಶಿವಮೊಗ್ಗ (Bengaluru-Shivamogga) ಜನಶತಾಬ್ದಿ
ರಾತ್ರಿ 9.30ಕ್ಕೆ ತಲುಪಿದ ಮೇಲೆ, ಜನರಿಲ್ಲದ ವೇಳೆ ಕಾರ್ಯಾಚರಣೆ ನಡೆಸುವ ಆಲೋಚನೆ ಮಾಡಿಕೊಂಡರು. ಆಗಲೇ ಮಳೆ ಧೋ ಎಂದು ಸುರಿಯಲಾರಂಭಿಸಿತು. ಮಧ್ಯ ರಾತ್ರಿವರೆಗೂ ಮಳೆ,
ಪರಿಶೀಲನೆಯೇ ಆಯ್ತು.

ಮುಂಜಾನೆ.2.40ರ ಸುಮಾರಿಗೆ, ಒಂದು ಬಾಕ್ಸ್ ಒಡೆಯಲು ದೂರದಿಂದ ವೈರ್ ಅಳವಡಿಸಿ ಸ್ಫೋಟಿಸಿದರು. ಬ್ಯಾಗ್ ನೊಳಗೆ ಬಿಳಿ ಬಣ್ಣದ ಪೌಡರ್ ಪತ್ತೆಯಾಯ್ತು. ಬಳಿಕ ಮಧ್ಯ ರಾತ್ರಿ 3.24 ಕ್ಕೆ ಎರಡನೇ
ಬಾಕ್ಸ್ ನ ಬೀಗ ಸ್ಫೋಟಿಸಲಾಯ್ತು. ಎರಡನೇ ಬಾಕ್ಸ್ ಲ್ಲೂ ಪೇಪರ್ ಹಾಗೂ ಎರಡು ಬ್ಯಾಗ್ ಗಳು ಪತ್ತೆಯಾಗಿವೆ. ಬ್ಯಾಗ್ ಅಲ್ಲಿ ಸಿಕ್ಕ ಬಿಳಿ ಬಣ್ಣದ ಪೌಡರ್, ಎಫ್ಎಸ್ಎಲ್ (FSL) ಗೆ ಕಳುಹಿಸಿದ್ದಾರೆ
ಇದನ್ನು ಓದಿ: ಮನೆಯ ಪೀಠೋಪಕರಣ ಖರೀದಿಗೆ 3 ಕೋಟಿ ; ಸಿದ್ದು ಸಮಾಜವಾದಿಯಲ್ಲ ; ಮಜಾವಾದಿ ಎಂದ ಬಿಜೆಪಿ!
- ಭವ್ಯಶ್ರೀ ಆರ್ ಜೆ